ಕಥೆ ಮತ್ತು ವಿಶೇಷ ಲೇಖನಗಳು

ಜಾತಿಗನುಗುಣವಾಗಿ ಜಯಂತಿ: ಕೆಟ್ಟ ಸಂಪ್ರದಾಯ

ಜಾತಿಗನುಗುಣವಾಗಿ ಜಯಂತಿ: ಕೆಟ್ಟ ಸಂಪ್ರದಾಯ

- ದೀಪಿಕಾ ಚಾಟೆ

ಟಿಪ್ಪು ಸುಲ್ತಾನನು ನವ್ಹೆಂಬರ್ 10, 1750ರಲ್ಲಿ ಕೋಲಾರ ಜಿಲ್ಲೆಯ ದೇವನಹಳ್ಳಿಯಲ್ಲಿ ಹುಟ್ಟಿ ಈಗಾಗಲೇ 268 ವರ್ಷಗಳೇ ಗತಿಸಿದವು. ಇರುವವರೆಗೂ ಸಮಯ ಸಾಧಕತನ ತೋರಿಸಿ ಬ್ರಿಟಿಷ್ ರೊಂದಿಗೆ ಒಪ್ಪಂದ ಮಾಡಿಕೊಂಡು ನಮ್ಮವರೇ ಆದ ಮರಾಠರು, ನಿಜಾಮರೊಂದಿಗೆ ಸಾಕಷ್ಟು ಸೆಣಿಸಿದವನು.ಕುಟೀಲನೀತಿಯ ಬ್ರಿಟಿಷರ ಒಡೆದು ಆಳುವ ನೀತಿಗೆ ಬಲಿಯಾಗಿ ರಾಜ್ಯವನ್ನೂ, ಪ್ರಾಣವನ್ನೂ ಕಳೆದುಕೊಂಡವನು. 

ಸಕರ್ಾರಕ್ಕೆ ಮಾಡಲು ಬೇರೆ ಕೆಲಸವಿಲ್ಲವೇ? ಸೋಜಿಗ ಎನ್ನಿಸುತ್ತದೆ. ಟಿಪ್ಪು ಸುಲ್ತಾನನ ಜಯಂತಿಯನ್ನು ಆಚರಿಸಲು ಸಕರ್ಾರ  ಇಷ್ಟೊಂದು ಪೈಪೋಟಿ ಗಿಳಿದಿರುವ ಕಾರಣವಾದರೂ ಏನಿರಬಹುದು. 

ಇತ್ತೀಚೆಗೆ  ಯುಗಗಳಾಚೆ, ಶತಶತಮಾನಗಳಾಚೆ ಆಗಿ ಹೋದ  ಮಹಾಪುರುಷರ ಅವರವರ ಜಾತಿಗನು ಗುಣವಾಗಿ ಜಯಂತಿಯನ್ನಾಚರಿಸುವ ಟ್ರೆಂಡ್ ಬೆಳೆಯುತ್ತಿದೆ.ಇದೊಂಥರ ಅತ್ಯಂತ ಕೆಟ್ಟ ಸಂಪ್ರದಾಯ ಎನ್ನಲಡ್ಡಿಯಿಲ್ಲ.ಯಾಕೆಂದರೆ ಆಯಾ ಜಾತಿಯವರನ್ನು ಎತ್ತಿ ಕಟ್ಟಿ ಜಾತಿರಾಜಕಾರಣ ಮಾಡುತ್ತಿದೆ ಸಕರ್ಾರ. 

ವಾಲ್ಮೀಕಿ, ಕನಕದಾಸ, ಕೆಂಪೇಗೌಡ, ಡಾ. ಬಾಬಾಸಾಹೇಬ ಅಂಬೇಡ್ಕರ್, ಮುಂತಾದವರು ಯಾವತ್ತಿಗೂ ಒಂದು ಜಾತಿಗೆ ಸೀಮೀತರಾಗಿ ಕೆಲಸ ಮಾಡಿದವರಲ್ಲ.ತಾವಿರುವವರೆಗೂ ಒಟ್ಟಾರೆಯಾಗಿ ಸಮಾಜಕ್ಕೆ ಉಪಯುಕ್ತ ಕೆಲಸವನ್ನು ಮಾಡಿದವರು. 

