ಜಮಖಂಡಿ

ಪ್ರತಿಯೊಬ್ಬರ ಜೀವನದಲ್ಲಿ ಗುರುವಿನ ಪಾತ್ರ ಬಹಳ ಮುಖ್ಯ

ಪ್ರತಿಯೊಬ್ಬರ ಜೀವನದಲ್ಲಿ ಗುರುವಿನ ಪಾತ್ರ ಬಹಳ ಮುಖ್ಯ

ಲೋಕದರ್ಶನ ವರದಿ,

ಜಮಖಂಡಿ 30: ದೇಶದಲ್ಲಿ ಗುರುವಿನ ಸ್ಥಾನಕ್ಕೆ ಬಹಳ ಗೌರವ ಸ್ಥಾನಮಾನವನ್ನು ಕೊಡುವುದು ನಮ್ಮ ಸಂಪ್ರದಾಯವಾಗಿದೆ. ಅದು ಹುಟ್ಟಿನಿಂದಲ್ಲೆ ಬಂದಿರುವ ಸಂಪ್ರದಾಯವಾಗದೆ ಎಂದು ಮಾಜಿ ಜಿಪಂ ಸದಸ್ಯ ಪುಂಡಲಿಕ  ಪಾಲಭಾಂವಿ ಹೇಳಿದರು 

ಸಮೀಪದ ಹಿಪ್ಪರಗಿ ಗ್ರಾಮದ ಗುರು ಸಿದ್ದರಾಮಶ್ವರ ಪ್ರೌಡ ಶಾಲಾ ಆವರಣದಲ್ಲಿ ನಡೆದ  1999-2000 ಸಾಲಿನ ವಿದ್ಯಾರ್ಥಿಗಳು ಏರ್ಪಡಿಸಿದ ಕಾರ್ಯಕ್ರಮದಲ್ಲಿ ಮಾತನಾಡಿದರು. ಪ್ರತಿಯೊಬ್ಬರ ಜೀವನದಲ್ಲಿ ಗುರುವಿನ ಪಾತ್ರ ಅತಂತ್ಯ ಮಹತ್ವದಾಗಿದು. ಉತ್ತಮ ಜೀವನಕ್ಕೆ ಪಾಠ ಕಲಿಸಿದ ಮಾರ್ಗದರ್ಶನ ಮಾಡಿದ ಗುರುವಿಗೆ ಸದಾಕಾಲ ಗೌರವದಿಂದ ನೋಡಿಕೊಳ್ಳುವ ನಮ್ಮ ಕರ್ತವ್ಯವಾಗಿದೆ ಎಂದರು.

ಗುರುವಿನ ಮಹತ್ವವನ್ನು  ಮತ್ತು ಅವರ ಶ್ರೇಷ್ಠವಾದ ಕಾರ್ಯವನ್ನು ಪ್ರಪಂಚಕ್ಕೆ ಸಾರಿದ ಕಿರ್ತಿ ದೇಶಕ್ಕೆ ಸಲ್ಲುತ್ತದೆ. ನಮ್ಮೆಲ್ಲ ಸಂಪ್ರದಾಯಗಳಲ್ಲಿ ಗುರುವಿಗೆ ನಮಿಸುವುದು ಸಹಜವಾದ ಪ್ರಕೀಯೇ. ಇಂದಿನ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳು ತಮ್ಮ ಜೀವನ ಮತ್ತು ಜವಾಬ್ದಾರಿ ನಿಮಿತ್ತ ಎಲ್ಲರು ಬೇರೆ ಕಡೆಯಿದ್ದರು ತಮ್ಮ ಕಲಿಸಿದ ಈ ಶಾಲಾ ಗುರು ವೃಂದಕ್ಕೆ ಸಂಭ್ರಮ ಸಡಿಗರದಿಂದ ವಂದಿಸುತ್ತಿರುವುದು ತುಂಬಾ ಸಂತೋಷವಾಗಿದೆ ಎಂದರು. 

ಸಿಪಿಐ ಸಂಗಮೇಶ ಪಾಲಭಾಂವಿ ಮಾತನಾಡಿದರು, ಡಾ. ಸಿದ್ದಲಿಂಗ ಸಾಧು ಮಹಾರಾಜರು ಸಾನಿಧ್ಯ ವಹಿಸಿ ಆರ್ಶಿವಚನ ನೀಡಿದರು, ಪ್ರಾಸ್ತಾವಿಕವಾಗಿ ಎಸ್.ಎಮ್ ಪಾಟೀಲ ಮಾತನಾಡಿದರು, ಸುಭಾಶ ಹಡಪದ ಸ್ವಾಗತಿಸಿದರು, ಪ್ರಶಾಂತ ಹೊಸಮನಿ ನಿರೂಪಿಸಿದರು, ಬಸವರಾಜ ಕುಲ್ಹಳ್ಳಿ ವಂದಿಸಿದರು.



ಸುದ್ದಿ ಓದಿ