ಬಳ್ಳಾರಿ

ಗ್ರಾಮೀಣ ಕಲೆಗಳಲ್ಲಿ ಉಳಿಸಿ ಬೆಳಸಬೇಕಾದ ಜವಾಬ್ದಾರಿ ವಿದ್ಯಾವಂತರು ಮೇಲಿದೆ: ರಾಘವರೆಡ್ಡಿ

ಗ್ರಾಮೀಣ ಕಲೆಗಳಲ್ಲಿ ಉಳಿಸಿ ಬೆಳಸಬೇಕಾದ ಜವಾಬ್ದಾರಿ ವಿದ್ಯಾವಂತರು ಮೇಲಿದೆ: ರಾಘವರೆಡ್ಡಿ

ಬಳ್ಳಾರಿ: ಹಳ್ಳಿ  ಸಂಪ್ರದಾಯವನ್ನು ವಿದ್ಯಾವಂತರು ನಿರ್ಲಕ್ಷಿಸಬಾರದು, ಗ್ರಾಮೀಣ ಕಲೆಗಳಾದ ನಾಟಕ, ರಂಗಭೂಮಿ, ಬಯಲಾಟ, ನೃತ್ಯ ಜನಪದ ಗಾಯನ, ಜನಪದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ  ತಮ್ಮನ್ನು ತೊಡಗಿಸಿಕೊಂಡು ಅವುಗಳನ್ನು ಉಳಿಸಿ ಬೆಳಸಬೇಕಾದ ಜವಬ್ಧಾರಿ ಇಂದಿನ ಯುವ ಪೀಳಿಗೆ ಮೇಲಿದೆ ಇಂತಹ ಕಲೆಗಳನ್ನು ಮುಂದುವರೆಸಲು ಕೇವಲ ಯುವ ಜನತೆಯಿಂದ ಮಾತ್ರ ಸಾಧ್ಯ ಎಂದು ಕೊರ್ಲಗುಂದಿ ಗ್ರಾ.ಪಂ. ಉಪಾಧ್ಯಕ್ಷ  ವಿ ರಾಘವರೆಡ್ಡಿ ಹೇಳಿದರು. 

ಬಳ್ಳಾರಿ ತಾಲೂಕಿನ ಕೊರ್ಲಗುಂದಿ ಗ್ರಾಮದ ಹಾಲು ಬಸವೇಶ್ವರ ಬಯಲು ವೇದಿಕೆಯಲ್ಲಿ ಹುಲಿಕುಂಟೆರಾಯ ತೊಗಲುಗೊಂಬೆ ಕಲಾ ತಂಡ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವಿಶೇಷ ಘಟಕ ಯೋಜನೆಯಡಿಯಲ್ಲಿ ಹಮ್ಮಿಕೊಂಡಿದ್ದ ಹಳ್ಳಿ ಸಾಂಸ್ಕೃತಿಕ ವೈಭವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. 

ನಮ್ಮ ಗ್ರಾಮದಲ್ಲಿ ಯಾವಗಾಲಾದರೂ ಬಂದು ಇಂತ ಹಳ್ಳಿ ಸೊಗಡಿನ ಗ್ರಾಮೀಣ ಕಾರ್ಯ ಕ್ರಮಗಳನ್ನು ಹಮ್ಮಿಕೊಂಡಲ್ಲಿ ನಮ್ಮ ಗ್ರಾಮದಿಂದ ಮತ್ತು ಪಂಚಾಯಿತಿಯಿಂದ ಎಲ್ಲಾ ಸಹಕಾರವನ್ನು ನೀಡಲಾಗುವುದು ಎಂದು ಕೊರ್ಲಗುಂದಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಮಲ್ಲಮ್ಮ, ಹೇಳಿದರು. 

ಕಾರ್ಯಕ್ರಮದಲ್ಲಿ ತೊಗಲುಗೊಂಬೆ ಕಲಾ ತಂಡದ ಕೆ ಹೊನ್ನೂರಸ್ವಾಮಿ ಪ್ರಸ್ತಾವಿಕವಾಗಿ ಮಾತನಾಡಿದರು. 

ಈ ಕಾರ್ಯಕ್ರಮದಲ್ಲಿ ಜಿ ತಿಪ್ಪೇಸ್ವಾಮಿ ತಂಡದಿಂದ ಸುಗಮ ಸಂಗೀತ, ಎಸ್ ನಾಗಲಕ್ಷ್ಮಿ ತಂಡದಿಂದ ಸಮೂಹ ನೃತ್ಯ, ಲೋಕೇಶ್ ತಂಡದಿಂದ ರೇಣುಕಾ ಯಲ್ಲಮ್ಮ ಮಹಾತ್ಮೆ ಬಯಲಾಟ ಮತ್ತು ತುಳಸಿ ಮತ್ತು ತಂಡದವರಿಂದ ಪಂಚವಟಿ ತೊಗಲುಗೊಂಬೆಯಾಟ ಪ್ರದರ್ಶನ ನಡೆಸಿಕೊಡಲಾಯಿತು.

ಕಾರ್ಯಕ್ರಮದಲ್ಲಿ ಛಲವಾದಿ ಮಲ್ಲಯ್ಯ, ಜಂಬಣ್ಣ, ಸೋಮನಾಥ, ರಾಮಚಂದ್ರ ನಾಯಕ, ನಿಂಗಮ್ಮ, ಗಾದಿಲಿಂಗಪ್ಪ ಗೋಪಾಲರೆಡ್ಡಿ, ಪ್ರಭಾಕರರೆಡ್ಡಿ, ಬಸವರಾಜ್, ಜಯಲಕ್ಷ್ಮಿ ವೇದಿಕೆಯಲ್ಲಿದ್ದರು. ಗ್ರಾಮದ ನೂರಾರು ಜನರು ಕಾರ್ಯಕ್ರಮವನ್ನು ನೋಡಿ ಆನಂದಿಸಿದರು.  ಹುಲಿಕುಂಟೆರಾಯ ತೊಗಲುಗೊಂಬೆ ಕಲಾ ತಂಡದ ಸದಸ್ಯರು ಇದ್ದರು. 

ಕಾರ್ಯಕ್ರಮವನ್ನು ನಂದೀಶ್ವರ ನಿರೂಪಿಸಿದರು, ಲಕ್ಷ್ಮಿದೇವಿ ವಂದಿಸಿದರು. 


ಸುದ್ದಿ ಓದಿ