ವಾಲ್ಮೀಕಿ ಬೇಡನಾದರೂ ರಾಮಾಯಣ ದಂಥ ಉತ್ಕೃಷ್ಟ ಗ್ರಂಥವನ್ನು ನೀಡಿ ಪುರುಷೋತ್ತಮ ರಾಮನಂಥ ವ್ಯಕ್ತಿತ್ವವನ್ನು ನಮಗೆ ಮಾದರಿಯನ್ನಾಗಿಸಿದವನು. ಹಾಗೂ ನಮ್ಮ ಭಾರತೀಯ ಸಂಸ್ಕೃತಿಯ ತಿರುಳನ್ನು ಎತ್ತಿ ತೋರಿಸಿ ದವನು. ಆತ ಅಳಿದು ಯುಗಗಳೇ ಕಳೆದರೂ ಆತನ ಮೇರು ಕೃತಿ ಎಲ್ಲಾ ಭಾಷೆಗಳ ಸಾಹಿತ್ಯಕ್ಕೂ  ಮೂಲದ್ರವ್ಯ ವೆಂಬಂತಾಗಿದೆ. ಹಾಗೆಯೇ ಮಹಾಭಾರತದಂಥ ಇಂದಿಗೂ ಪ್ರಸ್ತುತವಾಗಿರುವ  ಕೃತಿಯ ರಚನೆಕಾರರಾದ ವ್ಯಾಸ ಮಹಷರ್ಿ ಏನು ತಪ್ಪು ಮಾಡಿದ್ದಾರೆ? ಬೇಡನ ಜಾತಿಯವನಾದ ವಾಲ್ಮೀಕಿ ಜಯಂತಿಯನ್ನಾಚರಿಸಲು ಸಕರ್ಾರ ದಿಂದ ದಂಡಿಯಾಗಿ ದುಡ್ಡು ಬಿಡುಗಡೆ ಮಾಡುತ್ತಿದೆ. ಆದರೆ ಕ್ಷತ್ರಿಯ ಜನಾಂಗವನ್ನು ಪ್ರತಿನಿಧಿಸುವ ವ್ಯಾಸ ಮಹಷರ್ಿಯ ಜಯಂತಿ ಯಾಕಿಲ್ಲ? 

ಇನ್ನೂವ ಕನಕ ದಾಸರು 16ನೇ ಶತಮಾನದಲ್ಲಿ ಭಕ್ತಿ ಪಂಥದ ಹರಿಕಾರ ರಾಗಿ ದಾಸ ಸಾಹಿತ್ಯಕ್ಕೆ ಅಮೂಲ್ಯ ಕೊಡುಗೆ ನೀಡಿದವರು. ಕೇವಲ ಆದಿಕೇಶವನಲ್ಲಿ ಶರಣಾಗತರಾಗಿ  ಶ್ರೇಷ್ಠವಾದ ಹಾಡುಗಳನ್ನು ರಚಿಸಿದವರು ಹಾಗೂ ಕನ್ನಡ ಸಾಹಿತ್ಯಕ್ಕೆ ಮೆರುಗು ನೀಡಿದವರು. ಸರಿ ಕನಕದಾಸರ ಜಯಂತಿಯನ್ನು ಕುರುಬ ಜನಾಂಗಕ್ಕೆ ಸಂತೋಷಪಡಿಸಲು ಆಚರಿಸುವದಾದರೆ ಅವರ ಸಮಕಾಲೀನರಾದ ಅಷ್ಟೇ ಸತ್ವಯುತವಾದ ಕನ್ನಡ ಹಾಡುಗಳನ್ನು ರಚಿಸಿದ ಪುರಂಧರದಾಸರು, ವಿಜಯದಾಸರು, ವಾದಿರಾಜರ ಜಯಂತಿ ಯಾಕಿಲ್ಲ? ಭಾರತೀಯ ತತ್ವಶಾಸ್ತ್ರಕ್ಕೆ ಅಮೂಲ್ಯ ಗ್ರಂಥಗಳನ್ನು ನೀಡಿದ ಶಂಕರಾಚಾರ್ಯರು, ಮಧ್ವಾಚಾರ್ಯರು, ರಾಮಾನುಜಾಚಾರ್ಯರು, ಸಂತ ಶಿರೋಮಣಿ ರಾಘವೇಂದ್ರ ಸ್ವಾಮಿಗಳ ಜಯಂತಿ ಯನ್ನು ಯಾಕೆ ಸಕರ್ಾರ ಆಚರಿಸುತ್ತಿಲ್ಲ? ಇವರೆಲ್ಲ ಬ್ರಾಹ್ಮಣರಾಗಿದ್ದು ಸಮಾಜಕ್ಕೆ ಅಮೂಲ್ಯ ಕೊಡುಗೆ ನೀಡಿದವರನ್ನು ಕಡೆಗಣಿಸುವುದೇಕೆ? ಇವರೆಲ್ಲ ಅಲ್ಪಸಂಖ್ಯಾತರು ಎಂಬ ಕಾರಣವೇ? ಒಂದು ಕಣ್ಣಿಗೆ ಬೆಣ್ಣೆ ಇನ್ನೊಂದು ಕಣ್ಣಿಗೆ ಸುಣ್ಣ ಯಾಕೆ?  

