ಕುಷ್ಟಗಿ

ಮಕ್ಕಳ ಕಲಿಕೆಯನ್ನು ಅರ್ಥಪೂರ್ಣಗೊಳಿಸುವಲ್ಲಿ ಕಲಿಕಾ ಸಾಮಗ್ರಿಗಳ ಪಾತ್ರ ಮಹತ್ವ: ಕ್ಷೇತ್ರ ಶಿಕ್ಷಣಾಧಿಕಾರಿ ಸುರೇಂದ್ರ ಕಾಂಬಳೆ

ಮಕ್ಕಳ ಕಲಿಕೆಯನ್ನು ಅರ್ಥಪೂರ್ಣಗೊಳಿಸುವಲ್ಲಿ ಕಲಿಕಾ ಸಾಮಗ್ರಿಗಳ ಪಾತ್ರ ಮಹತ್ವ: ಕ್ಷೇತ್ರ ಶಿಕ್ಷಣಾಧಿಕಾರಿ ಸುರೇಂದ್ರ ಕಾಂಬಳೆ

ಕುಷ್ಟಗಿ 29: ಕಲಿಕೆಯಲ್ಲಿ ಹಿಂದುಳಿದ ಮಕ್ಕಳ ಕಲಿಕೆಯನ್ನು ಅರ್ಥಪೂರ್ಣವಾಗಿ ಕಟ್ಟುವುದರಲ್ಲಿ ಶಿಕ್ಷಕರೇ ತಯಾರಿಸಿದ ಕಲಿಕಾ ಸಾಮಗ್ರಿಗಳು ಹೆಚ್ಚು ಮಹತ್ವಪೂರ್ಣವಾದಗಳು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸುರೇಂದ್ರ ಕಾಂಬಳೆ ಹೇಳಿದರು.  

ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯ ಕುಷ್ಟಗಿ ಮತ್ತು ಅಜೀಮ್ ಪ್ರೇಮ್ ಜಿ ಫೌಂಡೇಶನ್ ರವರ ಸಯೋಗದಲ್ಲಿ ಗುರುವಾರ ಬೆಳಿಗ್ಗೆ ಇಲ್ಲಿನ ಸರ್ಕಾರಿ ಬಾಲಕರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಏರಿ​‍್ಡಸಿದ್ದ ಕುಷ್ಟಗಿ ಮತ್ತು ಹಿರೇಮನ್ನಾಪುರ ಕ್ಲಸ್ಟರಗಳ ಶಿಕ್ಷಕರು ತಯಾರಿಸಿದ ನಲಿ ಕಲಿ ಕಲಿಕಾ ಸಾಮಗ್ರಿಗಳ ಮೇಳವನ್ನು ಉದ್ಘಾಟಿಸಿ ಮಾತನಾಡಿದ ಅವರು ಕೋವಿಡ್ ನಂತರ ಕಾಲಘಟ್ಟದಲ್ಲಿ ಶಿಕ್ಷಕರು ನಾವಿನ್ಯ  ಕಲಿಕಾ ಚಟುವಟಿಕೆಗಳ ಮೂಲಕ ಮಕ್ಕಳ ಕಲಿಕೆಯನ್ನು ಅರ್ಥಪೂರ್ಣ ಗೊಳಿಸುವ ಬಹುದೊಡ್ಡ ಜವಾಬ್ದಾರಿಯನ್ನು ನಿಭಾಯಿಸಬೇಕಾಗಿದೆ, ಒಂದು ಚಿತ್ರ ಸಾವಿರ ಪದಗಳಿಗೆ ಸಮ ಎನ್ನುವಂತೆ ಒಂದು  ಬೋಧನೋಪಕರಣ ಮಕ್ಕಳ ಕಲಿಕೆಯನ್ನು ಬಹುಬೇಗ ದೃಢಪಡಿಸುತ್ತದೆ, ಕೋವಿಡ್ ಸಂದರ್ಭದಲ್ಲಿ ಮಕ್ಕಳ ಕಲಿಕೆಗೆ ಪೆಟ್ಟಾಗಿದ್ದು, ಅವರ ಕಲಿಕಾ ಕೊರತೆಯನ್ನು ನೀಗಿಸುವ ಸವಾಲಿನ ಕಾರ್ಯವನ್ನ ಶಿಕ್ಷಕರು ನಿಭಾಯಿಸಬೇಕಾಗಿದೆ ಎಂದು ಹೇಳಿದರು.  

ಕ್ಷೇತ್ರ ಸಮನ್ವಯ ಅಧಿಕಾರಿ ಜಗದೀಶ್ ಮಾತನಾಡಿ ನಲಿ ಕಲಿ ಶಿಕ್ಷಕರು ಮಕ್ಕಳ ಬುನಾದಿ ಭಾಷಾಜ್ಞಾನ ಮತ್ತು ಸಂಖ್ಯ ಜ್ಞಾನವನ್ನು ಅರ್ಥಪೂರ್ಣವಾಗಿ ಕಲಿಸುವಲ್ಲಿ  ಹೆಚ್ಚು ಕ್ರಿಯಾಶೀಲರಾಗಿ ಕಾರ್ಯನಿರ್ವಹಿಸಲು ಕಿವಿಮಾತು ಹೇಳಿದರು , ಬುನಾದಿ ಕಲಿಕೆಗಯೆ  ಮಕ್ಕಳ ಭವಿಷ್ಯವನ್ನು ನಿರ್ಮಿಸುತ್ತದೆ  ಎಂದರು ಸದರಿ ಮೇಳದಲ್ಲಿ ಕುಷ್ಟಗಿ ವಲಯದ ಆರು ಕ್ಲಸ್ಟರ್  ನ150ಕ್ಕೂ ಹೆಚ್ಚು ಶಿಕ್ಷಕರು ಪಾಲ್ಗೊಂಡು ಮಕ್ಕಳ ಕಲಿಕೆಯಲ್ಲಿ ಬೋಧನೋಪಕರಣಗಳ ಪಾತ್ರದ ಕುರಿತು ಚರ್ಚಿಸಿದರು.  

ಸಂಪನ್ಮೂಲ ವ್ಯಕ್ತಿಗಳಾಗಿ  ಜೀವನ ಸಾಬ್ ವಾಲಿಕಾರ್ ಬಿ ಆರ್ ಪಿ , ಫೌಂಡೇಶನ್ ನ ಸಂಪನ್ಮೂಲ ವ್ಯಕ್ತಿಗಳಾದ ನಂದೀಶ್ , ವೀರೇಂದ್ರ ಕುಮಾರ್, ಹಾಲೇಶ್ ಡಿ ಬಿ, ಪುರಸಭೆ ಸದಸ್ಯ ಮಂಜುನಾಥ್ ಕಟ್ಟಿಮನಿ , ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಅಧ್ಯಕ್ಷ  ಲಕ್ಷ್ಮಣ್ ಪೂಜಾರಿ, ಪ್ರಧಾನ ಕಾರ್ಯದರ್ಶಿ ಕಳಕ್ ಮಲ್ಲೇಶ್ ಭೋಗಿ,  ಎಸ್ಡಿಎಂಸಿ ಅಧ್ಯಕ್ಷ ಬಾಳಪ್ಪ ಬೇವಿನಕಟ್ಟಿ, ಸರ್ಕಾರಿ ನೌಕರ ಸಂಘದ ನಿರ್ದೇಶಕ ಅಮರೇಗೌಡ ನಾಗೂರ್, ವಾಲ್ಮೀಕಿ ಪತ್ತಿನ ಸಹಕಾರಿ ಸಂಘ ಉಪಾಧ್ಯಕ್ಷ ಹನುಮಂತಪ್ಪ,  ಮುಖ್ಯೋಪಾಧ್ಯಯ ರತ್ನಮ್ಮ ದೇಸಾಯಿ,  ಶಾರದಾ ಅಣ್ಣಿಗೇರಿ , ದಾವಲ್ ಸಾಬ್ ವಾಲಿಕಾರ್ , ತಿಮ್ಮಣ್ಣ ಹಿರೇವಳಿ, ರಾಗಪ್ಪ ಶ್ರೀ ರಾಮ್, ಶಿವಾನಂದ ಪಂಪಣ್ಣವರ್, ಶಿಕ್ಷಣ ಸಂಯೋಜಿಕರುಗಳು , ಶರಣಪ್ಪ ತೆಮ್ಮಿನಾಳ ಸಿ ಆರ್ ಪಿ  , ಸಿಆರ​‍್ಿಗಳಾದ , ನಾಗರಾಜ್ ಚನ್ನಪ್ಪನವರ್, ಬಸವರಾಜ್ ಕುಂಬಳಾವತಿ, ಸೋಮಲಿಂಗಪ್ಪ ಗುರಿಕಾರ್, ಶರಣಗೌಡ ಗೌಡರ , ಮಲ್ಲೇಶ್ ಕಿರಗಿ , ಈರಣ್ಣ , ಮುಂತಾದವರು ಭಾಗವಹಿಸಿದ್ದರು. 


ಸುದ್ದಿ ಓದಿ