ಗದಗ

ಹೌಸಿಂಗ್ ಫಾರ್ ಆಲ್/ವಸತಿ ಯೋಜನೆ ಎಲ್ಲ ಅರ್ಹ ಫಲಾನುಭವಿಗಳಿಗೆ ಸೌಲಭ್ಯ ದೊರಕಲಿ

ಹೌಸಿಂಗ್ ಫಾರ್ ಆಲ್/ವಸತಿ ಯೋಜನೆ ಎಲ್ಲ ಅರ್ಹ ಫಲಾನುಭವಿಗಳಿಗೆ ಸೌಲಭ್ಯ ದೊರಕಲಿ

ಗದಗ: ಎಲ್ಲರಿಗೂ ಮನೆ ಯೋಜನೆಯಡಿ ಜಿಲ್ಲೆಯ ಎಲ್ಲ ಅರ್ಹ ಫಲಾನುಭವಿಗಳಿಗೆ ಸೌಲಭ್ಯ ಸಿಗುವಂತೆ ಸ್ಥಳೀಯ ಸಂಸ್ಥೆಗಳು ಈ ಯೋಜನೆ ಕುರಿತು ಹೆಚ್ಚಿನ ಜನಜಾಗೃತಿ ಮೂಡಿಸಬೇಕು ಎಂದು ಗದಗ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಸೂಚಿಸಿದರು.

ಗದಗ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿಂದು ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಕೇಂದ್ರ, ರಾಜ್ಯ ಸರಕಾರಗಳ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು. ಹೌಸಿಂಗ ಫಾರ ಆಲ್ 2022ರ ವರೆಗೆ ಜಾರಿಯಲ್ಲಿದ್ದು ನಿವೇಶನ ಅಥವಾ ಮನೇ ಇಂದ ಬಡವರ್ಗದ ಜನರಿಗೆ ಸೂರು ಕಲ್ಪಿಸುವದಾಗಿದ್ದು ನಗರ ಸಭೆ ಪೌರಾಯುಕ್ತರು, ಪಟ್ಟಣ ಪಂಚಾಯತ, ಪುರಸಭೆ ಮುಖ್ಯಾಧಿಕಾರಿಗಳು ತಮ್ಮ ವ್ಯಾಪ್ತಿಯ ಎಲ್ಲ ಅರ್ಹರಿಗೆ ಇದರ ಲಾಭ ಸಿಗುವಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ನುಡಿದರು. ಶಾಸಕರು, ಸಂಸದರು, ಜನಪತ್ರಿನಿಧಿಗಳಿಗೆ ಸರಿಯಾದ ಗೌರವ ನೀಡಬೇಕು. ಯಾವುದೇ ಸಕರ್ಾರಿ ಕಾರ್ಯಕ್ರಮವಿದ್ದರೂ ಶಿಷ್ಟಾಚಾರ ಕಡ್ಡಾಯವಾಗಿ ಪಾಲಿಸಬೇಕು. ಇಂತಹ ಒಂದು ಘಟನೆಗಾಗಿ ತಾವು ಹಕ್ಕು ಬಾಧ್ಯತಾ ಸಮಿತಿಯಲ್ಲಿ ಕ್ಷಮೆ ಯಾಚಿಸುವ ಪ್ರಸಂಗ ಬಂದಿದ್ದು ಇದು ಜಿಲ್ಲೆಯಲ್ಲಿ ಯಾವುದೇ ಸಂದರ್ಭದಲ್ಲಿ ಪುನರಾವರ್ತನೆ ಆಗದಂತೆ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕು ಇಲ್ಲವಾದರೆ ಕಠಿಣ ಕ್ರಮ ಅನಿವಾರ್ಯ ಎಂದು ಜಿಲ್ಲಾಧಿಕಾರಿ ಹಿರೇಮಠ ಎಚ್ಚರಿಕೆ ನೀಡಿದರು. ವಸತಿ ಯೋಜನೆಗಳಡಿ ಇನ್ನೂ ಕೆಲಸ ಪ್ರಾರಂಭವಾಗದ ಮನೆಗಳ ಕುರಿತಂತೆ ಶಾಸಕರ ಅಧ್ಯಕ್ಷತೆಯಲ್ಲಿ ಫಲಾನುಭವಿಗಳ, ಗುತ್ತಿಗೆ ಎಜೆನ್ಸಿ ಸಭೆ ಕರೆದು ಮನೆ ಪೂರ್ಣಗೊಳಿಸಲು ಅಥವಾ ಮಂಜೂರಾತಿ ರದ್ದಿಗೆ ಕ್ರಮ ಜರುಗಿಸಲು ಜಿಲ್ಲಾಧಿಕಾರಿಗಳು ಸೂಚಿಸಿದರು.