ಸ್ವಾತಂತ್ರ್ಯಾನಂತರ ದ ಭಾರತಕ್ಕೆ ಸಂವಿಧಾನವನ್ನು ರಚಿಸಿ ಸಕರ್ಾರೀ ಧರ್ಮಗ್ರಂಥವನ್ನು ನೀಡಿ ಸಂವಿಧಾನ ಶಿಲ್ಪಿ ಎಂದೆನಿಸಿದವರು ಡಾ.ಬಾಬಾ ಸಾಹೇಬ ಅಂಬೇಡ್ಕರ್ ರವರು.ಅವರು ಹಿಂದುಳಿದ ಜಾತಿಯವರಾದರೂ ಬ್ರಾಹ್ಮಣ ಗುರುವಿನಿಂದ ಮೇಲೆ ಬಂದು, ನಂತರದ ದಿನಗಳಲ್ಲಿ ಬೌದ್ಧ ಧರ್ಮವನ್ನು ಅಪ್ಪಿಕೊಂಡವರು. ಅವರ ಜಯಂತಿಯನ್ನು ಆಚರಿಸುವುದಾದರೆ, ಸ್ವಾತಂತ್ರ್ಯಾಂದೋಲನದಲ್ಲಿ ತಮ್ಮ ಸರ್ವಸ್ವವನ್ನೂ ಕಳೆದುಕೊಂಡವರು ಸಾವಿರ ಸಾವಿರ ಜನ ಇದ್ದಾರೆ. ಅವರೆಲ್ಲರ ಜಯಂತಿಯನ್ನು ಆಚರಿಸಲಾಗುತ್ತದೆಯೇ?  

             ಉತ್ತಮ ಆಡಳಿತಗಾರ, ದಕ್ಷ ರಾಜ ಕೆಂಪೇಗೌಡ ಬೆಂಗಳೂರನ್ನು ಮರಾಠರಿಂದ ಸಂರಕ್ಷಿಸಿ ಬೆಳೆಸಿದವನು. ಅವನ ಜಯಂತಿಯನ್ನು ಆಚರಿಸುವುದಾದರೆ ನಿಜಾರ್ಥದಲ್ಲಿ ಸಮಾಜಕ್ಕೆ   ಒಳ್ಳೆಯ ಆಡಳಿತವನ್ನು ನೀಡಿ, ಅನೇಕ ಕೈಗಾರಿಕೆಗಳನ್ನು ಸ್ಥಾಪಿಸಿ, ಅನೇಕ ಸ್ಕೂಲು, ಕಾಲೇಜು, ಉನ್ನತ ಅಭ್ಯಾಸಕ್ಕೆ ಅಡಿಪಾಯ ವನ್ನಿಟ್ಟು ಅನೇಕ ಅಭ್ಯುದಯ ಕಾರ್ಯಗಳನ್ನು ಹಮ್ಮಿಕೊಂಡವರು, ಆಣೆಕಟುಗಳನ್ನು ನಿಮರ್ಿಸಿ ರೈತರ ಬಾಳನ್ನು ಬಂಗಾರವಾಗಿಸಿದವರು ಮೈಸೂರು ಸಂಸ್ಥಾನದ ಕೃಷ್ಣರಾಜ ಒಡೆಯರವರು. ಮೇಲೆ ಹೇಳಿದ್ದು ಕೆಲವೇ ಕೆಲವು ಕಲ್ಯಾಣ ಕಾರ್ಯದ ಝಲಕುಗಳು.. ಇನ್ನೂ ಸಾಕಷ್ಟಿವೆ. ಅವರ ಜಯಂತಿ ಯಾಕಿಲ್ಲ? ವಿಶ್ವಕ್ಕೇ ಭಾರತೀಯ ಸಂಸ್ಕೃತಿಯ ಮೆರಗನ್ನು ತೋರಿಸಿದ ಕೃಷ್ಣ ದೇವರಾಯನ ಜಯಂತಿ ಯಾಕಿಲ್ಲ?  

