ಮುಂಡರಗಿ

ಜೂ. 30ರಿಂದ ಶರಣ ಚರಿತಾಮೃತ ಪ್ರವಚನ ಕಾರ್ಯಕ್ರಮ

ಜೂ. 30ರಿಂದ ಶರಣ ಚರಿತಾಮೃತ ಪ್ರವಚನ ಕಾರ್ಯಕ್ರಮ

ಲೋಕದರ್ಶನ ವರದಿ

ಮುಂಡರಗಿ 11: ಆಷಾಡ ಮಾಸದಲ್ಲಿ ಪ್ರತಿ ವರ್ಷದಂತೆ ಮುಂಡರಗಿ ತೋಂಟದಾರ್ಯ ಶಾಖಾಮಠದಲ್ಲಿ ಜೂ. 30 ರಿಂದ ಜು. 25ರವರೆಗೆ ಶರಣ ಚರಿತಾಮೃತ ಪ್ರವಚನವನ್ನು ಧಾರವಾಡದ ಮಮ್ಮಿಘಟ್ಟಿ ಮಠದ ಬಸವಾನಂದ ಸ್ವಾಮಿಗಳ ನೇತೃತ್ವದಲ್ಲಿ ಪ್ರವಚನ ಜರುಗಲಿದೆ ಎಂದು ನಿಜಗುಣಪ್ರಭು ತೋಂಟದಾರ್ಯ ಮಹಾಸ್ವಾಮಿಗಳು ತಿಳಿಸಿದರು.

ಪಟ್ಟಣದ ತೊಂಟದಾರ್ಯ ಶಾಖಾ ಮಠದಲ್ಲಿ ಗುರುವಾರ ಹಮ್ಮಿಕೊಂಡ ಪ್ರವಚನ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಸಾನಿಧ್ಯವಹಿಸಿ ಆಶೀರ್ವಚನ ನೀಡಿ ಅವರು ಮಾತನಾಡಿದರು.

ಪ್ರವಚನ ಮನುಷ್ಯನ ಮಾನವೀಯ ಮೌಲ್ಯಗಳನ್ನು ಬದಲಾವಣೆ ಮಾಡುವುದಲ್ಲದೇ, ಎಲ್ಲಾ ಧರ್ಮ, ಪ್ರತಿಯೊಬ್ಬರು ಸೌಹಾರ್ದತೆಯಿಂದ ಗೌರವಿಸುವಂತ ಕೆಲಸ ಪ್ರವಚನದಿಂದ ಮಾತ್ರ ಸಾದ್ಯವಾಗುತ್ತದೆ. ದಿ. 30ರಂದು ಪ್ರವಚನ ಪ್ರಾರಂಭವಾಗಲಿದ್ದು ಮೊದಲ ದಿನ ಮಹಾಪ್ರಸಾದ ಹಾಗೂ ಪ್ರತಿ ಸೋಮವಾರ ಮತ್ತು ಮಂಗಲೋತ್ಸವ ದಿನದಂದು ಮಾತ್ರ ಮಹಾಪ್ರಸಾದವನ್ನು ಶ್ರೀಮಠದಿಂದ ಏರ್ಪಡಿಸಲಾಗಿದೆ ಎಂದರು.

ಪ್ರವಚನದಲ್ಲಿ ಪ್ರತಿ ನಿತ್ಯ ಪ್ರಸಾದವನ್ನು ಜನರ ಮೆಚ್ಚುಗೆ ಬೇಡ ಶ್ರೀಮಠದ ಬದಲಾವಣೆ ಹಾಗೂ ಶ್ರೇಯೋಭಿವೃದ್ದಿ ಶಿಸ್ತಿನ ಹಿನ್ನಲೆಯಲ್ಲಿ ಈ ತೀಮರ್ಾನ ಕೈಗೊಳ್ಳಲಾಗಿದ್ದು ಭಕ್ತರು ತನು, ಮನ, ಧನದಿಂದ ಸಹಾಯ ಸಹಕಾರ ನೀಡಿ ಶ್ರೀಮಠದ ಕೃಪೆಗೆ ಪಾತ್ರರಾಗಬೇಕೆಂದು ತಿಳಿಸಿದರು.

ಪ್ರವಚನ ಕಮೀಟಿ ನೇಮಕ : 2022-23 ನೇ ಸಾಲಿನ ಪ್ರವಚನ ಕಮೀಟಿಯ ಅಧ್ಯಕ್ಷರಾಗಿ ಶ್ರೀಮಠದ ಭಕ್ತರಾದ ಪಾಲಾಕ್ಷಿ ಗಣದಿನ್ನಿ, ಉಪಾದ್ಯಕ್ಷರಾಗಿ ಶಿವು ಬೆಟಗೇರಿ, ಕಾರ್ಯದಶರ್ಿಯಾಗಿ ಉಮೇಶ ಹಿರೇಮಠ, ಖಜಾಂಚಿಯಾಗಿ ಪವನ್ ಚೋಪ್ರಾ ಇವರನ್ನು ಶ್ರೀಗಳ ಸಮ್ಮುಖದಲ್ಲಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಆಯ್ಕೆಯಾದ ನೂತನ ಪದಾಧಿಕಾರಿಗಳನ್ನು ಶ್ರೀಗಳು ಆಶಿರ್ವದಿಸಿದರು.

ಕಾರ್ಯಕ್ರಮವನ್ನು ಕೋಟ್ರೇಶ ಅಂಗಡಿ, ಸ್ವಾಗತಿಸಿ ನಿರೂಪಿಸಿದರು. ಶರಣಪ್ಪ ಕುಬಸದ ವಂದಿಸಿದರು. ಈ ವೇಳೆ ಮಾಜಿ ಸಚಿವ ಎಸ್.ಎಸ್.ಪಾಟೀಲ, ತೋಂಟದಾರ್ಯ ಸೇವಾ ಸಮಿತಿ ಅದ್ಯಕ್ಷ ಹೆಚ್.ವಿರುಪಾಕ್ಷಗೌಡ, ದ್ರುವಕುಮಾರ ಹೊಸಮನಿ, ಶಿವಯೋಗಿ ಕೊಪ್ಪಳ, ದೇವಪ್ಪ ರಾಮೇನಹಳ್ಳಿ, ಎ.ಪಿ.ದಂಡಿನ, ಗಿರೀಶಗೌಡ ಪಾಟೀಲ, ವಿಶ್ವನಾಥ ಉಳ್ಳಾಗಡ್ಡಿ, ವಿರೇಶ ಬೆಟಗೇರಿ, ಸದಾಶಿವಯ್ಯ ಕಬ್ಬೂರಮಠ, ರವಿ ಕಾಶಿಗಾಂವಿ, ಹೂಗಾರ, ಸೇರಿದಂತೆ ಇತರರಿದ್ದರು 

ಸುದ್ದಿ ಓದಿ