ಜಿಲ್ಲಾ ನಗರಾಭಿವೃದ್ಧಿ ಕೋಶದ ವಿವಿಧ ಯೋಜನೆಗಳ ಹಾಗೂ ಸ್ವಚ್ಛ ಭಾರತ ಮಿಷನ್ ಯೋಜನೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಹಾವೇರಿ ಲೋಕಸಭಾ ಸದಸ್ಯ ಶಿವಕುಮಾರ ಉದಾಸಿ ಅವರು ವಸತಿ ಯೋಜನೆಯಡಿ ಕೇಂದ್ರದಿಂದ ರಾಜ್ಯ ಸಕರ್ಾರಕ್ಕೆ 472 ಕೋಟಿರೂ ಅನುದಾನ ಬಿಡಗಡೆ ಅದಾಗ್ಯೂ ಫಲಾನುಭವಿಗಳಿಗೆ ತಪ್ಪು ಮಾಹಿತಿ ನೀಡುವ ಅಧಿಕಾರಿಗಳ ಕ್ರಮ ಸರಿಯಲ್ಲ ಎಂದರು. ಯಾವುದೇ ಯೋಜನೆ ವಿಳಂಬವಾಗದಂತೆ ಅಗತ್ಯದ ಕ್ರಮ ಜರುಗಿಸುವ ಜವಾಬ್ದಾರಿ ಅಧಿಕಾರಿಗಳದ್ದಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನಪ್ರತಿನಿಧಿಗಳಿಗೆ ಶಿಷ್ಟಾಚಾರ, ಗೌರವ ನೀಡುವದು ಸಹಜವಾಗಿ ಎಲ್ಲರಲ್ಲಿಯೂ ಇರಬೇಕು ಎಂದು ಸಂಸದ ಶಿವಕುಮಾರ ಉದಾಸಿ ನುಡಿದರು. 

ನರಗುಂದ ವಿಧಾನ ಸಭೆ ಶಾಸಕರಾದ ಸಿ.ಸಿ.ಪಾಟೀಲ ಅವರು ಮಾತನಾಡಿ ನರಗುಂದದಲ್ಲಿ 2000ಫಲಾನುಭವಿಗಳಿಗಾಗಿ ಪ್ರಧಾನ ಮಂತ್ರಿ ಆವಾಸ ಯೋಜನೆಯಡಿ ಫಲಾನುಭವಿಗಳ ವಸತಿ ಮನೆಗಳ ನಿಮರ್ಾಣಕ್ಕಾಗಿ ಖರೀದಿಸಿದ 52 ಎಕರೆಜಾಗೆ ಜನವಸತಿಗೆ ಯೋಗ್ಯವಾದ ಸ್ಥಳವಾಗಿಲ್ಲ ಎಂದರು. ತಮ್ಮ ಕ್ಷೇತ್ರದಲ್ಲಿ ಜನಪ್ರತಿನಿಧಿಗಳ ಕುರಿತ ಶಿಷ್ಟಾಚಾರ ಪಾಲನೆ ಸರಿಯಾಗಿ ಜರುಗುತ್ತಿಲ್ಲ ಎಂದು ಶಾಸಕ ಸಿ.ಸಿ.ಪಾಟೀಲ ತೀವ್ರ ಅಸಮಾಧಾನ ವ್ಯಕ್ತಪಡಿಸಿ ತಪ್ಪಿಸ್ತತ ಅಧಿಕಾರಿಗಳ ಮೇಲೆ ಜಿಲ್ಲಾಧಿಕಾರಿಗಳು ಕ್ರಮ ಜರುಗಿಸಲು ಆಗ್ರಹಿಸಿದರು.

ರೋಣ ವಿಧಾನ ಸಭ ಕ್ಷೇತ್ರದ ಶಾಸಕರಾದ ಕಳಕಪ್ಪ ಬಂಡಿ, ಶಿಹರಟ್ಟಿ ವಿಧಾನಸಭಾ ಕ್ಷೇತ್ರದ ಶಾಸಕರಾದ ರಾಮಣ್ಣ ಲಮಾಣಿ ಚಚರ್ೆಯಲ್ಲಿ ಭಾಗವಹಿಸಿದ್ದರು.

ಕೇಂದ್ರ ಹಾಗೂ ರಾಜ್ಯ ಪುರಸ್ಕೃತ ಅಮೃತ ಯೋಜನೆಯಡಿ ಗದಗ-ಬೆಟಗೇರಿ ನಗರಸಭೆಗೆ ಒಟ್ಟು 29.83 ಕೋಟಿ ವೆಚ್ಚದ ಕಾಮಗಾರಿಗಳ ಪಯಕಿ ಕೇಂದ್ರ ಸಕರ್ಾರ 4.55 ಹಾಗೂ ರಾಜ್ಯ ಸಕರ್ಾರ 1.82 ಹೀಗೆ ಒಟ್ಟು 6.37 ಕೋಟಿ ರೂ. ಬಿಡುಗಡೆ ಆಗಿದ್ದು ಇದರಲ್ಲಿ ಹಸಿರುಕರಣ, ಮಳೆ ನೀರು ಚರಂಡಿ ಹಾಗೂ ನಗರ ಸಾರಿಗೆ ವ್ಯವಸ್ಥೆ ಸುಧಾರಣಾ ಕಾಮಗಾರಿಗಳು ಇವೆ ಎಂದು ಪೌರಾಯುಕ್ತ ಮನ್ಸೂರ ಅಲಿ ಸಭೆಯಲ್ಲಿ ತಿಳಿಸಿದರು.

ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿದರ್ೇಶಕ ರುದ್ರೇಶ ಅವರು ಜಿಲ್ಲೆಯ 9 ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಹೌಸಿಂಗ ಫಾರ ಆಲ್ ಯೋಜನೆಯಡಿ ಈವರೆಗೆ 42156 ಅಜರ್ಿ ಸ್ವೀಕರಿಸಿ ಸಮೀಕ್ಷೆ ಮಾಡಿದ್ದು 31894 ಫಲಾನುಭವಿಗಳ ಮಾಹಿತಿ ನಮೂದಿಸಲಾಗಿದೆ ಎಂದರು. ವಿವಿಧ ವಸತಿ ಯೋಜನೆಗಳಡಿ 2015-16 ವಾಜಪೇಯಿ ನಗರ ವಸತಿ ಯೋಜನೆಯಡಿ 1800 ಗುರಿ ಪೈಕಿ 1799 ಫಲಾನುಭವಿಗಳ ಅನುಮೋದನೆ ಆಗಿದ್ದು676 ಮನೆ ಪೂರ್ಣಗೊಳಿಸಲಾಗಿದೆ. 449 ಪ್ರಗತಿಯಲ್ಲಿದ್ದು 674 ಮನೆಗಳು ಇನ್ನೂ ಪ್ರಾರಂಭವಾಗಿರುವುದಿಲ್ಲ. ಇದೇ ಯೋಜನೆಯಡಿ 2016-17 ರಲ್ಲಿ 5175 ಗುರಿ ಪೈಕಿ 2633 ಫಲಾನುಭವಿಗಳು ಇದ್ದು 511 ಮನೆಗಳು ಪೂರ್ಣಗೊಂಡಿದೆ. 616 ಪ್ರಗತಿಯಲ್ಲಿದ್ದು 1506 ಮನೆಗಳ ನಿಮರ್ಾಣ ಆರಂಭಿಸಿಲ್ಲ. 2017-18ರಲ್ಲಿ 1808 ಗುರಿ ಪಐಕಿ 197 ಫಲಾನುಭವಿಗಳ ಆಯ್ಕೆ ಆಗಿದ್ದು 10 ಮನೆ ಪೂರ್ಣಗೊಂಡಿವೆ 106 ಪ್ರಗತಿಯಲ್ಲಿದ್ದು 81ರ ಕಾಮಗಾರಿ ಆರಂಭಿಸಿಲ್ಲ. ಡಾ.ಬಿ.ಆರ್. ಅಂಬೇಡ್ಕರ ಆವಾಸ ಯೋಜನೆಯಡಿ 2015-16ರಲ್ಲಿ 518 ಗುರಿ ಪೈಕಿ 518 ಫಲಾನುಭವಿಗಳ ಆಯ್ಕೆ ಆಗಿದ್ದು 239 ಮನೆಗಳು ಪೂರ್ಣಗೊಂಡಿವೆ, 126 ಮನೆಗಳು ಪ್ರಗತಿಯಲಿದ್ದು 153 ಮನೆಗಳ ಕಾಮಗಾರಿ ಪ್ರಾರಂಭವಾಗಿಲ್ಲ. ಇದೇ ಯೋಜನೆಯಡಿ 2016-17ರಲ್ಲಿ ಒಟ್ಟು 1015 ಗುರಿ ಇದ್ದು ಫಲಾನುಭವಿಗಳ ಆಯ್ಕೆ ಆಗಿದ್ದು 218 ಮನೆಗಳು ಪೂರ್ಣಗೊಂಡಿವೆ 261 ಪ್ರಗತಿಯಲಿದ್ದು 536 ಮನೆಗಳ ಕಾಮಗಾರಿ ಆರಂಭಿಸಲಾಗಿಲ್ಲ. 2017-18 ರಲ್ಲಿ 178 ಗುರಿ ನೀಡಲಾಗಿದೆ.

ಪ್ರಧಾನ ಮಂತ್ರಿ ಆವಾಸ ಯೋಜನೆಯಡಿ ಗುಂಪು ವಸತಿ ಮನೆಗಳಿದ್ದು ಗದಗ-ಬೆಟಗೇರಿಯಲ್ಲಿ 3994, ಗಜೇಂದ್ರಗಡ ಪುರಸಭೆ 1116, ನರಗುಂದ ಪುರಸಭೆಯ 2000, ರೋಣ 2312 ಹಾಗೂ ಮುಳಗುಂದ ಪಟ್ಟಣ ಪಂಚಾಯತ 214 ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದ್ದು. ಗದಗ-ಬೆಟಗೇರಿಯಲ್ಲಿ ಒಟ್ಟು 76 ಎಕರೆ, ಗಜೇಂದ್ರಗಡದಲ್ಲಿ 9.23, ನರಗುಂದದಲ್ಲಿ 52 ಎಕರೆ, ರೋಣದಲ್ಲಿ 42.10 ಎಕರೆ ಹಾಗೂ ಮುಳಗುಂದದಲ್ಲಿ 2.31 ಎಕರೆ ಜಮೀನು ಖರೀದಿಸಲಾಗಿದೆ. 13ನೇ ಹಣಕಾಸು ಯೋಜನೆಯಡಿ 2010-11 ರಿಂದ 14-15ರ ಅವಧಿಯ ಜಿಲ್ಲೆಯ 9 ಸ್ಥಳೀಯ ಸಂಸ್ಥೆಗಳಿಗೆ ಒಟ್ಟು 54.07 ಕೋಟಿ ಅನುದಾನ ಹಂಚಿಕೆಯಾಗಿದ್ದು 50.79 ಕೋಟಿ ರೂ. ವೆಚ್ಚವಾಗಿದೆ. ಮಂಜೂರಾದ 1303 ಕಾಮಗಾರಿ ಪೈಕಿ 1257 ಪೂರ್ಣಗೊಂಡಿದ್ದು 46 ಪ್ರಗತಿಯಲ್ಲಿವೆ. 2015- ರಿಂದ 18 ಅವಧಿಯ 14ನೇ ಹಣಕಾಸು ಯೋಜನೆಯಡಿ ಜಿಲ್ಲೆಯ 9 ಸ್ಥಳೀಯ ಸಂಸ್ಥೆಗಳಿಗೆ ಒಟ್ಟು 57.54 ಕೋಟಿ ರೂ. ಹಂಚಿಕೆಯಾಗಿದ್ದು 44.86 ಕೋಟಿ ರೂ. ವೆಚ್ಚವಾಗಿದೆ. 818 ಕಾಮಗಾರಿಗಳ ಪೈಕಿ 74 ಪ್ರಗತಿಯಲಿದ್ದು 744 ಪೂರ್ಣಗೊಂಡಿವೆ ಎಂದು ಯೋಜನಾ ನಿದರ್ೇಶಕ ರುದ್ರೇಶ ವಿವರ ನೀಡಿದರು.


ಸುದ್ದಿ ಓದಿ