ವಲ್ಲಭಭಾಯಿ ಪಟೇಲ್ರು ಎಲ್ಲ ಸಂಸ್ಥಾನಿಕ ರಾಜರನ್ನು ಭಾರತದಲ್ಲಿ ವಿಲೀನ ಗೊಳಿಸಲು ಉಪಕ್ರಮಿಸಿದಾಗ ಮೊಟ್ಟ ಮೊದಲಿಗೆ ಭಾರತದಲ್ಲಿ ವಿಲೀನವಾದ ರಾಜ್ಯ ವೆಂದರೆ ಜಮಖಂಡಿಯ ಪಟವರ್ಧನ ಸಂಸ್ಥಾನ!  ಹಾಗೆಂದು ಅವನ ಜಯಂತಿಯನ್ನೂ ಮಾಡಬಹುದಲ್ಲ.? 

ಹೀಗೇ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಹಾಗೆ ನೋಡಿದರೆ ವರ್ಷದ 365 ದಿನಗಳನ್ನೂ ಸಕರ್ಾರ ವಿವಿಧ ಜನರ ಜಯಂತಿ ಗಳನ್ನು ಆಚರಿಸಲು ಹಮ್ಮಿಕೊಳ್ಳಬೇಕಾಗುತ್ತದೆ.ಅದಕ್ಕಾಗಿ ರಜ....ದಿನವೂ ಉತ್ಸವ.. ಮೆರವಣಿಗೆ...ಜನರಿಗೆ ಜೈಕಾರ ಹಾಕುವುದೇ ಕೆಲಸ....ಕನ್ನಡ ಸಂಸ್ಕೃತಿ ಇಲಾಖೆಯ ಬದಲಾಗಿ ಉತ್ಸವ ಇಲಾಖೆ ಎಂದೂ ನಾಮಕರಣ ಮಾಡಬಹುದು! 

      ಇನ್ನೂ ಟಿಪ್ಪು ಸುಲ್ತಾನನ ಜಯಂತಿಯನ್ನು ಆಚರಿಸಲು ಮುಸ್ಲೀಂರ ಓಲೈಕೆ, ವೋಟ್ಬ್ಯಂಕ್ ಪಾಲಿಟಿಕ್ಸ್ ಎಂಬುದು ಎಲ್ಲರಿಗೂ ನಿಚ್ಚಳವಾಗಿದೆ. ಒಬ್ಬ ಧಮರ್ಾಂಧ, ಮತಾಂಧ, ಅತ್ಯಾಚಾರಿ, ಧರ್ಮಪರಿವರ್ತಕ ,ಹಿಂದೂಗಳ ಶ್ರದ್ಧಾ ಕೇಂದ್ರವಾದ ಗುಡಿ ಮಂದಿರಗಳನ್ನು ಒಡೆಸಿದವನ ಜಯಂತಿಯನ್ನು ಆಚರಿಸಲು ಸಕರ್ಾರ ಜಿದ್ದಾಜಿದ್ದಿ ಮಾಡುವುದಾದರೆ ದಾವೂದ್ ಇಬ್ರಾಹಿಂ, ಬಿನ್ ಲಾಡೆನ್ ದ್ದು ಯಾಕೆ ಜಯಂತಿ ಮಾಡಬಾರದು? ಹೀಗೇ ಬಿಟ್ಟರೆ ಮುಂದೊಂದು ದಿನ ಅವನ್ನೂ ಮಾಡುವವರೇ!! 

