ಜಮಖಂಡಿ

ಬಾಟಲ್ ಕಬ್ಬಿನ ರಸ ಉತ್ಪಾದನಾ ಘಟಕ ಉದ್ಘಾಟನೆ

ಬಾಟಲ್ ಕಬ್ಬಿನ ರಸ ಉತ್ಪಾದನಾ ಘಟಕ ಉದ್ಘಾಟನೆ
ಜಮಖಂಡಿ ಸಾವಳಗಿಯಲ್ಲಿ ನಡೆದ ಸಮಾರಂಭದಲ್ಲಿ ಡಾ.ಚೆನ್ನಬಸವ ಶ್ರೀಗಳು ಆರ್ಶಿವಚನ ನೀಡುತ್ತಿರುವುದು

ಲೋಕದರ್ಶನ ವರದಿ,

ಜಮಖಂಡಿ 20: ರೈತರು ಕೃಷಿಯನ್ನು ಉದ್ಯಮವನ್ನಾಗಿಸಿಕೊಂಡು ಆರ್ಥಿಕವಾಗಿ ಸಬಲರಾಗಬೇಕು.ಆಗ ಮಾತ್ರ ದೇಶ ಆರ್ಥಿಕವಾಗಿ ಉತ್ತಮಗೊಳ್ಳಲು ಸಾಧ್ಯವೆಂದು ಓಲಿಮಠದ ಡಾ.ಚನ್ನಬಸವ ಮಹಾಸ್ವಾಮಿಜೀ ನುಡಿದರು.

ತಾಲೂಕಿನ ಸಾವಳಗಿಯಲ್ಲಿ ಪ್ರಗತಿಪರ ರೈತ ತವನಪ್ಪ ಆಲಗೂರು ನೂತನವಾಗಿ ಪ್ರಾರಂಭಿಸಿದ ಬಾಟಲ್ ಕಬ್ಬಿನ ರಸ ಉತ್ಪಾದನಾ ಘಟಕ ಉದ್ಘಾಟನಾ ಸಮಾರಂಭದ ಸಾನಿಧ್ಯ ವಹಿಸಿ ಆಶರ್ೀವಚನ ನೀಡಿದರು.

ಪ್ರತಿಯೊಬ್ಬ ರೈತನು ಸಾವಯುವ ಕೃಷಿ ಪದ್ಧತಿ ರೂಡಿಸಿಕೊಂಡು ಕೃಷಿ ನಡೆಸುವ ಕಾಲ ಮತ್ತೇ ಬರಲಿದೆ. ಕ್ರಿಮಿನಾಶಕ ಪಾನೀಯಗಳು ಇಂದು ಆರೋಗ್ಯಕ್ಕೆ ಹಾನಿಕರವಾಗಿದ್ದು, ರಾಸಾಯನಿಕವಿಲ್ಲದ ಪಾನೀಯಗಳನ್ನು ಸೇವಿಸಬೇಕಾಗಿದೆ. ಪ್ರತಿಯೊಬ್ಬರು ಜೀವನದಲ್ಲಿ ಏನನ್ನಾದರೂ ಸಾಧಿಸಬೇಕೆಂಬ ಛಲಗಾರಿಕೆ ಹೊಂದಿ ಉತ್ತಮ ಉದ್ಯಮ ಸ್ಥಾಪಿಸುವ ಕಾರ್ಯದಲ್ಲಿ ತೊಡಗಬೇಕು. ಒಂದೇ ವೃತ್ತಿಯಿಂದ ಇಂದು ಬದುಕು ಸಾಗುವುದು ಕಷ್ಠಕರವಾಗಿದೆ. ನಮ್ಮ ಜನ ಹೃದಯ ಸ್ರೀಮಂತರಾಗಿದ್ದು ಬದುಕನ್ನು ಬಡತನದಲ್ಲಿ ಸಾಗಿಸುತ್ತಿದ್ದಾರೆ. ಈ ದೇಶದ ಸಂಪತ್ತು ಆಧ್ಯಾತ್ಮಕತೆಯಿಂದ ಕೂಡಿದೆ. ಉದ್ಯೋದೊಂದಿಗೆ ಆಧ್ಯಾತ್ಮದಲ್ಲೂ ದೇವರನ್ನು ಕಾಣಬೇಕು. ಶಿಕ್ಷಣದೊಂದಿಗೆ ಆರ್ಥಿಕವುಳ್ಳವರಾಗಿ ಉತ್ತಮ ಜೀವನ ಸಾಗಿಸುವ ಜ್ಞಾನ ಪಡೆದುಕೊಳ್ಳಬೇಕೆಂದರು.

