ಸಂಗೀತ ಲೋಕಕ್ಕೆ ರಾಜ ಇದ್ದಂತೆ ಘಂಟಸಾಲ :ಸೋಮಶೇಖರ್ ರೆಡ್ಡಿ
ಲೋಕದರ್ಶನ ವರದಿ
ಬಳ್ಳಾರಿ 10: ರಾಘವ ಮೆಮೋರಿಯಲ್ ಅಸೋಸಿಯೇಷನ್ ಬಳ್ಳಾರಿ ವತಿಯಿಂದ ನಡೆದ ಘಂಟಸಾಲ ನಾಟಕ ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು. ನಗರ ಮಾಜಿ ಶಾಸಕ ಗಾಲಿ ಸೋಮಶೇಖರ್ ರೆಡ್ಡಿ ಸೂರ್ಯ ಚಂದ್ರ ಇರುವವರಿಗೆ ಘಂಟಸಾಲ ಹಾಡಿದ ಹಾಡುಗಳು ಮರೆಯುವಂತಿಲ್ಲ, ಸಂಗೀತ ಲೋಕಕ್ಕೆ ರಾಜ ಇದ್ದಂತೆ ಘಂಟಸಾಲ ಅವರ ಜೀವನ ಚರಿತ್ರೆ ನಾಟಕ ರೂಪದಲ್ಲಿ ಪ್ರದರ್ಶನ ಮಾಡುತ್ತಿರುವುದು ಸಂತೋಷದ ಸಂಗತಿ ಎಂದು ಮಾತನಾಡಿದರು. ಹಾಗೂ ಕೊನೆಯವರೆಗೂ ನಾಟಕ ಪ್ರದರ್ಶನ ನೋಡಿ ಕಲಾವಿದರಿಗೆ ಪ್ರೋತ್ಸಾಹ ಮಾತುಗಳನ್ನು ಹೊಗಳಿದರು.
ನಾಟಕಕ್ಕೆ ಸಹಕಾರ ನೀಡಿದ ಖ್ಯಾತ ವಾಸ್ತು ಜ್ಯೋತಿಷ್ಯ ಪಂಡಿತ ಜಿ ವಿ ಆರ್ ರಾಜು ಘಂಟಸಾಲ ಸಂಗೀತ, ಹಾಡುಗಳನ್ನು ಮಾತ್ರ ಕೇಳಿದ್ದೇವೆ ಅದರೆ ಈಗ ಅವರ ಜೀವನ ಚರಿತ್ರೆ ನಾಟಕ ರೂಪದಲ್ಲಿ ಪ್ರದರ್ಶನ ಮಾಡುತ್ತಿರುವುದು ಬಹಳ ಸಂತಸ ವಿಷಯ ಅದಕ್ಕಾಗಿ ಎಲ್ಲರೂ ಸಂಪೂರ್ಣ ನಾಟಕ ನೋಡಬೇಕೆಂದು ನುಡಿದರು.
ಈ ಸಂದರ್ಭದಲ್ಲಿ ವೇದಿಕೆ ಮೇಲೆ ಸಂಸ್ಥೆಯ ಗೌರವಾಧ್ಯಕ್ಷ ಕೆ ಚನ್ನಪ್ಪ, ಉಪಾಧ್ಯಕ್ಷ ರಮೇಶ್ ಗೌಡ ಪಾಟೀಲ್, ಖಜಾಂಚಿ ಪಿ ಧನಂಜಯ, ಗೌರವ ಕಾರ್ಯದಶರ್ಿ ಎನ್ ಪ್ರಕಾಶ್, ಜಂಟಿ ಕಾರ್ಯದಶರ್ಿ ಎಂ ರಾಮಾಂಜನೇಯಲು ಹಾಗೂ ಡಾ. ಅರ್ ದೇವಣ್ಣ, ಕೆ ಶ್ಯಾಮ ಸುಂದರ, ಕೆ ಕೃಷ್ಣ, ಡಾ.ಡಿ ಎಲ್ ರಮೇಶ್ ಗೋಪಾಲ್, ಕೆ ರಾಮಾಂಜನೇಯಲು, ಪಿ ಶ್ರೀನಿವಾಸಲು, ಜಿ ಆರ್ ವೆಂಕಟೇಶಲು, ಸಿ ಎ ಚೌದರಿ, ಜಿ ಪ್ರಭಾಕರ, ಕೆ ಅನಿಲ್ ಬಾಬು, ವಿ ರಾಮಚಂದ್ರ, ಸುರೇಂದ್ರ ಬಾಬು, ರಮಣಪ್ಪ ಭಜಂತ್ರಿ, ಕಲಾವಿದರು ಭಾಗವಹಿಸಿದ್ದರು. ತದನಂತರ ಶ್ರೀ ಸಾಯಿ ಸಂತೋಷಿ ನಾಟ್ಯ ಮಂಡಲಿ ಸುರಭಿ ಸ್ಟೇಷನ್ ಘನಪುರ ಹೈದರಾಬಾದ್ ತಂಡದಿಂದ ಹಾಗೂ ಭಾಸ್ಕರುನಿ ಸತ್ಯ ಜಗದೀಶ್ ಇವರ ರಚನೆ ನಿದರ್ೆಶನದಲ್ಲಿ ಘಂಟಸಾಲ ನಾಟಕವನ್ನು ಅಧ್ಬುತವಾಗಿ ಪ್ರದರ್ಶನ ನೀಡಿದರು