ಟೀಪು ಸುಲ್ತಾನ್ ನಂಬುತ್ತಿದ್ದದ್ದು ಕೇವಲ ಮುಸ್ಲೀಮರನ್ನೇ.  ಅತ್ಯಧುನಿಕ  ಶಸ್ತ್ರಾಸ್ತ್ರಗಳನ್ನು ಟಕರ್ಿ, ರಶಿಯಾ, ಫ್ರಾನ್ಸ ಗಳಿಂದತರಿಸಿಕೊಂಡವನು. ನಮ್ಮಲ್ಲಿಯ ವನಸ್ಪತಿ, ಮಸಾಲೆ ಕಾಫಿ ಯನ್ನು ಅಲ್ಲಿ ಸಾಗಿಸಿ ವ್ಯಾಪಾರ ವೃದ್ಧಿ ಮಾಡಿದವನು.  ಅನೇಕ ಅಡತಡೆಗಳಿದ್ದಾಗ್ಯೂ ಬ್ರಿಟಿಷರಿಗೆ ಸಿಂಹಸ್ವಪ್ನವಾಗಿದ್ದವನು. ಮರಾಠರು, ನಿಜಾಮರೊಂದಿಗೆ ಬಡಿದಾಡುತ್ತ ಬ್ರಿಟಿಷ್ ರೊಂದಿಗೆ ಒಳ ಒಪ್ಪಂದ ಮಾಡಿಕೊಂಡವನು.! ಕ್ರೂರತನ, ಶೂರತನ ಎರಡನ್ನೂ ಮೇಳೈಸಿ ಕೊಂಡು ಹಿಂದೂಗಳನ್ನು ಇಡೀ ಊರಿಗೆ ಊರೇ  ಮತಾಂತರ ಮಾಡಿದವನು. ಯಾರು ಮತಾಂತರವಾಗಲು ಒಪ್ಪವುದಿಲ್ಲವೋ ಅವರನ್ನು ಸಲೀಸಾಗಿ ಕೊಂದು ಬಿಡುತ್ತಿದ್ದ. ಕೂರ್ಗ ಒಂದೇ ಪ್ರದೇಶದಲ್ಲಿ ಸುಮಾರು 80000 ಕ್ಕೂ ಅಧಿಕ ಹಿಂದು ಪುರುಷರು, ಮಹಿಳೆಯರು, ಮತ್ತು ಮಕ್ಕಳನ್ನು ಕೊಲ್ಲಿಸಿದವನು. ಆತನು ದಕ್ಷಿಣದ ಔರಂಗ್ಜೇಬನೆಂದೇ ಪ್ರಖ್ಯಾತ ಪಡೆದವನಾಗಿದ್ದ. ಆತನ ಖಡ್ಗದ ಮೇಲೆ, "ಈ ಖಡ್ಗ ವು ಎಂಥ ಪವಿತ್ರವಾಗಿದೆ ಎಂದರೆ ಇದು ಹೈದರ ಅಲಿಯ ಖಡ್ಗವಾಗಿದೆಯಲ್ಲದೇ ಅನೇಕ ಹಿಂದೂಗಳು ಯಾರು ಮತಾಂತರಕ್ಕೆ (ಮುಸ್ಲೀಂರಾಗಲು) ನಿರಾಕರಿಸಿದರೋ ಅವರ ರಕ್ತವನ್ನು ಕುಡಿದಿದೆ" ಎಂದು ಕೆತ್ತಲಾಗಿದೆ! 

ಒಬ್ಬ ಅಸಹಿಷ್ಣು, ಧಮರ್ಾಂಧ, ಅನೇಕ ಹೆಣ್ಣುಮಕ್ಕಳ ಶೀಲವನ್ನು ಕೆಡಿಸಿದ ಅತ್ಯಾಚಾರಿ, ಗುಡಿ ಮಂದಿರವಷ್ಟೇ ಅಲ್ಲ ಕ್ರಿಶ್ಚನ್ ರ ಪೂಜಾಸ್ಥಲಗಳನ್ನು ಕೆಡವಿಸಿದವ...ಮುಸ್ಲೀಂ ಧಮರ್ಾಚಾರಣೆ, ಉದರ್ು ಲಿಪಿಯನ್ನೇ ಬರೆಯಲು ಪ್ರೇರೇಪಿಸುತ್ತಿದ್ದವ,  ಇಡೀ ಊರುಗಳ ಹೆಸರನ್ನೇ ಬದಲಿಸಿ ದವ ನಿಜವಾದ ಅರ್ಥದಲ್ಲಿ ಇಂದಿನ ಉಗ್ರವಾದಿಗಳ ಮೂಲಪುರುಷ ನೇ ಟೀಪು ಸುಲ್ತಾನ್ ನಾಗಿದ್ದ ಎನ್ನಲಡ್ಡಿಯಿಲ್ಲ!! 

