ಮನರಂಜನೆ

ಖ್ಯಾತ ಚಿತ್ರ ನಟ ಕಮಲ್ ಹಾಸನ್ ಕಾರಿನ ಮೇಲೆ ದಾಳಿ

ಖ್ಯಾತ ಚಿತ್ರ ನಟ  ಕಮಲ್ ಹಾಸನ್  ಕಾರಿನ ಮೇಲೆ ದಾಳಿ

ಚೆನ್ನೈ , ಮಾ 15 : ಖ್ಯಾತ ಚಿತ್ರ ನಟ  ಹಾಗೂ ಮಕ್ಕಳ ನೀದಿ ಮೈಯ್ಯಂ ಪಕ್ಷದ ನಾಯಕ ಕಮಲ್ ಹಾಸನ್ ಅವರ ಕಾರಿನ ಮೇಲೆ ಕಳೆದ ರಾತ್ರಿ ಯುವಕನೊಬ್ಬ ದಾಳಿ ನಡೆಸಿದ್ದಾನೆ. ಕಮಲ್ ಹಾಸನ್ ಅವರು ಚುನಾವಣಾ ಪ್ರಚಾರ ಮುಗಿಸಿ ಕಾಂಜೀಪುರದ ಹೋಟೆಲ್ನತ್ತ ಬರುತ್ತಿದ್ದಾಗ ಈ ಘಟನೆ ನಡೆದಿದೆ.ಆದರೆ ಈ ಘಟನೆಯ ದಾಳಿಯಲ್ಲಿ ನಟ ಕಮಲ್ ಹಾಸನ್ ಅವರಿಗೆ ಯಾವುದೇ ಗಾಯವಾಗಿಲ್ಲ. ಆದರೆ ಕಾರಿನ ಮುಂಭಾಗದ ಗಾಜು ಪುಡಿಪುಡಿಯಾಗಿದೆ. ಈ ಬಗ್ಗೆ ಪಕ್ಷದ ನಾಯಕ ಹಾಗೂ ನಿವೃತ್ತ ಐಪಿಎಸ್ ಅಧಿಕಾರಿ ಎ.ಜಿ.ಮೌರ್ಯ ಟ್ವೀಟ್ ಮಾಡಿದ್ದು, ಹಲ್ಲೆಕೋರನನ್ನ ಪೊಲೀಸರು ಬಂಧಿಸಿದ್ದಾರೆ .  ಇಂತಹ ಶಕ್ತಿಗಳ ಗೊಡ್ಡು ಬೆದರಿಕೆಗಳಿಗೆ ಪಕ್ಷ ಹೆದರುವುದಿಲ್ಲ ಎಂದು ಹೇಳಲಾಗಿದೆ.

 



ಸುದ್ದಿ ಓದಿ