ನ್ಯಾಯಮೂರ್ತಿ ಎಜೆ ಸದಾಶಿವ ಆಯೋಗ ಕೇಂದ್ರ, ರಾಜ್ಯ ಸರ್ಕಾರಕ್ಕೆ ಶಿಫಾರಸ್ಸು ಮಾಡಿ ಅಂಗೀಕರಿಸುವಂತೆ ಒತ್ತಾಯ: ಎ ಕೆ ಹುಲುಗಪ್ಪ
ಲೋಕದರ್ಶನ ವರದಿ
ಬಳ್ಳಾರಿ 11: ನಗರದ ಜಿಲ್ಲಾಧಿಕಾರಿ ಕಚೇರಿಯ ಮುಂದೆ ಮಾದಿಗ ದಂಡೋರ ಹಾಗೂ ಮಾದಿಗ ಮೀಸಲಾತಿ ಹೋರಾಟ ಜಿಲ್ಲಾ ಸಮಿತಿ ವತಿಯಿಂದ ಪ್ರತಿಭಟನೆ ಮಾಡಿ, ನಂತರ ಅಪರ ಜಿಲ್ಲಾಧಿಕಾರಿ ಮಹಮ್ಮದ್ ಜೋಬೇರಾ ಮೂಲಕ ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ನರೇಂದ್ರ ಮೋದಿಗೆ ಮನವಿ ಪತ್ರ ರವಾನಿಸಲಾಯಿತು. ತರುವಾಯ ಮಾದಿಗ ದಂಡೋರ ಸಂಘದ ರಾಜ್ಯ ಹಿರಿಯ ಉಪಾಧ್ಯಕ್ಷ ಎ ಕೆ ಹುಲುಗಪ್ಪ ಅವರು ತಮ್ಮ ಸಮುದಾಯವನ್ನು ಕುರಿತು ಮಾತನಾಡುತ್ತ ರಾಜ್ಯದಲ್ಲಿ ಏಕಕಾಲಕ್ಕೆ ಮಾದಿಗ ದಂಡೋರ ಮೀಸಲಾತಿ ಹೋರಾಟ ಸಮಿತಿ ವತಿಯಿಂದ ಕೇಂದ್ರ ಲೋಕಸಭೆ ಅಧಿವೇಶನದಲ್ಲಿ ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗದ ವರದಿಯನ್ನು ಲೋಕಾಸಭಾ ಸದಸ್ಯರು ಬಿಲ್ಲನ್ನು ಮಂಡಿಸಲು ಧ್ವನಿ ಎತ್ತುವಂತೆ ಹಾಗೂ ಮಾದಿಗ ಸಮುದಾಯವು ಆರ್ಥಿಕವಾಗಿ ಸಾಮಾಜಿಕವಾಗಿ ಶೈಕ್ಷಣಿಕವಾಗಿ ಹಿಂದುಳಿದಿರುವಂತಹ ಹಾಗೂ ಅಸ್ಪೃಶ್ಯತೆಯಿಂದ ಕೂಡಿರುವಂಥದ್ದು ಸಮುದಾಯವಾಗಿದೆ.
