ಸಿಂದಗಿ ಕಾಳಿಕಾದೇವಿಯ ಜಾತ್ರಾ ಮಹೋತ್ಸವ
ಸಿಂದಗಿ 04:ಪಟ್ಟಣದ ಪುರದೇವತೆ ಕಾಳಿಕಾದೇವಿಯ ಜಾತ್ರೆಯು ಪ್ರತಿ ವರ್ಷದಂತೆ ದೇವಸ್ಥಾನದಲ್ಲಿ ಕಾಳಿಕಾಮಾತೆಗೆ ಬೆಳಿಗ್ಗೆ ಮುರುಝಾವದಮಠದ ರಾಮಚಂದ್ರ ಮಹಾ ಸ್ವಾಮಿಜೀಗಳಿಂದ ಮಹಾಅಬಿಷೇಕ ನಂತರ ಕಿಣಗಿಯವರ ಮನೆಯಿಂದ ಪುಜಾಸಾಮಾನು ತಂದು. ಗಾಯಿತ್ರಿಯ ಮಂಡಳಿಯವರಿಂದ ಕೂಡಿದ ಮುತೈದಿಯರಿಗೆ ಉಡಿ ತುಂಬುವ ಕಾರ್ಯಕ್ರಮ. ನಂತರ ಊರಿನ ಪುರವಂತರನ್ನು ವಾದ್ಯದೊಂದಿಗೆ. ಹಾಗೂ ಉಡುಪಿಯ ಕಂಸತಾಳಯ ವಾದ್ಯದೊಂದಿಗೆ ಪುರವಂತರನ್ನು ಕರೆತರಲಾಯಿತು. ಕಾಳಿಕಾದೇವಿಯ ಉತ್ಸವ ಮೂತರ್ಿಯನ್ನು ಸ್ಥಾಪಿಸಿ ದೇವಸ್ತಾನದಲ್ಲಿ ವಾದ್ಯ ಗೋಷದೊಂದಿಗೆ ಪ್ರದಕ್ಷಣೆ ಹಾಕಿ. ಹೂರಟ ಪಲ್ಲಕ್ಕಿಯು ಊರಿನ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಹಳೇಯ ಬಜಾರ ಮುಖಾಂತರ ಬಂದು ಬಸವಣ್ಣನ ಗುಡಿಯ ಮುಂದೆ ಪುರವಂತರ ಸೇವೆ ಮತ್ತು ಉಡುಪಿಯ ಕಂಸತಾಳಯ ಕುಣಿತ ನೇರೆದ ಭಕ್ತರು ಬಿಸಿಲ್ಲನ್ನು ಲೆಕ್ಕಿಸದೆ. ದೇವಿಯ ಮೆರವಣಿಗೆಯಲ್ಲಿ ಉತ್ಸುಕತೆಯಿಂದ ದೇವಿಯ ಸೇವೆಯಲ್ಲಿ ಭಾಗಿಯಾಗಿದ್ದರು. ಮೇರವಣಿಗೆ ಉದ್ದಕ್ಕೂ ಜಯಗೊಷಣೆನ್ನು ಕುಗುತ್ತಾ ದೇವಿಯ ಪಲ್ಲಕ್ಕಿಯ ಮೇರವಣಿಗೆ ಮೂಲ ದೇವಸ್ಥಾನಕ್ಕೆ ತಲುಪಿತು.ಬಳಿಕ ಭಕ್ತ ಸಮುಹಕ್ಕೆ ಅನ್ನಪ್ರಸಾದ ನೆರವೇರಿಸಲಾಯಿತು.
