ಬಳ್ಳಾರಿ

ಗಂಗಾಮತ, ಕೋಲಿ, ಬಾರ್ಕಿ , ಮೊಗವೀರ ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಒತ್ತಾಯ

ಗಂಗಾಮತ, ಕೋಲಿ, ಬಾರ್ಕಿ , ಮೊಗವೀರ ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಒತ್ತಾಯ

ಲೋಕದರ್ಶನ ವರದಿ

ಬಳ್ಳಾರಿ, ಫೆ.21: ಸುಮಾರು 3 ದಶಕಗಳಿಂದ ಗಂಗಾಮತ, ಕೋಲಿ, ಬಾರ್ಕಿ, ಮೊಗವೀರ ಮತ್ತು ಪಯರ್ಾಯ ಪದಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆಂಬ ನಮ್ಮ ಹೋರಾಟಕ್ಕೆ ಇಲ್ಲಿಯವರೆಗೂ ನ್ಯಾಯ ಸಿಗದಂತಾಗಿದೆ. ಚುನಾವಣೆ ಸಂದರ್ಭದಲ್ಲಿ ನಮ್ಮ ಪರವಾಗಿ ಹೇಳಿಕೆ ನೀಡಿದ ಬಿಜೆಪಿ ಸಕರ್ಾರವು ಮೂಗಿಗೆ ತುಪ್ಪ ಸವರಿ ನಡುರಸ್ತೆಯಲ್ಲಿ ಬಿಟ್ಟಂತಾಗಿದೆ. ಅಲ್ಲದೇ ಕಳೆದ ನಾಲ್ಕು ವರ್ಷಗಳಲ್ಲಿ ಪ್ರಧಾನ ಮಂತ್ರಿಗಳೂ ಸೇರಿದಂತೆ ಕೇಂದ್ರ ಮತ್ತು ರಾಜ್ಯ ಸಕರ್ಾರಗಳ ಹಲವಾರು ಸಚಿವರಿಗೆ, ಸಂಸದರಿಗೆ ಈ ಕುರಿತು ಮನವಿ ಪತ್ರಗಳನ್ನು ನೀಡುತ್ತಾ ಬಂದಿದ್ದರೂ ಯಾವುದೇ ರೀತಿಯ ಪ್ರಯೋಜವಾಗದಿರುವುದು ಅತ್ಯಂತ ನೋವಿನ ಸಂಗತಿಯಾಗಿದೆ ಎಂದು ಕನರ್ಾಟಕ ರಾಜ್ಯ ಗಂಗಾಮತಸ್ಥರ ಸಂಘದ ಅಧ್ಯಕ್ಷರಾದ ಬಿ.ಮೌಲಾಲಿ ತಿಳಿಸಿದರು. 

ಮಂಗಳವಾರ ಪತ್ರಿಕಾ ಭವನದಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರಗಳ ಅವಧಿ ಮುಗಿಯುವಷ್ಟರಲ್ಲಿ ಗಂಗಾಮತ, ಕೋಲಿ, ಬಾರ್ಕಿ, ಮೊಗವೀರ ಮತ್ತು ಪರ್ಯಾಯ ಪದಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸದೇ ಹೋದಲ್ಲಿ ಮುಂದಿನ ಚುನಾವಣೆಯಲ್ಲಿ ಬಿಜೆಪಿ ಸರ್ಕಾರಗಳಿಗೆ ತಕ್ಕ ಪಾಠ ಕಲಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಈಗಲಾದರೂ ಸರ್ಕಾರಗಳು ಎಚ್ಚೆತ್ತುಕೊಂಡು ನಮ್ಮ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆಂದು ಒಕ್ಕೊರಲಿನಿಂದ ಒತ್ತಾಯಿಸುತ್ತೇವೆ ಎಂದರು.