ಕರ್ನಾಟಕದಲ್ಲಿ ಅತ್ಯಂತ ಹೆಚ್ಚಿನ ಸಂಖ್ಯೆ ನಮ್ಮ ಸಮುದಾಯದವರು ಇದ್ದಾರೆ, ಹಾಗೂ ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಅನುಮೋದಿಸಿರುವ ಯೋಜನೆಗಳನ್ನು ಬೋವಿ ಕೊರಚ ಚಲವಾದಿ ಇನ್ನು ಮುಂತಾದ ನೂರಾರು ಎಸ್ ಸಿ ಜನಾಂಗದ ಉಪಜಾತಿಗಳಿಗೆ ಅನುಕೂಲವಾಗಿವೆ ಹೊರತು ನಮ್ಮ ಮಾದಿಗ ಸಮುದಾಯಕ್ಕೆ ಯಾವುದೇ ಸೌಲಭ್ಯಗಳು ದೊರಕದೇ ಇರುವಂತದ್ದು ಆಗಿದೆ. ಆದುದರಿಂದ ನ್ಯಾಯಮೂರ್ತಿ ಎ ಜೆ ಸದಾಶಿವ ಆಯೋಗವನ್ನು ಕೂಡಲೇ ಮಂಡಿಸಲು ರಾಜ್ಯ ಹಾಗೂ ಕೇಂದ್ರ ಸರ್ಕಾರದಲ್ಲಿ ಶೀಘ್ರದಲ್ಲಿ ಧ್ವನಿ ಎತ್ತಬೇಕೆಂದು ಮಾತನಾಡಿದರು. ಇದು ಅಲ್ಲದೆ ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗದ ವರದಿಯನ್ನು ಜಾರಿಗೆ ತರುವುದಕ್ಕೆ ರಾಜ್ಯ ಸರ್ಕಾರದಿಂದ ಕೇಂದ್ರ ಸರ್ಕಾರಕ್ಕೆ ಶಿಪಾರಸ್ಸು ಮಾಡಲಾಗಿದ್ದು, ಸದರಿ ವರದಿಯನ್ನು ಇದೇ ತಿಂಗಳಲ್ಲಿ ಕೇಂದ್ರ ಲೋಕಸಭೆ ಅಧಿವೇಶನ ಜರುಗಲಿದ್ದು, ಸದರಿ ಅಧಿವೇಶನದಲ್ಲಿ ರಾಜ್ಯದ ಲೋಕಸಭಾ ಸದಸ್ಯರು ಬಿಲ್ಲನ್ನು ಮಂಡಿಸಲು ಧ್ವನಿ ಎತ್ತಿ ಬಿ.ಜೆ.ಪಿ ಪಕ್ಷದ ಹಾಲಿ ಲೋಕಾಸಭಾ ಸದಸ್ಯರು ಸದರಿ ಎ.ಜೆ.ಸದಾಶಿವ ಆಯೋಗದ ವರದಿಯನ್ನು ಅನುಷ್ಠಾನಕ್ಕೆ ತರುವಂತೆ ರಾಜ್ಯದಲ್ಲಿ ಮಂದಕೃಷ್ಣ ಮಾದಿಗಣ್ಣಾ ರವರ ಆದೇಶದ ಮೇರೆಗೆ ನೆರವೇರಿಸಲಾಯಿತು.
ಬಳ್ಳಾರಿ ಜಿಲ್ಲಾಧ್ಯಕ್ಷ ಎ.ನಟ್ಟಪ್ಪ, ಮಾತನಾಡಿ ಡಾ .ಬಿ ಆರ್ ಅಂಬೇಡ್ಕರ್ ಹೇಳಿದ ಹಾಗೆ ಭೌತಿಕ ಸಂಪತ್ತನ್ನು ಬಡತನ ಮತ್ತು ನಿರುದ್ಯೋಗ ಹೋಗಲಾಡಿಸಿ ಎಲ್ಲಾ ನಾಗರೀಕರಿಗೂ ಮೂಲಭೂತ ಸೌಕರ್ಯವನ್ನು ನೀಡುವುದರ ಜೊತೆಗೆ ಅರ್ಥಿಕ, ಸಾಮಾಜಿಕ, ಶೈಕ್ಷಣಿಕ ಮಟ್ಟದಲ್ಲಿ ಸಮಾನತೆಯನ್ನು