ಎಐಸಿಸಿ ನೂತನ ಅಧ್ಯಕ್ಷರಾಗಿ ಖರ್ಗೆ ಅಧಿಕಾರ ಸ್ವೀಕಾರ: ಅನ್ನಸಂತರ್ಪಣಾ ಕಾರ್ಯಕ್ರಮ
ತಾಳಿಕೋಟಿ: ಇತ್ತೀಚೆಗೆ ನಡೆದ ಎಐಸಿಸಿ ನೂತನ ಅಧ್ಯಕ್ಷರ ಚುನಾವಣೆಯಲ್ಲಿ ರಾಜ್ಯದಿಂದ ಪ್ರಥಮ ಬಾರಿಗೆ ಆಯ್ಕೆಯಾದ ಕಾಂಗ್ರೆಸ್ನ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅಧಿಕಾರ ಪದಗ್ರಹಣ ಮಾಡಿದ ಸಂಭ್ರಮದಲ್ಲಿ ಕಾಂಗ್ರೆಸ್ ಮುಖಂಡ ಆನಂದಗೌಡ ದೊಡಮನಿ ನೇತೃತ್ವದ ಎಬಿಡಿ ಫೌಂಡೇಶನ್ದಿಂದ ಅನ್ನಸಂತರ್ಪಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಪಟ್ಟಣದ ಡಾ. ಬಿ.ಆರ್. ಅಂಬೇಡ್ಕರ ಸಭಾಭವನದ ಮುಂಭಾಗದಲ್ಲಿ ಆಯೋಜಿಸಿದ ಅನ್ನಸಂತರ್ಪಣಾ ಕಾರ್ಯಕ್ರಮಕ್ಕೆ ನಿವೃತ್ತ ಪೋಲಿಸ್ ವರಿಷ್ಠಾಧಿಕಾರಿ ಕಾಂಗ್ರೆಸ್ ಮುಖಂಡ ಎಸ್.ಬಿ. ಕಟ್ಟಿಮನಿ ಚಾಲನೆ ನೀಡಿ ಮಾತನಾಡಿ ಖರ್ಗೆ ಯವರು ದೇಶ ಕಂಡ ಧೀಮಂತ ರಾಜಕಾರಣಿ, ಅಜಾತ ಶತ್ರು, ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ಕೆಲಸ ಮಾಡಿ ಇಂದು ಪಕ್ಷದ ಅತ್ಯುನ್ನತ ಸ್ಥಾನಕ್ಕೆ ತಲುಪಿದ್ದು ನಮ್ಮೆಲ್ಲರಿಗೆ ಹೆಮ್ಮೆಯ ವಿಷಯವಾಗಿದೆ. ಪಕ್ಷ ಅವರ ಅಧಿಕಾರ ಅವಧಿಯಲ್ಲಿ ಅತ್ಯುತ್ತಮ ಸಾಧನೆ ಮಾಡಲಿದೆ ಎಂದರು.
ಈ ಸಮಯದಲ್ಲಿ ಪುರಸಭೆ ಸದಸ್ಯರಾದ ಮಲ್ಲಿಕಾರ್ಜುನ ಪಟ್ಟಣಶೆಟ್ಟಿ, ಪರಶುರಾಮ ತಂಗಡಗಿ, ಮುಖಂಡರಾದ ಶ್ರೀಧರ ಪಾಟೀಲ, ಆನಂದಗೌಡ ಮದರಕಲ್ಲ, ಶಿವರಡ್ಡಿ ಐನಪೂರ (ಭಂಟನೂರ), ಜೋಲಿ ವಕೀಲರು ಶಂಕರ ಪಡಸಾಲಿ, ಮಹೇಶ ಚಲವಾದಿ, ಹಾಗೂ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು