ಸರ್ವರೊಂದಿಗೆ ಬದುಕಬೇಕು ಸಂದೇಶ ಸಾರಿದ ಹಡಪದ ಅಪ್ಪಣ್ಣ
ಲೋಕದರ್ಶನ ವರದಿ
ಶಿಗ್ಗಾವಿ 14: 12ನೇ ಶತಮಾನದ ನಿಜಶರಣ ಹಡಪದ ಅಪ್ಪಣ್ಣನವರು ಜಗಜ್ಯೋತಿ ಬಸವಣ್ಣನವರ ಅನುಭವ ಮಂಟಪದಲ್ಲಿ ಕಾರ್ಯದರ್ಶಿಯಾಗಿ ಜನಮನ ಗೆದ್ದು, ಸರ್ವರಲ್ಲಿ ತಮ್ಮ ವಚನ ಸಾಹಿತ್ಯದ ಮೂಲಕ ಕಾಯಕದಿಂದ ಕೈಲಾಸ ಕಾಣಲು ನಾವು ನ್ಯಾಯ, ನೀತಿ, ದಾನ, ದಯೆ ಧರ್ಮತೋರಿ ಸರ್ವರೊಂದಿಗೆ ಬದುಕಬೇಕು ಎಂಬ ಸಂದೇಶ ಸಾರಿದವರಾಗಿದ್ದಾರೆ ಎಂದು ಬಿಜೆಪಿ ಮಂಡಲ ಅಧ್ಯಕ್ಷ ಶಿವಾನಂದ ಮ್ಯಾಗೇರಿ ಹೇಳಿದರು.
ಪಟ್ಟಣದ ತಹಶೀಲ್ದಾರ ಕಾರ್ಯಾಲಯದಲ್ಲಿ ಬುಧವಾರ ಆಯೋಜಿಸಿದ್ದ ಹಡಪದ ಅಪ್ಪಣ್ಣ ಅವರ 888ನೇ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಕಾಯಕ ನಂಬಿ ಬದುಕು ಅದರಲ್ಲಿ ದೇವರನ್ನು ಹುಡುಕು. ಮಾಡದಿರು ಪರರಿಗೆ ಕೆಡಕು ಇದೆ ಮಾನವನ ಮಾನವೀಯ ನಿಜವಾದ ಬದುಕು ಎಂಬುದನ್ನು ವಚನ ಸಾಹಿತ್ಯದ ಮೂಲಕ ಸಮಾಜದಲ್ಲಿ ಭಾವೈಕ್ಯತೆಯನ್ನು ತುಂಬಿದವರಾಗಿದ್ದರು ಎಂದರು.
ಈ ಸಂದರ್ಭದಲ್ಲಿ ತಹಶೀಲ್ದಾರ ಶಿವಾನಂದ ರಾಣೆ ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದರು. ದಲಿತ ಮುಖಂಡ ಡಿ.ಎಸ್.ಮಾಳಗಿ, ಶಿವಾನಂದ ಬಾಗೂರ, ಬಸವರಾಜ ಹಡಪದ, ಪಕ್ಕೀರಪ್ಪ ಕುಂದೂರ, ಮಂಜುನಾಥ ಓಲೆಕಾರ, ಬಸವರಾಜ ಜೇಕಿನಕಟ್ಟಿ, ರೇಣುಕನಗೌಡ ಪಾಟೀಲ, ಅಶೋಕ ಕಾಳೆ, ಕರಿಯಪ್ಪ ಕಟ್ಟಿಮನಿ, ಮಲ್ಲಿಕಾರ್ಜುನ ಹಡಪದ, ಶಿವಕುಮಾರ ಮಡ್ಲಿಕರ, ಮುತ್ತಣ್ಣ ಕ್ಷೌರದ, ವಿರೇಶ ಹಡಪದ, ಶಿವು ಹಡಪದ, ಮತ್ತಿತರರು ಉಪಸ್ಥಿತರಿದ್ದರು