ಶಿಕ್ಷಕಿ ಮೇಲೆ ಅಸಭ್ಯ ವರ್ತನೆ; ಮುಖ್ಯೋಪಾಧ್ಯಾಯ ಮೇಲೆ ದೂರು
ಕೊಲ್ಹಾರ 25: ನನಗೆ ಅಸಭ್ಯ ಅಶ್ಲೀಲ, ವರ್ತಿಸುತ್ತಾರೆ ಎಂದು ತಾಲೂಕಿನ ಸಮೀಪದ ಜಿಎಚ್ಪಿ ಎಸ್ ಹೊಳೆ ಹಂಗರಗಿ ಶಾಲೆಯ ಸಹ ಶಿಕ್ಷಕಿ ಆ ಶಾಲೆಯ ಪ್ರಭಾರ ಮುಖ್ಯೋಪಾಧ್ಯಾಯ ಮೇಲೆ ಪ್ರಕರಣ ದಾಖಲು ಮಾಡಿದ ಬೆನ್ನಲ್ಲೇ ಗ್ರಾಮಸ್ಥರು ಶಾಲೆಯ ಮುಂದೆ ಪ್ರತಿಭಟನೆ ನಡೆಸುತ್ತಿದ್ದರು ಹೊಳೆ ಹಂಗರಗಿ ಸರ್ಕಾರಿ ಶಾಲೆಯ (ಇಂಚಾರ್ಜ) ಪ್ರಭಾರ ಮುಖ್ಯೋಪಾಧ್ಯಾಯ ರವಿಕಿರಣ ಎನ್.ಪಾಟೀಲನ ಮೇಲೆ ಅಲ್ಲಿನ ಶಾಲಾ ಸಹ ಶಿಕ್ಷಕಿ ದೂರು ನೀಡಿದ್ದಾಳೆ ಶಾಲೆಯಲ್ಲಿ ಯಾರು ಇಲ್ಲದ ಸಂದರ್ಭದಲ್ಲಿ ಇಲ್ಲಿನ ಮುಖ್ಯ ಶಿಕ್ಷಕ ನನ್ನ ಸೀರೆ ಜಗ್ಗುವುದು,ಕೈ ಹಿಡಿದು ಎಳೆಯುವುದು, ಮೈಮೇಲೆ ಬರುವುದು, ಅಶ್ಲೀಲವಾಗಿ ಮಾತನಾಡುವುದು,
ಅನುಚಿತ ವರ್ತನೆಯಿಂದ ನಡೆದುಕೊಳ್ಳುವುದು, ಶಿಕ್ಷಕನ ವರ್ತನೆ, ದೌರ್ಜನ್ಯ, ಕಿರುಕುಳಕ್ಕೆ ಸಂಬಂಧಿಸಿದಂತೆ ದಯವಿಟ್ಟು ನನಗೆ ನ್ಯಾಯ ಒದಗಿಸಿ ಕೋಡಬೇಕು ಎಂದು ಇಲ್ಲಿನ ಸಹ ಶಿಕ್ಷಕಿ ಮುಖ್ಯ ಶಿಕ್ಷಕನ ವಿರುದ್ಧ ಬಬಲೇಶ್ವರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾಳೆ ಪ್ರಕರಣ ತೆಗೆದುಕೊಂಡ ಪೋಲಿಸರು ತನಿಖೆಗೆ ಮುಂದಾಗಿದ್ದಾರೆಉರಿನ ಹಿರಿಯರು, ಎಸ್.ಡಿ.ಎಮ್.ಸಿ ಸದಸ್ಯರು ಶಾಲೆಯ ಮುಖ್ಯ ಗುರುಗಳಾದ ರವಿಕಿರಣ ಪಾಟೀಲ ಅವರ ಮೇಲೆ ಇಲ್ಲಸಲ್ಲದ ಸುಳ್ಳು ಆರೋಪ ಮಾಡಿದ್ದಾರೆ ದೂರು ನೀಡಿದ ಸಹಶಿಕ್ಷಕಿ ಹಾಗೂ ಅವರ ತಂದೆ ಇದೆ ಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು ಇವರ ನಡವಳಿಕೆ ಸರಿ ಇರುವುದಿಲ್ಲ ಸಮಯಕ್ಕೆ ಸರಿಯಾಗಿ ಶಾಲೆಗೆ ಬರುವುದಿಲ್ಲ , ವಿದ್ಯಾರ್ಥಿಗಳಿಗೆ ಸರಿಯಾಗಿ ಪಾಠ ಬೋಧನೆ ಮಾಡುವುದಿಲ್ಲ ,ಇಲ್ಲಿನ ಮುಖ್ಯ ಗುರುಗಳಿಗೆ ಅವಾಚ್ಯ ಪದಗಳಿಂದ ನಿಂದನೆ ಮಾಡಿರುತ್ತಾರೆ
