ಮಾನವ ಹಕ್ಕುಗಳ ರಕ್ಷಣೆ: ವಿವಿಧ ಯೋಜನೆ, ಸೌಲಭ್ಯಗಳ ಜೀವಾಳ: ಕುಲಕಣರ್ಿ
ಗದಗ 10: ಮಾನವೀಯ ಮೌಲ್ಯ ಹಾಗೂ ಸಹಬಾಳ್ವೆಯ ಮೂಲಕ ಸರ್ವರೂ ಮಾನವ ಹಕ್ಕುಗಳ ರಕ್ಷಣೆಯಾಗುವಂತೆ ನೋಡಿಕೊಳ್ಳಬೇಕು. ಒಬ್ಬರ ಸ್ವಾತಂತ್ರ್ಯದ ಹಕ್ಕು ಇನ್ನೊಬ್ಬರ ಸ್ವಾತಂತ್ರ್ಯ ಕಿತ್ತುಕೊಳ್ಳುವಂತಾಗಬಾರದು ಎಂದು ಗದಗ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದಶರ್ಿ ರೇಣುಕಾ ಕುಲಕಣರ್ಿ ನುಡಿದರು.
ಗದಗ ಜಿಲ್ಲಾಡಳಿತದ ಭವನದ ಮುಖ್ಯ ಸಭಾಭವನದಲ್ಲಿಂದು ಜಿಲ್ಲಾಡಳಿತ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಹಯೋಗದಲ್ಲಿ ಏರ್ಪಡಿಸಲಾಗಿದ್ದ ವಿಶ್ವ ಮಾನವ ಹಕ್ಕುಗಳ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.
ಧರ್ಮದ ಇನ್ನೊಂದು ಪರಿಭಾಷೆಯೇ ಕಾನೂನು. ಮಾನವ ಹಕ್ಕುಗಳ ಉಲ್ಲಂಘನೆಯಾಗದಂತೆ ಅವುಗಳನ್ನು ಪಾಲಿಸಬೇಕು. ಹಕ್ಕು ಮತ್ತು ಕರ್ತವ್ಯಗಳ ಸರಿಯಾದ ಪಾಲನೆಯೇ ಉತ್ತಮ ನಾಗರಿಕತೆ. ಇದಕ್ಕಾಗಿ ಕರ್ತವ್ಯಗಳಲ್ಲಿ ಪಾರದರ್ಶಕತೆ, ನಿಷ್ಟೆ ಅವಶ್ಯಕ. ವೈವಿಧ್ಯತೆಯಲ್ಲಿ ಏಕತೆಯನ್ನು ಹೊಂದಿದ್ದರೂ ದೇಶದ ಸಂವಿಧಾನದಿಂದ ಪ್ರತಿಯೊಬ್ಬರಿಗೂ ಸಮಾನ ಬಾಳು , ಅವಕಾಶ ಭಾರತ ದೇಶದಲ್ಲಿದೆ. ಮಾನವ ಹಕ್ಕುಗಳ ಹಿನ್ನೆಲೆಯಿಂದಲೇ ಸಕರ್ಾರಗಳಿಂದ ವಿವಿಧ ಯೋಜನೆಗಳು ಹಾಗೂ ಸೌಲಭ್ಯಗಳು ಜಾರಿಯಾಗಿವೆ. ಸಾರ್ವಜನಿಕರ ಮನವಿಗಳ ಬೇಡಿಕೆಗಳಿಗೆ ಸೂಕ್ತವಾಗಿ ಸ್ಪಂದಿಸುವುದು ಮಾನವ ಹಕ್ಕುಗಳ ರಕ್ಷಣೆ ಮಾಡಿದಂತೆ ಎಂದು ರೇಣುಕಾ ಜಿ ಕುಲಕಣರ್ಿ ನುಡಿದರು.
ಗದಗ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಮಾನವ ಹಕ್ಕುಗಳ ದಿನದ ಕುರಿತು ಪ್ರತಿಜ್ಞಾ ವಿಧಿ ಬೋಧಿಸಿದರು. ಹಕ್ಕುಗಳ ಉಲ್ಲಂಘನೆ ಹಾಗೂ ರಕ್ಷಣೆ ಮನೆಯಿಂದಲೇ ಪ್ರಾರಂಭವಾಗುತ್ತದೆ. ಸಂವಿಧಾನದಲ್ಲಿ ಸಮಾನತೆಗೆ ಮಹತ್ವ ಕೊಡಲಾಗಿದೆ. ಮಾನವ ಹಕ್ಕುಗಳ ಕುರಿತು ಮಕ್ಕಳಲ್ಲಿ ಅರಿವು ಮೂಡಿಸುವ ಕಾರ್ಯವಾಗಬೇಕು. ಎಂದು ಜಿಲ್ಲಾದಿಕಾರಿ ಎಂ.ಜಿ. ಹಿರೇಮಠ ಈ ಸಂದರ್ಭದಲ್ಲಿ ನುಡಿದರು.
ವಿವಿಧ ಇಲಾಖೆಗಳ ಹಿರಿಯ ಅಧಿಕಾರಿ, ಸಿಬ್ಬಂದಿ ವರ್ಗದವರು ಶಾಲಾ ವಿದ್ಯಾಥರ್ಿ ವಿದ್ಯಾಥರ್ಿನಿಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಜಿಲ್ಲಾಧಿಕಾರಿಗಳ ಕಾನೂನು ಸಲಹೆಗಾರರಾದ ಎಸ್.ಜಿ. ಪಲ್ಲೇದ ಸರ್ವರನ್ನು ಸ್ವಾಗತಿಸಿದರು. ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿದರ್ೇಶಕ ಜಿ.ಎಲ್. ಬಾರಾಟಕ್ಕೆ ವಂದಿಸಿದರು. ಶಿವಾನಂದ ಗಿಡ್ನಂದಿ ಕಾರ್ಯಕ್ರಮ ನಿರೂಪಿಸಿದರು.