ಮನರಂಜನೆ

ಆಸ್ಕರ್ ಪುರಸ್ಕೃತ ಹಾಲಿವುಡ್ ನಟ ಕ್ರಿಸ್ಟೋಫರ್ ಪ್ಲಮ್ಮರ್ ನಿಧನ

ಆಸ್ಕರ್ ಪುರಸ್ಕೃತ ಹಾಲಿವುಡ್ ನಟ ಕ್ರಿಸ್ಟೋಫರ್ ಪ್ಲಮ್ಮರ್ ನಿಧನ

ಒಟ್ಟಾವಾ : ಕೆನಡಾ ಮೂಲದ ಆಸ್ಕರ್ ಪ್ರಶಸ್ತಿ ವಿಜೇತ ನಟ ಕ್ರಿಸ್ಟೋಫರ್ ಪ್ಲಮ್ಮರ್ ವಿಧಿವಶರಾಗಿದ್ದಾರೆ. ಅವರಿಗೆ 91 ವರ್ಷ ವಯಸ್ಸಾಗಿತ್ತು.ಸತತ ಐದು ದಶಕಗಳ ಕಾಲ ಹಲವಾರು ಸಿನಿಮಾಗಳಲ್ಲಿ ಐಕಾನಿಕ್ ಪಾತ್ರಗಳನ್ನು ನಿರ್ವಹಿಸಿದ್ದ ಪ್ಲಮ್ಮರ್, 1965 ರ ಸಾರ್ವಕಾಲಿಕ ಸಿನಿಮಾ 'ದಿ ಸೌಂಡ್ ಆಫ್ ಮ್ಯೂಸಿಕ್' ನಲ್ಲಿ ಕ್ಯಾಪ್ಟನ್ ವೋನ್ ಟ್ರಾಪ್ ಪಾತ್ರದಲ್ಲಿ ಗಮನ ಸೆಳೆದಿದ್ದರು.  2012 'ಬಿಗಿನರ್ಸ್' ಸಿನಿಮಾಕ್ಕಾಗಿ ಕ್ರಿಸ್ಟೋಫರ್ ಗೆ ಅತ್ಯುತ್ತಮ ಪೋಷಕ ನಟ ವಿಭಾಗದಲ್ಲಿ ಆಸ್ಕರ್ ಪ್ರಶಸ್ತಿ ದೊರಕಿತ್ತುಆಸ್ಕರ್ ಪ್ರಶಸ್ತಿ ಪಡೆದಾಗ ಕ್ರಿಸ್ಟೋಫರ್ ಗೆ 82 ವರ್ಷ ವಯಸ್ಸು. ಮತ್ತೆ 2018 ರಲ್ಲಿ 'ಆಲ್ ದಿ ಮನಿ ಇನ್‌ ದಿ ವರ್ಲ್ಡ್' ಸಿನಿಮಾಕ್ಕಾಗಿ ಆಸ್ಕರ್ ಗೆ ನಾಮಿನೇಟ್ ಆಗಿದ್ದರಾದರೂ, ಪ್ರಶಸ್ತಿ ದೊರಕಿರಲಿಲ್ಲ. 'ಕ್ರಿಸ್ಟೋಫರ್ ಒಬ್ಬ ಅಸಾಧಾರಣ ವ್ಯಕ್ತಿಯಾಗಿದ್ದರು. ತಮ್ಮ ವೃತ್ತಿಯನ್ನು ಅವರು ಅತಿಯಾಗಿ ಪ್ರೀತಿಸುತ್ತಿದ್ದರು. ಅವರ ಸ್ವವಿಮರ್ಶೆಯ ಹಾಸ್ಯ ಮತ್ತು ಅವರ ಮಾತಿನಲ್ಲಿದ್ದ ಸಂಗೀತ ಅದ್ಭುತವಾದುದು. ರಾಷ್ಟ್ರದ ನಿಧಿಯಾಗಿದ್ದ ಅವರು ಕೆನಡಾದ ಮೂಲವನ್ನು ಎಂದೂ ಬಿಟ್ಟಿರಲಿಲ್ಲ. ತಮ್ಮ ಕಲೆ ಹಾಗೂ ಮಾನವೀಯತೆ ಮೂಲಕ ನಮ್ಮೆಲ್ಲರ ಹೃದಯಗಳನ್ನು ಸ್ಪರ್ಶಿಸಿದ್ದಾರೆ' ಎಂದು ಕ್ರಿಸ್ಟೋಫರ್ ನಿಧನದ ನಂತರ ಅವರ ಮ್ಯಾನೇಜರ್ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದಾರೆ.

  



ಸುದ್ದಿ ಓದಿ