ಮನರಂಜನೆ

ಕೆಸಿಎನ್ಸಿ ನಿಧನ ತುಂಬಲಾರದ ನಷ್ಟ: ಚಲನಚಿತ್ರ ವಾಣಿಜ್ಯ ಮಂಡಳಿ

ಕೆಸಿಎನ್ಸಿ  ನಿಧನ ತುಂಬಲಾರದ ನಷ್ಟ: ಚಲನಚಿತ್ರ ವಾಣಿಜ್ಯ ಮಂಡಳಿ

 ಬೆಂಗಳೂರು, ಜೂನ್ 14:  ಹಿರಿಯ ನಿರ್ಮಾಪಕ ಹಾಗೂ ಕರ್ನಾಟಕ  ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷರಾದ ಕೆಸಿಎನ್  ಚಂದ್ರಶೇಖರ್ ನಿಧನಕ್ಕೆ ಕರ್ನಾಟಕ ಚಲನಚಿತ್ರ  ವಾಣಿಜ್ಯ ಮಂಡಳಿ ಕಂಬನಿ ಮಿಡಿದಿದೆ. ಹುಲಿಯ ಹಾಲಿನ ಮೇವು, ಶರಪಂಜರ, ಬಬ್ರುವಾಹನ, ಅಂತ ಸೇರಿದಂತೆ ಸದಭಿರುಚಿಯ ಚಿತ್ರಗಳನ್ನು ನೀಡಿದ್ದ ಕೆ.ಸಿ.ಎನ್ ಚಂದ್ರಶೇಖರ್ ಅವರು ವಿತರಕರಾಗಿ ಹಾಗೂ ಪ್ರದರ್ಶಕರಾಗೂ ಹೆಸರಾದವರು. ಇವರ ನಿಧನ ಕನ್ನಡ ಚಿತ್ರೋದ್ಯಮಕ್ಕೆ ತುಂಬಲಾರದ ನಷ್ಟ ಅವರ ಆತ್ಮಕ್ಕೆ ಭಗವಂತ ಸದ್ಗತಿ ನೀಡಲಿ ಎಂದು ಪ್ರಾರ್ಥಿಸುತ್ತೇವೆ ಎಂದು ವಾಣಿಜ್ಯ ಮಂಡಳಿ ಅಧ್ಯಕ್ಷ ಜೈರಾಜ್, ಸಂತಾಪ ಸೂಚಕ ಸಂದೇಶದಲ್ಲಿ ತಿಳಿಸಿದ್ದಾರೆ.

 

ಸುದ್ದಿ ಓದಿ