ನಾಳೆ ಲಯನ್ಸ್ ಸಂಸ್ಥೆಯ ಅಧಿಕಾರ ಪದಗ್ರಹಣ ಸಮಾರಂಭ
ಲೋಕದರ್ಶನ ವರದಿ,
ಜಮಖಂಡಿ : 14: ಲಯನ್ಸ್ ಸಂಸ್ಥೆ ಜಮಖಂಡಿಯ 53 ನೇ ವರ್ಷದ ಅಧಿಕಾರ ಪದಗ್ರಹಣ ಸಮಾರಂಭ ಜೂ.16 ನಗರದ ಪಂಚಮಸಾಲಿ ಸಮುದಾಯ ಭವದಲ್ಲಿ ನಡೆಯಲಿದೆಂದು ಲಯನ್ಸ್ ಸಂಸ್ಥೆಯ ನೂತನ ಅಧ್ಯಕ್ಷ ಸಂಗಮೇಶ ಕೌಜಲಗಿ ಹೇಳಿದರು.
ನಗರದ ರಮಾ ನಿವಾಸದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು. 2022-23ರ ಸೇವಾವಧಿ ಪೂರ್ಣಗೊಳ್ಳಲಿದ್ದು. 2023-24ರ ಅಧಿಕಾರ ಪದಗ್ರಹಣ ಸಮಾರಂಭ ಜೂ.16ರಂದು ಸಂಜೆ 6 ಗಂಟೆಗೆ ಜರುಗಲಿದೆ. ನೂತನ ಅಧ್ಯಕ್ಷರಾಗಿ ಸಂಗಮೇಶ ಕೌಜಲಗಿ, ಕಾರ್ಯದರ್ಶಿ ನರೇಂದ್ರ ಮಾನೆ, ಖಜಾಂಚಿ ಶಿವಅಂಗ ಬಾಗಲಕೋಟ ಅಧಿಕಾರವಹಿಸುವರು ಎಂದರು.
ಅಧಿಕಾರ ವಹಿಸಿಕೊಂಡ ನಂತರ ಮುಖ್ಯವಾಗಿ ಲಯನ್ಸ್ ಸಂಸ್ಥೆಯು ಅತೀ ಕಡು ಬಡತನದ ಮಕ್ಕಳಿಗೆ, ಅನಾಥ ಮ್ಕಳಿಗೆ ಉಚಿತ ಶಿಕ್ಷಣ ನೀಡಿ. ಮಕ್ಕಳಿಗೆ ಗುಣಮಟ್ಟದ ಶಿಕ್ಷಣದ ವಿದ್ಯಾಭ್ಯಾಸವನ್ನು ನೋಡಿಕೊಳ್ಳೂವುದು. ವಿವಿಧ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು. ವ್ಯಕ್ತಿತ್ವ ವಿಕಾಸನ, ಕೌಶಲ್ಯ ತರಬೇತಿಗಳನ್ನು ಹಮ್ಮಿಕೊಳ್ಳುವುದು. ಆರೋಗ್ಯ, ಉಚಿತ ಆರೋಗ್ಯ ಶಿಬಿರಗಳನ್ನು ಹಮ್ಮಿಕೊಳ್ಳುವುದು. ಪರಿಸರ, ಪರಿಸರ ರಕ್ಷಣೆಯ ಚಟುವಟಿಕೆಗಳನ್ನು, ಸಸಿ,ಗಿಡಗಳನ್ನು ನೆಟ್ಟು ಅವುಗಳನ್ನು ರಕ್ಷಿಸುವುದು. ದಿ. ಎಸ್. ಎಮ್.ಜತ್ತಿ ಅವರ ಸ್ಮರನಾರ್ಥವಾಗಿ ಅನ್ನದಾಸೋಹ ಕಾರ್ಯಕ್ರಮ ಮತ್ತು ಪತ್ರಿ ತಿಂಗಳು ಸರಕಾರಿ ಆಸ್ಪತ್ರೆಯಲ್ಲಿ ಉಚಿತ ಅನ್ನದಾಸೋಹ ಮಾಡುವದು. ಕಾನೂನು ಅರಿವು ನೆರವು ಕಾರ್ಯಕ್ರಮಗಳನ್ನು ಸೇರಿದಂತೆ ಹಲವಾರು ಯೋಜನೆಗಳನ್ನು ರೂಪಿಸಿಕೊಂಡಿದ್ದೇವೆ ಎಂದರು.
ನೂತನ ಅಧಿಕಾರ ಪದಗ್ರಹಣ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಡಾ, ಎಸ್, ಎಮ್, ಹುಲ್ಲುರ, ಸಹಾಯಕ ಪ್ರಾಧ್ಯಾಪಕ ಜಿ,ಕೆ, ಕಾನೂನು ಮಹಾವಿದ್ಯಾಲಯ ಹುಬ್ಬಳ್ಳಿ, ಪದಗ್ರಹಣ ಅಧಿಕಾರಿಯಾಗಿ ಚನ್ನವೀರ ದುಂ. ಮುಂಗುರವಾಡಿ, ಜಂಟಿ ಜಿಲ್ಲಾ ಕ್ಯಾಬಿನೆಟ್ ಖಜಾಂಚಿ, ಲಯನ್ಸ್ ಅಂತರಾಷ್ಟ್ರೀಯ ಜಿಲ್ಲೆ ಕನರ್ಾಟಕ-ಗೋವಾ ಇವರು ಆಗಮಿಸಲಿದ್ದಾರೆಂದು ತಿಳಿಸಿದ್ದರು.
ಇದೆ ಸಂಧರ್ಭದಲ್ಲಿ ಸಿದ್ದು ಕುಂಬಾರ, ಆರ್.ಕೆ.ನಾಯಕ, ಪ್ರಭು ಜನವಾಡ, ಪ್ರವೀಣ ಮೈಗೂರ, ಸಂತೋಷ ಕೊಟ್ಯಾಳ, ಎಮ್.ಪಿ.ತನ್ನಪ್ಪಗೋಳ, ಎಮ್.ಎಮ್.ಮೂಡಲಗಿ, ಎಸ್.ಎ.ಹೊಸಟ್ಟಿ ಸೇರಿದಂತೆ ಅನೇಕರು ಸುದ್ದಿಗೋಷ್ಠಿಯಲ್ಲಿ ಇದ್ದರು.