       ಊಣಠಡಿಥಿ ಠಜಿ ಖಿಠಿಣ ಖಣಟಣಚಿಟಿ, ಹಾಗೂ ನಿಶಾನೇ ಹೈದರಿ ಪುಸ್ತಕಗಳಲ್ಲಿ ಇನ್ನೂ ಸವಿವರವಾಗಿ ಆತನ ಕಾರನಾಮೇಗಳನ್ನೆಲ್ಲ ಬರೆಯಲಾಗಿದೆ. ಆತ ಮಾಡಿದ ಕುಕೃತ್ಯಗಳ ವಿವರಣೆ ಬೇಕಿದ್ದರೆ ದಯವಿಟ್ಟು ಎಸ್ ಎಲ್.ಭೈರಪ್ಪನವರ "ಆವರಣ" ಪುಸ್ತಕ ಓದಬಹುದು. ಅಂಕಿ ಸಂಖ್ಯೆಗಳೊಂದಿಗೆ ಸವಿವರವಾಗಿ ಉಲ್ಲೇಖಿಸಿದ್ದಾರೆ. ಇಂಥ ಮತಾಂಧನ ಜಯಂತಿಯನ್ನು ಆಚರಿಸಲು ಆತನು ಅರ್ಹನೇ? 

ಇತ್ತೀಚೆಗೆ ಸಕರ್ಾರ ಇಂತ ಜಯಂತಿಗಳನ್ನು ಪೈಪೋಟಿಗಿಳಿದಂತೆ ಆಯೋಜಿಸುತ್ತಿರುವುದಾದರೂ ಯಾತಕ್ಕೇ? ಮೇಲಿನಿಂದ ಕೆಳಗಿನವರೆಗೂ ದುಡ್ಡು ಹೊಡೆಯುವ ತಂತ್ರವೂ ಹೌದು! ತಮ್ಮ ಜಾತಿಯವರನ್ನು ಎತ್ತಿ ಕಟ್ಟುತ್ತೇನೆ ಎಂದಾಗ ಯಾವ ಜಾತಿಯವರೂ ಬೇಡವೆನ್ನುವುದಿಲ್ಲ. ಮೇಕೆ ಬಾಯಿಗೆ ಸ್ವಲ್ಪ ಮೊಸರನ್ನು ಹಚ್ಚಿ ಉಳಿದೆಲ್ಲ ಬುತ್ತಿಯನ್ನು ತಾವೇ ತಿಂದು ತೇಗುವ  ಮಂಗನಂತೆ ರಾಜಕಾರಣಿಗಳು ನಾಡಿಗೆ ಏನು ಒಳಿತನ್ನು ಮಾಡಬಲ್ಲರು? ಪ್ರಾ ಜ್ಞ ಜನರೇಕೆ ಸುಮ್ಮನೇ ನೋಡುತ್ತ ಕುಳಿತು ಬಿಟ್ಟಿದ್ದಾರೆ?  

         ಸ್ವಾತಂತ್ರ್ಯ ಬಂದು 70 ವರ್ಷಗಳಾದರೂ ಇನ್ನೂ ನಾವು ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರವೆಂದೇ ಅನ್ನಿಸಿಕೊಳ್ಳುತ್ತಿದ್ದೇವೆ. ಯಾಕೆಂದರೆ ಕಾಮಚೋರ ಜನರು ಇರುವವರೆಗೂ ಹಾಗೂ ಅಂತವರಿಗೆ ಪುಸಲತ್ತು ಕೊಡುತ್ತಿರುವ ಇಂದಿನ ರಾಜಕಾರಣಿ ಗಳಿರುವವರೆಗೂ ಇದೇ ರೀತಿ ಮುಂದುವರೆಯುತ್ತಲೇ ಇರುತ್ತದೆ.ಹಾಗೆ  ನೋಡಿ ದರೆ ವರ್ಷದ 365 ದಿನಗಳೂ ಜಯಂತಿಯನ್ನಾಚರಿಸಲು ಕಡಿಮೆ ಬೀಳುತ್ತವೆ.ಅಷ್ಟೊಂದು ಜನ ದೇಶಕ್ಕೆ ತ್ಯಾಗ ಬಲಿದಾನ ಮಾಡಿದವರು ನಮ್ಮಲ್ಲಿದ್ದಾರೆ. 

               ಮೊದಲು ಇಂಥ ಜಯಂತಿಗಳನ್ನಾಚರಿಸುವುದನ್ನು ಸಕರ್ಾರ ನಿಲ್ಲಿಸಬೇಕು. ಆ ಉತ್ಸವಕ್ಕೆ ಮಾಡಬೇಕಾದ ಖರ್ಚನ್ನು ಗಡಿಪ್ರದೇಶಗಳಲ್ಲಿ ಬೀಳುತ್ತಿರುವ, ಸೋರುತ್ತಿರುವ ಕನ್ನಡ ಶಾಲೆಗಳ ದುರಸ್ಥಿಗೆ ವ್ಯಯ ಮಾಡಬೇಕು.,ಅನೇಕ ಗಿಡ ಮರಗಳನ್ನು ನೆಟ್ಟು ಕಾಡು ಬೆಳೆಸುವ ಕೆಲಸವಾಗಬೇಕು, ಸ್ಕೂಲು, ಕಾಲೆಜು,ಆಸ್ಪತ್ರೆಗಳನ್ನು ಕಟ್ಟಿಸುವಂತಾಗಬೇಕು. ಎಷ್ಟೋ ಹಳ್ಳಿಗಳಲ್ಲಿ ಇನ್ನೂ ಬಸ್ಸಿನ ವ್ಯವಸ್ಥೆ ಸರಿ ಇಲ್ಲ.ರಸ್ತೆ, ಕುಡಿಯುವ ನೀರು, ವಿದ್ಯುಚ್ಛಕ್ತಿ, ಶೌಚಾಲಯ, ಬೀದಿದೀಪ, ಕಸದ ವಿಲೇವಾರಿ, ಮಕ್ಕಳಿಗೆ ಆಡಲು ಮೈದಾನ, ಕೆರೆ ನದಿಗಳನ್ನು ಮಾಲಿನ್ಯರಹಿತವಾಗಿಸುವುದು ದುರ್ಬಲ ಮನಸ್ಥಿತಿಯರಿಗೆ ಮಾನಸಿಕ ಧೈರ್ಯನೀಡಿ ಅವರಲ್ಲಿ ಉತ್ಸಾಹವನ್ನು  ತುಂಬುವಂಥ ಕೆಲಸ, ಮಹಿಳೆಯರಿಗೆ ಸ್ವಾವಲಂಬನೆ ಕೇಂದ್ರಗಳನ್ನು ಸ್ಥಾಪಿಸುವುದು. ಇನ್ನೂ ಅನೇಕ ಕಲ್ಯಾಣ ಕಾರಕ ಕಾರ್ಯಗಳನ್ನು ಹಮ್ಮಿಕೊಂಡು ಸಮಾಜಮುಖೀ ಕೆಲಸ ಮಾಡುವುದು ಸಕರ್ಾರದ ಕೆಲಸ. ಅದು ಬಿಟ್ಟು ಉತ್ಸವ ಮೆರವಣಿಗೆ  ಆಯೋಜಿಸಿ ಸಿಕ್ಕಾಪಟ್ಟೆ ದುಡ್ಡು ವ್ಯಯ ಮಾಡಿ ಜನರಿಗೆಲ್ಲ ರಜ ಘೋಷಿಸಿ ಸಾಧಿಸುವುದಾದರೂ ಏನನ್ನು? ಜನೋಪಯೋಗಿ ಕೆಲಸಗಳನ್ನು ಮಾಡಿದರೆ ಜನರೇ ಹುಚ್ಚೆದ್ದು ಮತ ಹಾಕುತ್ತಾರಲ್ಲವೇ?  

ಈ ರೀತಿಯ ಜಯಂತಿಗಳನ್ನು ಆಯಾ ಜನಾಂಗಗಳನ್ನು ಓಲೈಸಲು, ಮತಗಳ ಆಮಿಷಕ್ಕಾಗಿ ಹಾಗೂ ದುಡ್ಡು ತಿನ್ನಲು ಇದೊಂದು ವಾಮ ಮಾರ್ಗವಲ್ಲದೇ ಮತ್ತೇನೂ ಅಲ್ಲ ಅಲ್ಲವೇ? 


ಸುದ್ದಿ ಓದಿ