ಮನರಂಜನೆ

“ಕರ್ವ-3” ಚಿತ್ರದಲ್ಲಿ ರಾಗಿಣಿ ದ್ವಿವೇದಿ : ಏಪ್ರಿಲ್ ನಿಂದ ಚಿತ್ರೀಕರಣ

“ಕರ್ವ-3” ಚಿತ್ರದಲ್ಲಿ ರಾಗಿಣಿ ದ್ವಿವೇದಿ : ಏಪ್ರಿಲ್ ನಿಂದ ಚಿತ್ರೀಕರಣ

ಬೆಂಗಳೂರು, ಫೆ 25 : ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿ ಸುಮಾರು ನಾಲ್ಕು ತಿಂಗಳ ಕಾಲ ಜೈಲಿನಲ್ಲಿದ್ದು, ಜಾಮೀನು ಪಡೆದು ಹೊರಬಂದಿರುವ  ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ ಹೊಸ ಸಿನಿಮಾಗೆ ಸಹಿ ಮಾಡಿದ್ದಾರೆ.ಶ್ರೀ ಸ್ವರ್ಣಲತಾ ಪ್ರೊಡಕ್ಷನ್ಸ್​ ಬ್ಯಾನರ್​ನಡಿಯಲ್ಲಿ ನಿರ್ಮಾಪಕ ಕೃಷ್ಣ ಚೈತನ್ಯ ನಿರ್ಮಿಸುತ್ತಿರುವ ‘ಕರ್ವ-3’ ಸಿನಿಮಾದಲ್ಲಿ ವಿಭಿನ್ನ ಹಾಗೂ ಮುಖ್ಯ ಪಾತ್ರದಲ್ಲಿ ರಾಗಿಣಿ ನಟಿಸಲಿದ್ದಾರೆ. ವಿಶಾಲ್​ ಶೇಖರ್​ ಆ್ಯಕ್ಷನ್​ ಕಟ್​ ಹೇಳಲಿದ್ದು, ರಾಗಿಣಿ ದ್ವಿವೇದಿ, ನಟಿ ಮೇಘನಾ ಗಾಂವ್ಕರ್​ ಹಾಗೂ ತಿಲಕ್​ ಶೇಖರ್​ ‘ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.ಚಿತ್ರದಲ್ಲಿ ನಟಿಸುವ ಕುರಿತು ನಿರ್ಮಾಪಕರಾದ ಕೃಷ್ಣ ಚೈತನ್ಯ ಮತ್ತು ಕೆ.ಮಂಜು ಅವರು ರಾಗಿಣಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದು, ಮುಂದಿನ ತಿಂಗಳು ಏಪ್ರಿಲ್ ನಿಂದ ಚಿತ್ರೀಕರಣ ಆರಂಭವಾಗಲಿದೆ.ಕಳೆದ ವರ್ಷ ವೃತ್ತಿ ಹಾಗೂ ನಾನು ವಯಕ್ತಿಕವಾಗಿ ನನಗೆ ಪರೀಕ್ಷೆಯಾಗಿತ್ತು, ಈ ಸಿನಿಮಾದಿಂದ ನನಗೆ ರಿಲೀಫ್ ಸಿಕ್ಕಿದೆ. 2021ರಲ್ಲಿ ಇದು ನನ್ನ ಮೊದಲ ಸಿನಿಮಾ, ಈ ವರ್ಷ ನಾನು ಪ್ರತಿ ದಿನ ಕೆಲಸ ಮಾಡಲು ಮತ್ತು ಪ್ರತಿ ಕ್ಷಣ ಬದುಕಲು ಬಯಸುತ್ತೇನೆ ಎಂದು ರಾಗಿಣಿ ಹೇಳಿದ್ದಾರೆ.

  


ಸುದ್ದಿ ಓದಿ