ಹಗರಿಬೊಮ್ಮನಹಳ್ಳಿ

ಕನಕದಾಸರ ಆರಾಧಕರನ್ನು ವಂಚಿಸುವವರನ್ನು ತಿರಸ್ಕರಿಸೋಣ: ಮುಟುಗನಹಳ್ಳಿ ಕೊಟ್ರೇಶ್

ಕನಕದಾಸರ ಆರಾಧಕರನ್ನು ವಂಚಿಸುವವರನ್ನು ತಿರಸ್ಕರಿಸೋಣ: ಮುಟುಗನಹಳ್ಳಿ ಕೊಟ್ರೇಶ್

ಹಗರಿಬೊಮ್ಮನಹಳ್ಳಿ.ಜ.17:  ಭಕ್ತ ಕನಕದಾಸರು 500 ವರ್ಷಗಳ ಹಿಂದೆ ವಚನ ಸಾಹಿತ್ಯದ ಮೂಲಕ ಸಮಾನತೆಯ ಸಂದೇಶ ಸಾರಿದ್ದರು. ಅವರ ಹಾದಿಯಲ್ಲಿ ನಾವು ಸಾಗುತ್ತ ಎಲ್ಲಾ ಜಾತಿಯ ಜನರನ್ನು ಗೌರವಿಸೋಣ. ಕನಕದಾಸರ ಆರಾಧಕರಾದ ನಮ್ಮ ಕುರುಬ ಜಾತಿಯವರಿಗೆ ಮೋಸ ಮಾಡಿದ ಜನಪ್ರತಿನಿಧಿಯನ್ನು ಈ ಬಾರಿ ತಿರಸ್ಕರಿಸೋಣ ಎಂದು ಕುರುಬ ಸಮಾಜದ ಹಿರಿಯ ಮುಖಂಡ ಮುಟುಗನಹಳ್ಳಿ ಕೊಟ್ರೇಶ್ ಹೇಳಿದರು.  

ತಾಲೂಕಿನ ಕೆಚ್ಚಿನಬಂಡಿ ಗ್ರಾಮದಲ್ಲಿ ಭಕ್ತ ಕನಕದಾಸ ಸಂಘ ಉದ್ಘಾಟನೆ ಮತ್ತು ನಾಮಫಲಕ ಅನಾವರಣ ಮಾಡಿ ಮಾತನಾಡುತ್ತ ಕುರುಬರ ಮತ ಪಡೆದು ಕುರುಬರ ಭೂಮಿಯನ್ನು ನುಂಗಿ ಹಾಕಿ ಮೋಸ ಮಾಡುವ ಜನರ ವಿರುದ್ಧ ನಾವು ಹೋರಾಡೋಣ. ನಮ್ಮ ಸಮಾಜದ ಅಮಾಯಕ ಜನರನ್ನು ದುರುಪಯೋಗ ಮಾಡಿಕೊಂಡವರ ಹಣೆಬರಹವನ್ನು ನಮ್ಮ ಮತಗಳಿಂದ ಬದಲಾಯಿಸೋಣ ಎಂದು ಶಾಸಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. 

ಕಾರ್ಯಕ್ರಮದಲ್ಲಿ 12 ಜನ ಕುರುಬ ಸಮಾಜದ ಸರ್ಕಾರಿ ನೌಕರರನ್ನು ಸನ್ಮಾನಿಸಲಾಯಿತು. ವೇದಿಕೆ ಸಾನಿಧ್ಯವನ್ನು ವಹಿಸಿದ್ದ ಡಾ.ಮಹೇಶ್ವರ ಸ್ವಾಮಿಗಳು ಹಾಗೂ ಉತ್ತಂಗಿ ಮಠದ ಸೋಮಶೇಖರ ದೇವರು ಆಶೀರ್ವಚನ ನೀಡಿದರು.  

ಷಡಕ್ಷರಿ ಸ್ವಾಮಿ, ಚನ್ನಬಸವ ಸ್ವಾಮಿ, ತಾಲೂಕು ಕುರುಬರ ಸಂಘದ ಅಧ್ಯಕ್ಷ ಬುಡ್ಡಿ ಬಸವರಾಜ, ಕೊಟ್ರಯ್ಯ ಒಡೆಯರ್, ಕನಕಗುರು ಪೀಠದ ಧರ್ಮದರ್ಶಿ ಬಣಕಾರ ಗೋಣೆಪ್ಪ, ಟಿ.ಮಹೇಶ್, ಮೋರನಾಳ್ ಗುರುಸಿದ್ದಪ್ಪ, ಗುರುಬಸಪ್ಪ, ಕೊಟ್ರೇಶ್, ದೇವೇಂದ್ರ​‍್ಪ, ಸಂಘದ ಅಧ್ಯಕ್ಷ ಬಿ.ಜಗದೀಶ್, ಸಂತೋಷ್, ಎ.ಹನುಮಂತ, ಪಚ್ಚಿ ಸುರೇಶ್, ಶೇಖರ​‍್ಪ, ಜಿ.ನಾಗರಾಜ, ವಾಲ್ಮೀಕಿ ಸಮಾಜದ ಮುಖಂಡರಾದ ಕೋಡಿಹಳ್ಳಿ ಮಂಜುನಾಥ, ಟಿ.ರಮೇಶ್, ಕೆ.ಹನುಮಂತಪ್ಪ, ಹೆಚ್‌.ಕೆಂಚಪ್ಪ ಇದ್ದರು. 


ಸುದ್ದಿ ಓದಿ