ಜಾತ್ರೆಗೆ ಆಗಮಿಸಿದ ಯುವ ಮುಖಂಡ ಶ್ರೀಶೈಲಗೌಡ ಮಾಗಣಗೇರಿ ಮಾತನಾಡಿ. ಶ್ರೀಕಾಳಿಕಾದೇವಿಯು ಜಾತ್ರೆಯು ಪ್ರತಿವರ್ಷಕ್ಕಿಂತಲೂ ದೇವಿಯ ಉತ್ಸವವು ಅದ್ದೂರಿಯಾಗಿ ನಡೆಯುತ್ತಿದೆ. ಅಲ್ಲದೆ ಇಲ್ಲಿ ಯಾವುದೇ ಜಾತಿ ಮತ ಪಂಥಗಳ ಬೇದವಿಲ್ಲದೆ ಸಾಗಿಬರುವ ಜಾತ್ರೆಯಾಗಿದೆ ಅನೇಕ ತಾಲೂಕಿನ ಹಳ್ಳಿಗಳಲ್ಲಿ ದೇವಿ ಜಾತ್ರೆ ನಡೆಯುತ್ತದೆ. ಆದರೆ ತಾಯಿಯಂದಿರ ಕಡು ಬಿಸಿಲನ್ನು ಲೆಕ್ಕಿಸದೆ ಪ್ರತಿ ಒಬ್ಬ ತಾಯಿಯಂದಿಯರು ದೇವಿಯ ಸೇವೆಲ್ಲಿ ಪಾಲ್ಗೊಂಡಿದ್ದು ದೇವಿಯ ಅಗಾದ ಶಕ್ತಿಯ ಹೊರತು ಇನ್ನೊಂದಿಲ್ಲ ಎಂದರು.
ಬಳಿಕ ಮಾತನಾಡಿದ ವಿಶ್ವಕರ್ಮ ಸಮಾಜದ ಅಧ್ಯಕ್ಷ ದಯನಾಂದ ಪತ್ತಾರ.ಮಾತನಾಡಿ ಕೇವಲ ವಿಶ್ವಕರ್ಮ ಸಮಾಜದವರಲ್ಲದೆ ಊರಿನ ಸಮಸ್ತ ಭಕ್ಕರ ಸಹಾಕಾರವು ನಮಗೆ ಸಿಕ್ಕಿದೆ.ಎಂದು ಹರ್ಷವ್ಯಕ್ತಪಡಿಸಿದರು.
ವಿಶ್ವಕರ್ಮ ಸಮಾಜದ ಮೋಹನ ಪತ್ತಾರ. ಕಾರ್ಯದರ್ಶಿ ಶಾಮಸುಂದರ ಪತ್ತಾರ. ನಿವೃತ್ತ ಶಿಕ್ಷಕ ಆರ್.ಎಮ್.ಪತ್ತಾರ, ಶಿವಾನಂದ ಬಡಿಗೇರ, ಭೀಮಾಶಂಕರ ಸಾಂಬ ಪತ್ತಾರ, ಪರ್ತಕರ್ತ ವಿಜಯಕುಮಾರ ಪತ್ತಾರ, ಆರ್.ಎಮ್.ಪತ್ತಾರ, ಲಕ್ಷ್ಮಣ ಪತ್ತಾರ, ವಿನೊದ ಹಂಚಾನಾಳ, ಸೋಮನಾಥ ಹಂಚನಾಳ, ಪ್ರಭು ಹಂಚನಾಳ, ಕಮಲಾಕರ ಪತ್ತಾರ, ನಾಗು ಪತ್ತಾರ, ಸಿದ್ದಲಿಂಗ ಪತ್ತಾರ, ಪ್ರಮೋದ ಹಂಚನಾಳ, ಈರಣ್ಣ ಬಡಿಗೇರ.(ಬೀದರ), ಸಿದ್ದು ಕನ್ನೂಳ್ಳಿ, ಈರಸಂಗಪ್ಪ ಕನ್ನೂಳ್ಳಿ, ಚಿಂತಾಮಣಿ ಪತ್ತಾರ ಸೇರಿದಂತೆ ನೂರಾರು ಕಾರ್ಯಕರ್ತರು ಜಾತ್ರೆಯಲ್ಲಿ ಪಾಲ್ಗೊಂಡಿದರು.