ಬಳ್ಳಾರಿ

ಸಮೂಹ ನೃತ್ಯ ಬಯಲಾಟ ಜನಪದ ಸಂಭ್ರಮ ಕಾರ್ಯಕ್ರಮ

ಸಮೂಹ ನೃತ್ಯ ಬಯಲಾಟ ಜನಪದ ಸಂಭ್ರಮ ಕಾರ್ಯಕ್ರಮ

ಬಳ್ಳಾರಿ:  ಆಲಾಪ್ ಸಂಗೀತ ಕಲಾ ಟ್ರಸ್ಟ್ , ಬಳ್ಳಾರಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ವಿಶೇಷ ಘಟಕ ಯೋಜನೆ ಅಡಿಯಲ್ಲಿ ಸಮೂಹ ನೃತ್ಯ ಬಯಲಾಟ ಜನಪದ ಸಂಭ್ರಮ ಭಾನುವಾರ ಸಂಜೆ ರಾಘವ ಕಲಾ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ಉದ್ಘಾಟನೆಯನ್ನು ರಾಘವ ಮೆಮೋರಿಯಲ್ ಅಸೋಶಿಯೇಶನ್ ಗೌರವಾಧ್ಯಕ್ಷ ಕೆ ಚನ್ನಪ್ಪ  ನೇರವೇರಿಸಿದರು. 

ನಂತರ ಗಡಿ ಜಿಲ್ಲೆಯಲ್ಲಿ ಸಾಂಸ್ಕೃತಿಕ ವಾತಾವರಣ ನಿಮರ್ಾಣ ನಿಟ್ಟಿನಲ್ಲಿ  ಮಹತ್ವದ ಪಾತ್ರ ವಹಿಸುತ್ತದೆ.ಅಲಾಪ್ ಸಂಗೀತ ಕಲಾ ಟ್ರಸ್ಟ್ ಸುಮಾರು ಆರು ವರ್ಷಗಳಿಂದ ಅನೇಕ ಸಾಂಸ್ಕೃತಿಕ ಕಾರ್ಯಕ್ರಮ ಧೇಯೋದ್ದೇಶವನ್ನು ಶ್ಲಾಘಿಸಿದರು ಹಾಗೂ ಹಳ್ಳಿಯ ಬಯಲಾಟ ಸೊಗಡು ನಗರ ಪ್ರದೇಶದಲ್ಲಿ ಪ್ರದರ್ಶನ ಮಾಡುತ್ತಿರುವುದು ಅತಿ ಸಂತಸದ ವಿಷಯೆಂದು ನುಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಬಯಲಾಟ ಅಕಾಡೆಮಿಯ ಸದಸ್ಯ ಹೆಚ್. ತಿಪ್ಪೇಸ್ವಾಮಿ ಮಾತನಾಡುತ್ತಾ ಬಯಲಾಟ ಕಲೆ ಪ್ರಾಚೀನ ಕಾಲದಿಂದಲೂ ತನ್ನ ಅಸ್ತಿತ್ವವನ್ನು ಭವ್ಯವಾಗಿ ಉಳಿಸಿಕೊಂಡು ಬಂದಿದೆ. ಈ ಕಲೆಯನ್ನು ಉಳಿಸಿಕೊಂಡು ಹೋಗುವುದು ಅವಶ್ಯವಿದೆ ಎಂದು ತಿಳಿಸಿದರು.ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಡಾ. ನಿಷ್ಠಿ ರುದ್ರಪ್ಪ ಮಾತನಾಡುತ್ತಾ ಉತ್ತರ

ಕರ್ನಾಟಕ ಮತ್ತು ಹೈದರಾಬಾದ್ ಕನರ್ಾಟಕ ಗಂಡು ಕಲೆಯಾದ ಬಯಲಾಟ ಕಲೆಯು ಆಧುನಿಕ ವಿದ್ಯುನ್ಮಾನ ಮಾಧ್ಯಮಗಳನ್ನು ಬಳಸಿಕೊಂಡು ತೀವ್ರ ಗತಿಯಲ್ಲಿ ಬೆಳೆಯಬೇಕಿದೆ.  ಯಕ್ಷಗಾನ ಕಲೆಯ ದೇಶವಿದೇಶಗಳಲ್ಲಿಯೂ ಪ್ರಸಿದ್ಧಿ ಪಡೆದಿರುವಂತೆ ಬಯಲಾಟ ಕಲೆಯು ಜಾಗತಿಕ ಮಟ್ಟದಲ್ಲಿ ಗುರುತಿಸುವಂತೆ ಆಗಬೇಕೆಂದು ತಿಳಿಸಿದರು.

