ಜಮಖಂಡಿ

ಸಾಧಕರಿಗೆ ನಿವೃತ್ತ ನೌಕರರಿಗೆ ಸನ್ಮಾನ ಸಮಾರಂಭ

ಸಾಧಕರಿಗೆ ನಿವೃತ್ತ ನೌಕರರಿಗೆ ಸನ್ಮಾನ ಸಮಾರಂಭ

ಲೋಕದರ್ಶನ ವರದಿ,

ಜಮಖಂಡಿ : ಪ್ರತಿಭಾವಂತ ವಿದ್ಯಾರ್ಥಿಗಳು ಶಿಕ್ಷಣದಲ್ಲಿ ಹೆಚ್ಚು ಅಂಕಗಳನ್ನು ಪಡೆದು ಕಲಿತ ಶಾಲೆ-ಊರು, ತಂದೆ-ತಾಯಿ ಅವರ ಕೀರ್ತಿಯನ್ನು ತರುವ ಮಕ್ಕಳಾಗಬೇಕೆಂದು ಮಾಜಿ ವಿಪ ಸದಸ್ಯ ಜಿ.ಎಸ್.ನ್ಯಾಮಗೌಡ ಹೇಳಿದರು. 

ನಗರದ ಶ್ರೀ ನಂದಿಕೇಶ್ವರ ದೇವಸ್ಥಾನದಲ್ಲಿ ನಡೆದ ತಾಲೂಕು ಗಾಣಿಗ ಸಮಾಜ, ಗಾಣಿಗ ನೌಕರರ ಕ್ಷೇಮಾಭಿವೃದ್ಧಿ ಸಂಘದ ಸಹಯೋಗದಲ್ಲಿ ಎಸ್.ಎಸ್.ಎಲ್. ಸಿ ಹಾಗೂ ಪಿ.ಯು.ಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಮತ್ತು ನಿವೃತ್ತ ನೌಕರರಿಗೆ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು,

ಸರಿಸುಮಾರು 2021 ರಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ ಮತ್ತು ಪುರಸ್ಕಾರವನ್ನು ನೀಡಿ ಗೌರವಿಸುತ್ತಾ ಬಂದಿರುವ ಮಾದರಿಯ ಸಮಾಜವಾದ ಗಾಣಿಗ ಸಮಾಜವಾಗಿದೆ. ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಪ್ರಥಮ ಸ್ಥಾನಕ್ಕೆ 5 ಸಾವಿರ ರೂ,ಗಳ ನಗದು, ದ್ವಿತೀಯ ಸ್ಥಾನಕ್ಕೆ 3 ಸಾವಿರ ರೂ,ಗಳ ನಗದು, ತೃತೀಯ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ 2 ಸಾವಿರ ರೂ,ಗಳ ನಗದು ಮತ್ತು ಸನ್ಮಾನ ಪುರಸ್ಕಾರವನ್ನು ನೀಡುತ್ತಾ ಬಂದಿರುತ್ತದೆ. ಇನ್ನೂ ಉಳಿದ ವಿದ್ಯಾರ್ಥಿನಿಯರಿಗೆ  ವಿದ್ಯಾರ್ಥಿಗಳಿಗೆ ಪ್ರತಿಯೊಬ್ಬರಿಗು 1 ಸಾವಿರ ರೂ,ನಗದು ಹಣವನ್ನು ನೀಡಿ. ಮಕ್ಕಳಿಗೆ ಸ್ಪೂರ್ತಿಯನ್ನು ನೀಡುವ ಸಮಾಜವಾಗಿದೆ ಎಂದರು. 

ಸಮಾಜದ 3 ಎಕರೆ ಜಮೀನು ಇದ್ದು. ಅದರಲ್ಲಿ ಉನ್ನತ ಶಿಕ್ಷಣ ಸಂಸ್ಥೆಯನ್ನು ಕಟ್ಟಿಸಿ, ಸಮುದಾಯ ಭವನವನ್ನು ನಿರ್ಮಿಸುವ ಹೊಣೆಯನ್ನು ಸಮಾಜ ಭಾಂದವರು ಎಲ್ಲರೂ ಕೈ ಜೋಡಿಸಬೇಕಾಗಿದೆ. ಸರಕಾರದಿಂದ ನಮ್ಮ ಸಮುದಾಯಕ್ಕೆ ಯಾವುದೇ ಸಹಾಯ, ಸಹಕಾರ ನೀಡಿರುವುದಿಲ್ಲ. ಶಾಸಕರು, ಸಂಸದರು ಸೇರಿ ಗಾಣಿಗ ಸಮಾಜಕ್ಕೆ ಸರಕಾರದ ಸೌವತ್ತುಗಳನ್ನು ನೀಡುವ ಕೆಲಸ ಮಾಡಬೇಕಾಗಿದೆ ಎಂದರು.

ತಾಲೂಕಾ ಅಧ್ಯಕ್ಷ ಕೆ.ಕೆ ತುಪ್ಪದ ಪ್ರಾಸ್ತಾವಿಕ ಮಾತನಾಡಿದರು, ಶ್ರೀಸಿದ್ಧ ಮುತ್ಯಾ ಶ್ರೀಗಳು ಆಶಿರ್ವಚನ ನೀಡಿದರು, ಮಲ್ಲಿಕಾರ್ಜುನ ನಿಂಗನೂರ, ನಾಗಪ್ಪ ಮುತ್ತಕ್ಕನವರ, ಜಗದೀಶ ಪಾಸೋಡಿ, ಸಂಗಪ್ಪ ದಡ್ಡಿಮನಿ,ಪಿ,ಬಿ, ಅಜ್ಜನ್ನವರ,ಸಿ,ಜಿ, ಕಡಕೋಳ, ಮಲ್ಲಪ್ಪ ಹೆಗ್ಗೊಂಡ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಎಸ್.ಎಸ್.ಎಲ್.ಸಿಯಲ್ಲಿ 21, ಪಿಯುಸಿಯಲ್ಲಿ 67 ವಿದ್ಯಾಥರ್ಿಗಳಿಗೆ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ, ನಿವೃತಿ ಹೊಂದಿದ ಮಾಜಿ ಸೈನಿಕರಿಗೆ ಸನ್ಮಾನಿಸಿ,ಗೌರವಿಸಲಾಯಿತು. ಆರ್,ಎಸ್, ಕಟ್ಟಿಮನಿ ಹಾಗೂ ಸಂಗಡಿಗರು ಪ್ರಾಥರ್ಿಸಿದರು, ಎನ್,ಎಸ್, ತುಪ್ಪದ ಸ್ವಾಗತಿಸಿದರು, ಕವಿತಾ ರಾಮದುರ್ಗ, ಹನಮಂತ ಅರಕೇರಿ ನಿರೂಪಿಸಿದರು, ಬಸವರಾಜ ಸಾವಳಗಿ ವಂದಿಸಿದರು,


ಸುದ್ದಿ ಓದಿ