ಅತಿಥಿಗಳಾಗಿದ್ದ ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ ಮಾತನಾಡಿ, ರೈತ ಆರ್ಥಿಕವಾಗಿ ಬೆಳೆಯಬೇಕಾದರೆ ಉದ್ಯೋಗದಲ್ಲೂ ಹೆಚ್ಚು ಆಸಕ್ತನಾಗಬೇಕು. ಬೆಳೆದ ಬೆಳೆಗೆ ಸೂಕ್ತ ಬೆಂಬಲ ಬೆಲೆ ಸಿಗಬೇಕಾದರೆ ಸಾವಯುವ ಕೃಷಿ ಪದ್ಧತಿಗೆ ಶರಣಾಗಬೇಕು. ಕಬ್ಬು ಬೆಳೆದ ರೈತ ಇಂದು ಸಂಕಷ್ಟದಲ್ಲಿದ್ದು, ರೈತ ಬೆಳೆದ ಬೆಳೆಗಳು ದಲ್ಲಾಳಿಗಳಿಗೆ ಲಾಭ ಸಿಗುವಂತಾಗಿದೆ. ಸಕ್ಕರೆ ಕಾಖರ್ಾನೆಗಳಲ್ಲೂ ಕಬ್ಬಿನ ತೂಕದಲ್ಲಿ ವ್ಯತ್ಯಾಸಗಳು ಕಂಡು ಬಂದಿದ್ದು, ಯಾರನ್ನು ನಂಬುವ ಸ್ಥಿತಿಯಲ್ಲಿ ಇಂದು ರೈತನಿಲ್ಲ. ರೈತನು ಉದ್ಯಮಿದಾರನಾದರೆ ಮಾತ್ರ ಆತನಿಗೆ ಸಾಲದ ಸಂಕಷ್ಟ ತಪ್ಪಲು ಸಾಧ್ಯ. ಇಂದು ಕೇಂದ್ರ-ರಾಜ್ಯ ಸರ್ಕಾರಗಳು ರಿಯಾಯತಿಯಲ್ಲಿ ಸಾಕಷ್ಟು ಸಾಲ ಸೌಲಭ್ಯ ಒದಗಿಸುತ್ತಿದ್ದು, ಅವುಗಳ ಸದುಪಯೋಗ ಮಾಡಿಕೊಳ್ಳಬೇಕೆಂದರು.

ಉದ್ಘಾಟಕರಾಗಿದ್ದ ಶಿವಮೊಗ ಜಿಲ್ಲೆ ಸಾಗರದ ಸುಭೀಕ್ಷಾ ಆರ್ಗಾನಿಕ ಸಂಸ್ಥೆಯ ಅಧ್ಯಕ್ಷ ಆನಂದ, ವಿಜ್ಞಾನಿಗಳಾದ ಡಾ.ಟಿ.ಟಿ.ಭೋರ್ಸಿ,ಎ.ಚಕ್ರವರ್ತಿ ,ಡಾ.ಸಂಜಯ ಪಾಟೀಲ,ಡಾ.ಕೆ. ಆರ್. ಹುಲ್ಲುನಾಜೇಗೌಡ,ಅಪರಾಧ ವಿಭಾಗದ ಎಸ್ಪಿ ಜಿನೇಂದ್ರ ಖನಗಾವಿ,ಪ್ರಶಾಂತ ಭಾಗವತ್, ಅಭಯ ನಾಂದ್ರೇಕರ ಸಾವಯುವ ಕೃಷಿ ಪದ್ದತಿ ಬಗ್ಗೆ ಮಾತನಾಡಿದರು.

ರಾಜಸ್ಥಾನ ತಿಜಾರಾ ಪದ್ಮಾವತಿ ಧಾಮದ ಸೌರಭಸೇನ ಭಟ್ಟಾರಕ ಮಹಾಸ್ವಾಮಿಜಿ ಸಾನಿಧ್ಯ ವಹಿಸಿ ಆಶರ್ೀವಚನ ನೀಡಿದರು.ಉದ್ಯಮಿ ಜಗದೀಶ ಗುಡಗುಂಟಿ,ವಿಪ ಮಾಜಿ ಸದಸ್ಯ ಜಿ.ಎಸ್.ನ್ಯಾಮಗೌಡ, ಆರ್.ಟಿ.ಪಾಟೀಲ, ಪತ್ರಕರ್ತ ಗುರುರಾಜ ವಾಳ್ವೇಕರ, ಸಿ.ಟಿ. ಉಪಾಧ್ಯೆ, ಧಾರವಾಡದ ಖೋತ, ಕಿಶನ್ ಚಕ್ರವರ್ತಿ , ಸಂಗಪ್ಪ ಲೋಬೋಗೋಳ, ಡಾ.ಆನಂದ ಉಪಾಧ್ಯೆ, ಸಾವಳಗಿ ಗ್ರಾಪಂ ಅಧ್ಯಕ್ಷೆ ಸುನಂದಾ ಬಾಬು ಮಾನೋಜ, ಉಪಾಧ್ಯಕ್ಷೆ ಮನ್ನುಮತಿ ಉಪಾಧ್ಯೆ, ಕೃಷಿ ಸಹಾಯಕ ನಿರ್ದೇಶಕ ಬಿ.ಜಿ.ಬುಜರುಖ್,ಶ್ರೀಮಂತವ್ವ ಚಂದು ಆಲಗೂರ ಅನೇಕರು ವೇದಿಕೆಯಲ್ಲಿದ್ದರು. 

ಜಿನಸೇನ ಅಲ್ಪಸಂಖ್ಯಾತರ ಶಿಕ್ಷಣ ಸಂಸ್ಥೆಯ ಮಾತೃಛಾಯಾ ಶಾಲಾ ಕಟ್ಟಡದ ಅಡಿಗಲ್ಲು ಸಮಾರಂಭ ನಡೆಯಿತು. ಶಿಕ್ಷಕಿ ಶೈಲಾ ಮಠಪತಿ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ತವನಪ್ಪ ಆಲಗೂರ ಸ್ವಾಗತಿಸಿದರು. ಚಿತ್ತ್ರಂಜನ್ ನಾಂದ್ರೇಕರ ನಿರೂಪಿಸಿದರು. ಪಾಶ್ವನಾಥ ಉಪಾಧ್ಯೆ ವಂದಿಸಿದರು. 


ಸುದ್ದಿ ಓದಿ