ವಿಜಯಪುರ

98 ನೇ ದಿನಕ್ಕೆ ಸರಕಾರಿ ವೈದ್ಯಕೀಯ ಕಾಲೇಜು ಹೋರಾಟ; ಸರ್ವಸದಸ್ಯರ ಸಭೆ

98 ನೇ ದಿನಕ್ಕೆ ಸರಕಾರಿ ವೈದ್ಯಕೀಯ ಕಾಲೇಜು ಹೋರಾಟ; ಸರ್ವಸದಸ್ಯರ ಸಭೆ

 ವಿಜಯಪುರ 24: 98 ನೇ ದಿನಕ್ಕೆ ಸರಕಾರಿ ವೈದ್ಯಕೀಯ ಕಾಲೇಜು ಹೋರಾಟ ಸಮಿತಿಯಿಂದ ಇಂದು ಸರ್ವಸದಸ್ಯರ ಸಭೆಯನ್ನ ಕರೆಯಲಾಗಿತ್ತು.  ಈ ಸಭೆಯನ್ನು ಉದ್ದೇಶಿಸಿ ವೀರಶೈವ ಸಮಾಜದ ಕಾರ್ಯದರ್ಶಿ ಯಾದ ವಿ.ಸಿ ನಾಗಠಾಣ ರವರು ಮಾತನಾಡುತ್ತಾ, 98 ದಿನಗಳಿಂದ ಅನಿರ್ದಿಷ್ಟ ಧರಣಿ ನಡೆಯುತ್ತಿದೆ. ಜಿಲ್ಲೆಯ ಉಸ್ತುವಾರಿ ಸದಸ್ಯರುಗಳು ಇದರ ಬಗ್ಗೆ ಎಲ್ಲಿಯವರೆಗೆ ಮಾತನಾಡುತ್ತಿರಲಿಲ್ಲ. ಈಗ ನೆನ್ನೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಎಮ್ ಬಿ ಪಾಟೀಲ ರವರು ಜಿಲ್ಲೆಗೆ ಪಿಪಿಪಿ ಮಾದರಿ ಕೈಬಿಟ್ಟು ಸಂಪೂರ್ಣ ವೈದ್ಯಕೀಯ ಕಾಲೇಜು ಆರಂಭಿಸಲು ಮುಖ್ಯಮಂತ್ರಿಗಳ ಜೊತೆ ಮಾತನಾಡುತ್ತೇನೆ ಕಾಲೇಜು ಆರಂಭಿಸಲು ಸಂಪೂರ್ಣ ಪ್ರಯತ್ನನಡೆಯುತ್ತಿದೆ ಎಂದು ಹೇಳಿರುವುದಕ್ಕೆ ನಾವು ಅವರ ಮುಂದಿನ ನಡೆಯನ್ನು ಗಮನಿಸಿ ಹೋರಾಟದ ರೂಪುರೇಷೆಗಳನ್ನು ಬದಲಾವಣೆ ಮಾಡಿಕೊಳ್ಳುತ್ತೇವೆ ಎಂದು ಹೇಳಿದರು.  

ಸಭೆಯ ಅಧ್ಯಕ್ಷತೆಯನ್ನು ವಹಿಸಿದ ಹಿರಿಯ ವಕೀಲರಾದ ಕೆ ಎಫ್ ಅಂಕಲಗಿಯವರು ಮಾತನಾಡುತ್ತಾ ಬಿಜಾಪುರ ಜಿಲ್ಲೆಗೆ ಮೊದಲೆ ಕಾಲೇಜು ಮಂಜೂರು ಮಾಡಬೇಕೆಂದು ಬೊಮ್ಮಾಯಿ ಯವರ ಕಾಲದಿಂದಲೇ ಆಗಿತ್ತು. ಆದರೆ ನಮ್ಮ ಜಿಲ್ಲೆಯ ಜನ ಪ್ರತಿನಿಧಿಗಳು ಇದಕ್ಕೆ ಹೆಚ್ಚು ಗಮನ ಕೊಡಬೇಕಾಗಿತ್ತು. ಒಬ್ಬರಲ್ಲ ಇಬ್ಬರು ಕ್ಯಾಬಿನೆಟ್ ಮಿನಿಸ್ಟರ್ ಗಳಿದ್ದು ಯಾವುದೇ ಪ್ರಯತ್ನ ಮಾಡುತ್ತಿಲ್ಲ. ವಿಜಯಪುರ ಜಿಲ್ಲೆಯ ಜನರು ಅವರ ಮನೆಗೆ ಮುತ್ತಿಗೆ ಹಾಕುವುದರ ಮೂಲಕ ನಮ್ಮ ಹೋರಾಟವನ್ನು ಇನ್ನಷ್ಟು ಬಲಪಡಿಸೋಣ.ವೈದ್ಯಕೀಯ ಕಾಲೇಜು ಆಗುವವರೆಗೂ ಯಾವುದೇ ಕಾರಣಕ್ಕೂ ನಮ್ಮ ಹೋರಾಟವನ್ನು ಮುಂದುವರೆಸೋಣ ಎಂದು ಹೇಳಿದರು. ಹೋರಾಟ ಸಮಿತಿಯ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು. 


ಸುದ್ದಿ ಓದಿ