ಪ್ರಾರಂಭದಲ್ಲಿ ಶೇಖರ್ ಬಳ್ಳಾರಿ, ಮಾಧವಿ ವೈ ಎನ್, ನಂದ ಕೆ ಎನ್ ಇವರ ಕಲಾ ತಂಡದಿಂದ ಜಾನಪದ ಗಾಯನ ಅದ್ಬುತವಾಗಿ ಪ್ರದರ್ಶಿಸಿದರು. ಯಮನಪ್ಪ ಅಲ್ಲಿ ಪುರ, ತಂಡದಿಂದ ಸಮೂಹ ನೃತ್ಯ ಪ್ರದರ್ಶನ ಮಾಡಿದರು.ವೇದಿಕೆ ಮೇಲೆ ರಾಘವ ಮೆಮೋರಿಯಲ್ ಅಸೋಶಿಯೇಶನ್ ಅಧ್ಯಕ್ಷ ಕೆ ಕೊಟೆಶ್ವರ ರಾವ್, ಗೌರವ ಕಾರ್ಯದರ್ಶಿ  ಎನ್ ಪ್ರಕಾಶ್, ಹಿರಿಯ ರಂಗಭೂಮಿ ಕಲಾವಿದ ರಮೇಶ್ ಗೌಡ ಪಾಟೀಲ್, ಬಯಲಾಟ ಪರಿಷತ್ತು ಅಧ್ಯಕ್ಷ ಜಿ ನಾಗನಗೌಡ, ಜಾನಪದ ಅಕಾಡೆಮಿ ಸದಸ್ಯ ಶಿವಶ್ವೇರಗೌಡ ಕಲ್ಲು ಕಂಬ, ಕರ್ನಾಟಕ ಸರ್ಕಾರ ನೌಕರರ ಸಂಘದ ಜಿಲ್ಲಾಧ್ಯಕ್ಷ ಶಿವಾಜಿ ರಾವ್ ಉಪಸ್ಥಿತರಿದ್ದರು. ವಿವಿಧ ಕಲಾ ಸಾಧಕ ಹೆಚ್ ಪಾಂಡುರಂಗಪ್ಪ, ಎಂ ರಾಮಾಂಜನೇಯಲು, ಮಂಜುನಾಥ ಗೋವಿಂದ ವಾಡ, ಎಂ ಪಾರ್ವತೀಶ, ಜಡೆಪ್ಪ ಎಮ್ಮಿಗನೂರು, ಚಾಮುಂಡಿ, ಅಂಬುಜಮ್ಮ ಇವರೆಲ್ಲರಿಗೂ ಟ್ರಸ್ಟ್ ವತಿಯಿಂದ ಸನ್ಮಾನಿಸಲಾಯಿತು.ತದನಂತರ ಕೆ ಭೀಮೇಶ ಸಿರಿಗೇರಿ ಕಲಾ ತಂಡದಿಂದ ಹಳ್ಳಿಯ ಜನಸಾಗರದ ನಡುವೆ ರಾಮಾಯಣ ಬಯಲಾಟ ಅದ್ಬುತವಾಗಿ ಪ್ರದರ್ಶಿಸಿದರು. ಬಯಲಾಟಕ್ಕೆ ಧ್ವನಿ ಮತ್ತು ಬೆಳಕು ಅರುಣ್ ಸೌಂಡ್, ಪ್ರಾರ್ಥನೆ ಜಡೆಪ್ಪ ಎಮ್ಮಿಗನೂರು, ನಿರೂಪಣೆ ಕೂಡ್ಲಿಗಿ ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಕೆ ಜಿ ಆಂಜನೇಯ ನಿರ್ವಹಿಸಿದರು.ಈ ಸಂದರ್ಭದಲ್ಲಿ ಟ್ರಸ್ಟ್ ಅಧ್ಯಕ್ಷ ರಮಣಪ್ಪ ಭಜಂತ್ರಿ,ವಿ ರಾಮಚಂದ್ರ, ಅಡವಿ ಸ್ವಾಮಿ, ಹೊನ್ನೂರು ಸ್ವಾಮಿ, ಲಕ್ಷ್ಮಿನಾರಾಯಣ, ಅಮರೇಶ, ಸುಬ್ಬಣ್ಣ, ನೇತಿ ರಘುರಾಮ, ದೂತಪ್ಪ, ಟಿ ನಾಗಭೂಷಣ,ಬಿ ಕುಮಾರ್ ಗೌಡ ಮತ್ತು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಕಲಾಭಿಮಾನಿಗಳು ಭಾಗವಹಿಸಿ ಯಶಸ್ವಿಗೊಳಿಸಿದರು 

ಸುದ್ದಿ ಓದಿ