ಬಳ್ಳಾರಿ

ಆಟೋ ಚಾಲಕರ,ಮಾಲೀಕರ ಸಂಘದಿಂದ ಕನ್ನಡ ರಾಜ್ಯೋತ್ಸವ

ಆಟೋ ಚಾಲಕರ,ಮಾಲೀಕರ ಸಂಘದಿಂದ ಕನ್ನಡ ರಾಜ್ಯೋತ್ಸವ

ಬಳ್ಳಾರಿ 01:  ಜಿಲ್ಲಾ ಆಟೋ ಚಾಲಕರ ಮತ್ತು ಮಾಲೀಕರ ಸಂಘದ ವತಿಯಿಂದ 67ನೇ ಕನ್ನಡ ರಾಜ್ಯೋತ್ಸವವನ್ನು ನಗರದ ಕಣೇಕಲ್ ಬಸ್ ನಿಲ್ದಾಣದಲ್ಲಿರುವ ಆಟೋ ನಿಲ್ದಾಣದಲ್ಲಿ ಆಟೋ ಚಾಲಕರ ಮತ್ತು ಮಾಲೀಕರ ಸಂಘದ ಜಿಲ್ಲಾಧ್ಯಕ್ಷರು ಹಾಗೂ ಐಎನ್ಟಿಯುಸಿ ಜಿಲ್ಲಾಧ್ಯಕ್ಷ ಕೆ.ತಾಯಪ್ಪನವರ ನೇತೃತ್ವದಲ್ಲಿ ಅದ್ಧೂರಿಯಾಗಿ ಆಚರಿಸಲಾಯಿತು. 

9ನೇ ವಾರ್ಡ್  ಮಹಾನಗರ ಪಾಲಿಕೆ ಸದಸ್ಯ ಜಬ್ಬಾರ್ಸಾಬ್ ಕನ್ನಡ ಅಭಿಮಾನಿಗಳ ಎಲ್ಲಾ ಸಾರ್ವಜನಿಕರು ಮತ್ತು ಶಾಲಾ ಮಕ್ಕಳು ಕಮ್ಮರಚೇಡು ಮಠದ ಪರಮಪೂಜ್ಯ ಮ.ನಿ.ಪ್ರ. ಕಲ್ಯಾಣ ಸ್ವಾಮಿಗಳ ಸಾನಿಧ್ಯದಲ್ಲಿ ಕನ್ನಡ ಭುವನೇಶ್ವರಿ ದೇವಿಯ ಭಾವಚಿತ್ರಕ್ಕೆ ಪೂಜೆ ನೆರವೇರಿಸುವುದರ ಮೂಲಕ ಕನ್ನಡ ಘೋಷಗಳನ್ನು ಕೂಗುತ್ತಾ ಸಂಭ್ರಮದಿಂದ ಆಚರಿಸಲಾಯಿತು. ನಂತರ ಎಲ್ಲರಿಗೂ ಪ್ರಸಾದ ವಿತರಿಸಲಾಯಿತು. ಇದೇ ರೀತೀ ಹೆಚ್.ಆರ್.ಗವಿಯಪ್ಪ ವೃತ್ತ, ಬುಡಾ ವೃತ್ತ, ಕೌಲ್ಬಜಾರ್ನ ಕೂನಿಟಾನಿ ಮಸೀದಿ ಮತ್ತು ಅಂಜನಾ ಲ್ಯಾಬ್ ಹತ್ತಿರವಿರುವ ಆಟೋ ನಿಲ್ದಾಣಗಳಲ್ಲಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು ಎಂದು ಜಿಲ್ಲಾಧ್ಯಕ್ಷ ಕೆ.ತಾಯಪ್ಪ ತಿಳಿಸಿದರು. ಸ್ಟ್ಯಾಂಡ್ ಲೀಡರ್ಗಳಾದ ಕೆ.ಗಾದಿಲಿಂಗ,  ಬಿ.ಮಲ್ಲಿಕಾಜರ್ುನ, ಬಿ.ನಾಗರಾಜ, ವಿ.ಬಾಬು, ಷಾಷಾವಲಿ, ಅಮೀರ್, ವೇಣುಗೋಪಾಲರೆಡ್ಡಿ, ದಾನವೇಂದ್ರರೆಡ್ಡಿ, ಖಾಜಾ, ಹನುಮಂತ, ಗಂಗಯ್ಯ, ಗಾದಿಲಿಂಗ, ಗವಿಸಿದ್ದ, ಪೆದ್ದನ್ನ, ಗುರುರಾಜ, ರಾಮ, ರವಿ, ನರಸಿಂಹಾರೆಡ್ಡಿ ಸೇರಿದಂತೆ ಹಲವಾರು ಮುಖಂಡರು ಉಪಸ್ಥಿತರಿದ್ದರು.


 

ಸುದ್ದಿ ಓದಿ