ಬಿಜೆಪಿ ಹಿರಿಯ ಮುಖಂಡರು ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ರವರು, ಕರ್ನಾಟಕದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಸರ್ಕಾರದ ಪ್ರಧಾನ ಕಾರ್ಯದರ್ಶಿ ಎನ್ ರವಿಕುಮಾರ್ ಹಾಗೂ ಅನೇಕ ಹಿರಿಯ ಮುಖಂಡರುಗಳು ಕಳದ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಕಲಬುರಗಿಯಲ್ಲಿ ನಡೆದ ಸಮಾವೇಶದಲ್ಲಿ ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಭರವಸೆ ನೀಡಿ, ಮತ ಪಡೆದು ಲೋಕಸಭೆಗೆ ಆಯ್ಕೆಯಾದ ನಂತರ ಈವರೆಗೂ ನಮ್ಮ ಕಡೆ ಗಮನಹರಿಸದಿರುವುದು, ನಮ್ಮನ್ನು ಕಡೆಗಣಿಸಿರುವುದು ಸಮಾಜಕ್ಕಾಗಿರುವ ಅತಿ ದೊಡ್ಡ ಅನ್ಯಾಯವಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ಗಂಗಾಮತ, ಕೋಲಿ, ಬಾರ್ಕಿ , ಮೊಗವೀರ ಮತ್ತು ಪರ್ಯಾಯ ಪದಗಳನ್ನು ಒಳಗೊಂಡ ನಮ್ಮ ಸಮಾಜವು ಕರ್ನಾಟಕದ ಎಲ್ಲಾ ಕಡೆ ವಿಸ್ತರಿಸಿ ಸುಮಾರು 26 ಲಕ್ಷಕ್ಕೂ ಹೆಚ್ಚು ಜನಸಂಖ್ಯೆಯನ್ನು ಹೊಂದಿರುತ್ತದೆ. ಮೀನುಗಾರಿಕೆ ನಮ್ಮ ಮೂಲ ಕಸುಬಾಗಿದ್ದು, ನಮ್ಮ ಸಮಾಜದಲ್ಲಿ ಶೇಕಡಾ 98ರಷ್ಟು ಜನ  ಬಡತನದಲ್ಲಿ ಇರುವುದು ಕಂಡು ಬರುತ್ತದೆ. ಇದರೊಂದಿಗೆ ಶಿಕ್ಷಣ, ರಾಜಕೀಯ ಮತ್ತು ಸಾಮಾಜಿಕವಾಗಿ ನಮ್ಮ ಸಮಾಜವು ಹಿಂದುಳಿದಿದೆ. ಕೇಂದ್ರ ಅಥವಾ ರಾಜ್ಯ ಸರ್ಕಾರಗಳಿಂದ ಕರ್ನಾಟಕದ ಯಾವ ಜಿಲ್ಲೆಗಳ ನಮ್ಮ ಸಂಘಗಳಿಗೆ ಸಹಾಯ ಸಹಕಾರ ನೀಡಿರುವುದಿಲ್ಲ. ಕೇವಲ ಚುನಾವಣೆಯ ಸಂದರ್ಭದಲ್ಲಿ ನಮ್ಮ ಸಮಾಜಕ್ಕೆ ಆಸೆ, ಆಮೀಷವೊಡ್ಡಿ ಮತ ಪಡೆದು ಚುನಾವಣೆಯಲ್ಲಿ ಗೆದ್ದ ನಂತರ ನಮ್ಮ ಸಮಾಜವನ್ನು ಕಡೆಗೆಣಿಸುತ್ತಾ ಬಂದಿರುವುದು ಅತ್ಯಂತ ದುರಾದೃಷ್ಟಕರ ಸಂಗತಿ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕಲಬುರ್ಗಾ  ಸಮಾವೇಶದಲ್ಲಿ "ಹಮ್ ಕೋಲಿ ಸಮಾಜ್ ಕೋ ಯಾದ್ ರಖುಂಗಾ" ಎಂಬ ಭರವಸೆ ಕೊಟ್ಟು, ನಂತರದ ದಿನಗಳಲ್ಲಿ ಕೋಲಿ ಸಮಾಜದತ್ತ ನೋಡದೇ ಇರುವುದು ಖೇದಕರ ಸಂಗತಿಯಾಗಿದೆ ಎಂದರು.

