ಮನರಂಜನೆ

ಹೊಸ ಸ್ಟುಡಿಯೋ ಆರಂಭಿಸಿದ ಸಂಗೀತ ನಿರ್ದೇಶಕ ಇಳಯರಾಜ

ಹೊಸ ಸ್ಟುಡಿಯೋ ಆರಂಭಿಸಿದ ಸಂಗೀತ ನಿರ್ದೇಶಕ ಇಳಯರಾಜ

ಚೆನ್ನೈ, ಫೆ 06 : ಸಂಗೀತ ಸಂಯೋಜನೆಯಿಂದ ರಸಿಕರನ್ನು ಮಂತ್ರಮುಗ್ಧಗೊಳಿಸುವ ಖ್ಯಾತ ಸಂಗೀತ ನಿರ್ದೇಶಕ ಇಳಯರಾಜ ನೂತನ ಮ್ಯೂಸಿಕಲ್ ಸ್ಟುಡಿಯೋ  ಆರಂಭಿಸಿದ್ದು, ಇತ್ತೀಚೆಗೆ ಉದ್ಘಾಟನೆಗೊಂಡಿದೆ.  ಇಳಯರಾಜ ಅವರು ಈ ಹಿಂದೆ ಚೆನ್ನೈನ ಪ್ರಸಾದ್  ಸ್ಟುಡಿಯೋದಲ್ಲಿ ಕೆಲಸ ಮಾಡುತ್ತಿದ್ದರು. ಆದರೆ ಅಲ್ಲಿ ಸ್ಥಳ ಖಾಲಿ ಮಾಡುವಂತೆ ಆದೇಶವಾದ ಹಿನ್ನಲೆಯಲ್ಲಿ ಇದೀಗ ಅವರು ಹೊಸ ಸ್ಟುಡಿಯೋವನ್ನು ನಿರ್ಮಿಸಿದ್ದಾರೆ ಎನ್ನಲಾಗಿದೆ. ಎರಡು ದಿನಗಳ ಹಿಂದಷ್ಟೇ ಸ್ಟುಡಿಯೋ ಉದ್ಘಾಟನೆ ಮಾಡಿದ್ದು, ಈ ಕಾರ್ಯಕ್ರಮಕ್ಕೆ ಚಿತ್ರರಂಗದ ಕೆಲವರು ಹಾಗೂ ಇಳಯರಾಜ ಅವರ ಆಪ್ತರು ಭಾಗಿಯಾಗಿದ್ದರು ಎಂದು ತಿಳಿದುಬಂದಿದೆ.

  



ಸುದ್ದಿ ಓದಿ