ತಾಳಿಕೋಟಿ

ಸಾಧಕರನ್ನು ಗೌರವಿಸುವಂಥಹ ಕಾರ್ಯವಾಗಬೇಕು: ತಹಶೀಲ್ದಾರ ಗೋಟೂರ

ಸಾಧಕರನ್ನು ಗೌರವಿಸುವಂಥಹ ಕಾರ್ಯವಾಗಬೇಕು:  ತಹಶೀಲ್ದಾರ ಗೋಟೂರ

ತಾಳಿಕೋಟಿ 20: ಯಾವುದೇ ಒಂದು ಕ್ಷೇತ್ರದಲ್ಲಿ ಸಾಧನೆಯನ್ನು ಮಾಡಬೇಕಾದರೆ ಅದಕ್ಕಾಗಿ ಅವಿರತವಾಗಿ ಶ್ರಮಿಸಬೇಕಾಗುತ್ತದೆ. ಸಾಧನೆ ಮಾಡಿದಂಥಹ ಮಹನೀಯರನ್ನು ಸಮಾಜ ಗುರುತಿಸಿ ಗೌರವಿಸುವಂಥಹ ಕಾರ್ಯ ಆಗಬೇಕು ಎಂದು ತಹಶೀಲ್ದಾರ ಶ್ರೀಧರ ಗೋಟೂರ ಹೇಳಿದರು.

ಇತ್ತೀಚೆಗೆ ಪಟ್ಟಣದ ಶ್ರೀವಾಸವಿ ಕಲ್ಯಾಣ ಮಂಟಪದಲ್ಲಿ ಪ್ರವಾದಿ ಮಹಮ್ಮದ(ಸ)ರ ಜನ್ಮ ದಿನಾಚರಣೆ ಅಂಗವಾಗಿ ಹಮ್ಮಿಕೊಂಡ ವಿವಿಧ ಸಾಧಕರಿಗೆ ಸನ್ಮಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿದರು.

ಸಾಧಕ ಹಿರಿಯ ಪತ್ರಕರ್ತ ಜಿ.ಟಿ. ಘೋರ್ಪಡೆ, ಖ್ಯಾತ ಕಲಾವಿದ ಹುಸೇನ ಮಕಾನದಾರ, ಕಾಯಕ ಯೋಗಿ ಅಲ್ಲಾಭಕ್ಷ ಸಗರ, ಶಿಕ್ಷಕ ವಿ.ಎನ್. ಯಾತಗಿರಿ, ಅಲ್ತಾಫ ನಗಾಚರ್ಿ, ಎಫ್.ಎಸ್. ಭಾಗವಾನ್, ನಿಲಯಪಾಲಕ ಎಸ್.ಎಮ್. ಕಲಬುರ್ಗಾ , ವರದಿಗಾರ ಅಬ್ದುಲ್ಗನಿ ಮಕಾನದಾರ, ಆರೋಗ್ಯಸೇವಕಿ ಎಸ್.ಎ. ಮುದನೂರ, ಡಾ. ಎಂ.ಬಿ. ಮಕಾನದಾರ, ಲಲಿತಾ ನಾಯಕ, ಶರಣಮ್ಮ, ಆನೇಸೂರ, ಡಾ.ಶಫೀಕ ಬಾವೂರ, ಎಸ್.ಎ. ನಾಸರ್, ಜಟ್ಟಿ ಕೂಡಲಗಿ ಇವರನ್ನು ಇಸ್ಲಾಮಿಕ್ ಒಕ್ಕೂಟ ವೇದಿಕೆಯ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಈ ಸಮಯದಲ್ಲಿ ಮುಸ್ಲಿಂ ಧಾರ್ಮಿಕ  ಮುಖಂಡ ಸೈಯದ್ ಶಕೀಲ ಅಹ್ಮದ್ ಖಾಜಿ, ಮುಖಂಡರಾದ ಖಾಜಾಹುಸೇನಸಾಬ ಡೋಣಿ, ಮೊಹಸಿನ ಜಮಖಂಡಿ, ಪುರಸಭೆ ಸದಸ್ಯೆ ಸೈದಾಬಿ ಚಿತ್ತರಗಿ, ಜೈಭೀಮ ಮುತ್ತಗಿ, ಡಾ.ದಸ್ತಗೀರ ಮುಲ್ಲಾ, ಮೌಲಾನಾ ರಹ್ಮತುಲ್ಲಾಹ ಹಾಶ್ಮಿ, ಸುರೇಶಕುಮಾರ ಇಂಗಳಗೇರಿ, ಫಿ.ಎ. ಖಾಜಿ ಇದ್ದರು. 

ಸುದ್ದಿ ಓದಿ