ನಮ್ಮ ಸಮಾಜವು 39 ಪರ್ಯಾಯ ಪದಗಳುಳ್ಳ ಸಮಾಜ, ನಮ್ಮ ಸಮಾಜವು 1891-1931ರ ಜನಗಣತಿಯಿಂದ ಪರಿಗಣಿಸಿದರೆ ನಮ್ಮ ಗರಿಷ್ಠ ಪರ್ಯಾಯ ಪದಗಳು ಆದಿವಾಸಿಗಳೆಂದು ಲಿಖಿತ ರೂಪದಲ್ಲಿದೆ. ಈ ವರದಿಯನ್ನು ಈಗಾಗಲೇ 2020ರಲ್ಲಿ ಕರ್ನಾಟಕ ರಾಜ್ಯ ಬುಡಕಟ್ಟು ಜನಾಂಗದ ಸಂಶೋಧನಾ ಕೇಂದ್ರವು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿದರು. ನಮ್ಮ ಜನಾಂಗಕ್ಕೆ ನ್ಯಾಯ ಕೊಡಿಸುವಲ್ಲಿ ಬಿಜೆಪಿ ಸರ್ಕಾರದಲ್ಲಿರುವ ಯಾವ ನಾಯಕರು ಕೂಡ ದಿಟ್ಟ ಹೆಜ್ಜೆ ಹಾಕದೇ ಇರುವುದು ಬೇಸರದ ಸಂಗತಿಯಾಗಿದೆ. ನಮ್ಮ ಸಮಾಜವು ವೋಟ್ ಬ್ಯಾಂಕ್ ಎಂದು ಉಪಯೋಗಿಸಿ ಕೈ ಬಿಡಬಾರದೆಂದು ನಮ್ಮ ಸಮಾಜದ ಕೂಗು ಎಂದು ಒತ್ತಾಯಿಸಿದರು.

ನಮ್ಮ ಜನಾಂಗ ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಭಾಗದಲ್ಲಿ ಹೊರನಾಡು ಮೀನುಗಾರರಿಗೆ ಮೊಗವೀರರು ಸುಮಾರು 8 ಲಕ್ಷ ಜನ ಸಂಖ್ಯೆಯಲ್ಲಿದ್ಧರೆ, 12 ಶಾಸಕ ಕ್ಷೇತ್ರಗಳು ಮತ್ತು 4 ಸಂಸದ ಕ್ಷೇತ್ರಗಳು  ನಮ್ಮ ಮತ ನಿರ್ಧರಿಸುವ ಶಕ್ತಿ ಇರುವಂಥದ್ದು ಎಂದು ತಿಳಿಸಿರುತ್ತೇವೆ. ಹಾಗೆ ಉತ್ತರ ಕರ್ನಾಟಕದಲ್ಲಿ ಕಲ್ಬುಗರ್ಿ, ಯಾದಗಿರಿ, ರಾಯಚೂರು, ಬಳ್ಳಾರಿ, ವಿಜಯಪುರ ಸೇರಿ ಸುಮಾರು 14 ಶಾಸಕ ಹಾಗೂ 3 ಸಂಸದ ಕ್ಷೇತ್ರಗಳಲ್ಲಿ ನಿರ್ಧರಿಸುವ ಮತದಾರರಾಗಿದ್ದೇವೆ. ಮಧ್ಯ ಕರ್ನಾಟಕ ಮತ್ತು ದಕ್ಷಿಣ ಕರ್ನಾಟಕ ಸೇರಿ 10 ಶಾಸಕ ