ಶಿಗ್ಗಾವ್

ಕೇಂದ್ರ ಸರ್ಕಾರದ ಜನೋಪಯೋಗಿ ಯೋಜನೆಗಳನ್ನು ಜಾರಿಗೆ: ಮ್ಯಾಗೇರಿ

ಕೇಂದ್ರ ಸರ್ಕಾರದ ಜನೋಪಯೋಗಿ ಯೋಜನೆಗಳನ್ನು ಜಾರಿಗೆ: ಮ್ಯಾಗೇರಿ

ಲೋಕದರ್ಶನ ವರದಿ

ಶಿಗ್ಗಾವಿ 12: ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸಕರ್ಾರದ ಎಂಟು ವರ್ಷಗಳ ಆಡಳಿತಾವಧಿಯಲ್ಲಿ ಆಡಳಿತ ನಿರ್ವಹಣೆ, ಸಾರ್ವಜನಿಕ ಸೇವೆ, ಅಭಿವೃದ್ಧಿ ಕಾರ್ಯಗಳು ಸೇರಿದಂತೆ ಅನೇಕ ಜನೋಪಯೋಗಿ ಯೋಜನೆಗಳನ್ನು ಜಾರಿಗೆ ತಂದಿದೆ ಎಂದು ತಾಲೂಕ ಬಿಜೆಪಿ ಮಂಡಲದ ಅಧ್ಯಕ್ಷ ಶಿವಾನಂದ ಮ್ಯಾಗೇರಿ ಹೇಳಿದರು.

ಶಿಗ್ಗಾವಿ ಪಟ್ಟಣದ ಬಸವರಾಜ ಬೊಮ್ಮಾಯಿ ಅವರ ನಿವಾಸದಲ್ಲಿ ನರೇಂದ್ರ ಮೋದಿಯವರ ಕೇಂದ್ರ ಸಕರ್ಾರ 8ವರ್ಷ ಪೂರೈಸಿದ ಹಿನ್ನಲೆಯಲ್ಲಿ ಬಿಜೆಪಿ ಘಟಕದ ವತಿಯಿಂದ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಮೋದಿಯವರು 2018ರಲ್ಲಿ ಪ್ರತಿ ಬಡಕುಟುಂಬಕ್ಕೆ 5ಲಕ್ಷರೂ. ಆರೋಗ್ಯ ವಿಮಾ ಭದ್ರತೆ ಒದಗಿಸುವ ಉದ್ದೇಶದಿಂದ ಆಯುಷ್ಮಾನ ಭಾರತ ಯೋಜನೆ ಜಾರಿಗೆ ತರುವ ಮೂಲಕ ಸುಮಾರು 10ಕೋಟಿಗೂ ಅಧಿಕ ಬಡಜನರುಯೋಜನೆಯ ಲಾಭ ಪಡೆದುಕೊಂಡಿದ್ದಾರೆ. ಅಡುಗೆ ಮನೆಯನ್ನು ಹೊಗೆ ಮುಕ್ತ ಮಾಡುವ ಉದ್ದೇಶದಿಂದ ಉಜ್ವಲ ಯೋಜನೆ, 2015ರಲ್ಲಿ ಜನಧನ್ ಯೋಜನೆಜಾರಿ ಮಾಡುವ ಮೂಲಕ ಸ್ಕಾಲರಶಿಪ್, ಸಬ್ಸಿಡಿ, ಪಿಂಚಣಿ ಹಾಗೂ ಕೊವೀಡ್ ಪರಿಹಾರ ಧನವನ್ನು ನೇರವಾಗಿ ಫಲಾನುಭವಿಗಳ ಖಾತೆಗೆ ವಗರ್ಾವಣೆ ಮಾಡಲಾಗಿದೆ.ಅರ್ಹಕೃಷಿಕರಿಗೆ ಪ್ರತಿ ವರ್ಷಆರು ಸಾವಿರರೂ.ಗೌರವಧನ ನೀಡುವಕಿಸಾನ್ ಸಮ್ಮಾನ ನಿಧಿ ಜಾರಿಗೆತಂದಿದ್ದಾರೆ.ಇದರಜತೆಗೆಅಪಘಾತ ವಿಮಾ ಸೌಲಭ್ಯಕಲ್ಪಿಸುವಉದ್ದೇಶದಿಂದ ಪ್ರಧಾನ ಮಂತ್ರಿ ಜೀವನಜ್ಯೋತಿ ಸೇರಿದಂತೆ  ಪ್ರಧಾನ ಮಂತ್ರಿ ಮುದ್ರಾ ಯೋಜನೆಯಡಿ 10 ಲಕ್ಷ ಸಣ್ಣಕೈಗಾರಿಗೆ ಹಾಗೂ ಉದ್ಯಮಗಳಿಗೆ ಸಕರ್ಾರ ಸಾಲ ಸೇರಿದಂತೆ ಉಚಿತ ಕೊವೀಡ್ ಲಸಿಕೆ, ಮೇಕ್ಇನ್ಇಂಡಿಯಾ, ಗ್ರಾಮಒನ್ ಯೋಜನೆಗಳಂತ ಅನೇಕ ಜನಪರ ಯೋಜನೆಗಳನ್ನು ನೀಡುವ ಮೂಲಕ ದೇಶದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ ಎಂದರು.

ಮಾಜಿ ಸಂಸದ ಮಂಜುನಾಥ ಕುನ್ನೂರ ಮಾತನಾಡಿ, ಒಂದು ಸಾಮಾನ್ಯ ಕುಟುಂಬದ ವ್ಯಕ್ತಿದೇಶದ ಪ್ರಧಾನಿಯಾಗಿ ಅನೇಕ ಜನಪರ ಯೋಜನೆಗಳನ್ನು ನೀಡುವ ಮೂಲಕ ದೇಶ ಮಾತ್ರವಲ್ಲದೇ ಜಗತ್ತಿನಾಧ್ಯಂತ ಜನಪ್ರೀಯತೆಗಳಿಸಿದ್ದಾರೆ. ಇಂತಹ ವ್ಯಕ್ತಿಗಳನ್ನು ಸ್ಮರಿಸುವುದು ನಮ್ಮ ನಿಮ್ಮೇಲ್ಲರ ಕರ್ತವ್ಯವಾಗಿದೆ ಎಂದರು.

ಪುರಸಭೆ ಅಧ್ಯಕ್ಷೆ ರೂಪಾ ಬನ್ನಿಕೊಪ್ಪ, ರಾಜ್ಯ ಯುವ ಮೋಚರ್ಾ ಸದಸ್ಯ ನರಹರಿಕಟ್ಟಿ, ಕೆ.ಎಂ.ಎಫ್ ನಿದರ್ೇಶಕ ಬಸನಗೌಡ ಮೆಗಲಮನಿ, ಪುರಸಭೆ ಸದಸ್ಯ ಮಂಜುನಾಥ ಬ್ಯಾಹಟ್ಟಿ  ಪ್ರಧಾನ ಕಾರ್ಯದಶರ್ಿಗಳಾದ ಬಸವರಾಜ ನಾರಾಯಣಪುರ, ರೇಣುಕನಗೌಡ ಪಾಟೀಲ, ಅಲ್ಪಸಂಖ್ಯಾತ ಮೋಚರ್ಾ ಅಧ್ಯಕ್ಷ ಷರೀಫಸಾಬ ನದಾಪ, ಎಸ.ಸಿ ಮೋಚರ್ಾ ಅಧ್ಯಕ್ಷ ಹನಮಮಂತಪ್ಪ ಮಾದರ, ಬೈಲಪ್ಪ ಕೊಟ್ರಪ್ಪನವರ,  ಗುರುನಾಥ ಧರೆಪ್ಪನವರ, ಮಂಜುನಾಥ ಕುಂದಾಪುರ, ಮುತ್ತು ಯಲಿಗಾರ,  ಷಣ್ಮುಖಪ್ಪ ಕಾಳಣ್ಣವರ,  ಮತ್ತಿತರರು ಉಪಸ್ಥಿತರಿದ್ದರು 

ಸುದ್ದಿ ಓದಿ