ಶಾಲೆಯಲ್ಲಿ ಎಸ್ ಡಿ ಎಮ್ ಸಿ ಕಮೀಟಿ ಅವರಿಗೆ ಸಾಕಷ್ಟು ಬಾರಿ ಬುದ್ಧಿವಾದ ಹೇಳಿದರು ಅವರ ನಡತೆ ಬದಲಾಗಲಿಲ್ಲಾ ಇಲ್ಲಿನ ಮುಖ್ಯ ಶಿಕ್ಷಕ ರವಿಕಿರಣ ನಿಂ.ಪಾಟೀಲ ಅವರು 10 ವರ್ಷಗಳಿಂದ ಇದೆ ಶಾಲೆಯಲ್ಲಿ ಒಳ್ಳೆಯ ರೀತಿಯಿಂದ ಶಾಲೆಯನ್ನು ಸುಧಾರಿಸಿಕೊಂಡು ಬಂದಿರುತ್ತಾರೆ ಅವರ ಮೇಲೆ ಯಾವುದೇ ಕ್ರಮ ಕೈಗೊಳ್ಳಬಾರದೆಂದು ಶಾಲೆಯ ಎಸ್ ಡಿ ಎಮ್ ಸಿ ಸದಸ್ಯರು ಸೇರಿದಂತೆ ಊರಿನ ಮುಖಂಡರು ಶಾಲೆಯ ಗೆಟ್ ಮುಂದೆ ಗಾಂಧೀಜಿ ಪೋಟೋ ಇಟ್ಟು ಎರಡು ದಿನಗಳಿಂದ ಧರಣಿ ನಡೆಸುತ್ತಿದ್ದರು ,ಧರಣಿ ಸ್ಥಳಕ್ಕೆ ಮಂಗಳವಾರ ವಿಜಯಪುರ ಡಿಡಿಪಿಐ ವೀರಯ್ಯ ಸಾಲಿಮಠ ಭೇಟಿ ನೀಡಿ ಶಾಲೆಯಲ್ಲಿ ನಡೆದ ಶಿಕ್ಷಕರ ವಿಷಯವನ್ನು ಗ್ರಾಮಸ್ಥರ ಅಭಿಪ್ರಾಯ ಪಡೆದುಕೊಂಡು ಪ್ರಾಮಾಣಿಕವಾಗಿ ಬಗೆ ಹರಿಸಿ ಶಿಕ್ಷಕರ ಮೇಲೆ ಶಿಸ್ತು ಕ್ರಮ ಜರುಗಿಸುತ್ತವೆ ಹೇಳಿದಾಗ ಗ್ರಾಮಸ್ಥರು ಪ್ರತಿಭಟನೆಯನ್ನು ಕೈಬಿಟ್ಟಿದ್ದಾರೆ.
ಸಿದ್ದಪ್ಪ ದೇಸಾಯಿ,ಅಶೋಕ ನ್ಯಾಮಗೊಂಡ, ಮುತ್ತಪ್ಪ ಮೇಟಿ,ಸಾಬು ಕೊಂತ್ತಿಕಲ್ , ಶ್ರೀಶೈಲ ಪರಗೊಂಡ, ಲಕ್ಷ್ಮಣ ಗೂಳಿ,ಗಜಾನಂದ ಮೇಟಿ,ದರೆಪ್ಪ ನ್ಯಾಮಗೊಂಡ, ಶಿವಪ್ಪ ವಾಣಿ, ಸೇರಿದಂತೆ ಪೋಲಿಸ್ ಅಧಿಕಾರಿಗಳು ಇದ್ದರು ಕೊಟ್ ಹೊಳೆ ಹಂಗರಗಿ ಗ್ರಾಮದ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕ ರವಿಕಿರಣ ಎನ್.ಪಾಟೀಲ ಮೇಲೆ ಬಬಲೇಶ್ವರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ನಮಗೆ ದೂರು ಬಂದಿತ್ತು ಡಿಡಿಪಿಐಗೆ ವರದಿ ನೀಡಿದ್ದೆ ನಂತರ ಅವರನ್ನು ಅಮಾನತು ಮಾಡಲಾಗಿದೆ -ಬಸವರಾಜ ತಳವಾರ ಕ್ಷೇತ್ರ ಶಿಕ್ಷಣಾಧಿಕಾರಿ ಬಬಲೇಶ್ವರ