ಕಾಪಾಡಿಕೊಳ್ಳಬೇಕೆಂಬ ಹಂಬಲದಲ್ಲಿ ಭಾರತದ ಅಗ್ರಗಣ್ಯ ಸ್ಥಾನದಲ್ಲಿರುವ ಮಾದಿಗ ಮತ್ತು ಉಪಜಾತಿಗಳು ತುಳಿತಕ್ಕೆ ಒಳಗಾಗಿರುವ ಜನಾಂಗಕ್ಕೆ ಒಳಮೀಸಲಾತಿ ಜಾರಿ ಮಾಡುವಂತೆ 31 ಜಿಲ್ಲೆಗಳಲ್ಲಿ ಏಕಕಾಲಕ್ಕೆ ಮುಷ್ಕರವನ್ನು ಹಮ್ಮಿಕೊಂಡಿದ್ದು, ಈಗಲಾದರೂ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಆ ನಿರ್ದಿಷ್ಟಾವಧಿ ಧರಣಿ ಸತ್ಯಗ್ರಹವನ್ನು ಮನಗೊಂಡು ಶೀಘ್ರವಾಗಿ ಸದಾಶಿವ ಆಯೋಗದ ವರದಿಯನ್ನು ಜಾರಿಗೊಳಿಸಿದೆ ಹೋದರೆ ಮುಂದಿನ ದಿನಮಾನಗಳಲ್ಲಿ ಹಾಗೂ ಮುಂದಿನ ಚುನಾವಣೆಯಲ್ಲಿ ಎಸ್ಸಿ ಜನಾಂಗವು ಬಿಜೆಪಿ ಆಗಿರಲಿ ಅಥವಾ ಕಾಂಗ್ರೆಸ್ ಆಗಿರಲಿ ಯಾವುದೇ ಪಕ್ಷವಾದರೂ ಸಹ ಆ ಪಕ್ಷಕ್ಕೆ ತಕ್ಕ ಪಾಠವನ್ನು ಕಲಿಸಲಾಗುವುದೆಂದು ಎಚ್ಚರಿಕೆ ನೀಡುತ್ತಿದ್ದೇವೆ ಎಂದು ಮಾತನಾಡಿದರು. ರಾಜ ನಾಯಕರಾದ ಎ ಕೆ ಹುಲುಗಪ್ಪ, ರಾಜ್ಯ ಹಿರಿಯ ಉಪಾಧ್ಯಕ್ಷರು ಪ್ರಸಾದ್, ರಾಜ್ಯ ಪ್ರಧಾನ ಕಾರ್ಯದರ್ಶಿ ಯುವ ಘಟಕ ಯು ಎರಿಸ್ವಾಮಿ, ಭೀಮಲಿಂಗ ಹೊಸಯರಗುಡಿ, ಎಚ್ಎಸ್ ಗಾದಿಲಿಂಗಪ್ಪ, ಸತೀಶ್,ಹೊನ್ನೂರಪ್ಪ, ಎ ಕೆ ಯನ್ನಪ್ಪ, ಎರಿಸ್ವಾಮಿ, ಹೆಚ್ಚು ಸುಂಕಪ್ಪ, ಎ ಕೆ ಮಹಾಲಿಂಗಯ್ಯ, ಲೇಪಾಕ್ಷಿ ದುಗರ್ೆಶ್ ಎಂ ಪಿ ವಿಜಯಕುಮಾರ್, ಯಲ್ಲಪ್ಪ ಜಡೆಪ್ಪ, ಈರಣ್ಣ ಹಾಗೂ ಸಂಘದ ಎಲ್ಲಾ ಸದಸ್ಯರು ವಿವಿಧ ಪದಾಧಿಕಾರಿಗಳು ಇತರರು ಉಪಸ್ಥಿತರಿದ್ದರು. ಬೇಡಿಕೆಗಳು : ಪರಿಶಿಷ್ಟ ಜಾತಿ ಪಟ್ಟಿಯಿಂದ ಬೇಡ ಜಂಗಮ ಸಮಾಜವನ್ನು ಕೈಬಿಡಬೇಕು, ಹಾಗೂ ಬೇಡ ಜಂಗಮ ಜನಾಂಗಕ್ಕೆ ಎಸ್.ಸಿ. ಜಾತಿ ಪ್ರಮಾಣ ಹತ್ರ ನೀಡದಂತೆ ಆದೇಶಿಸಬೇಕು. ಈ ಕೂಡಲೇ ಸದಾಶಿವ ಆಯೋಗದ ವರದಿಯನ್ನು ಜಾರಿಗೊಳಸುವಂತೆ ಕೇಂದ್ರಕ್ಕೆ ಶಿಫಾರಸ್ಸು ಮಾಡಬೇಕು .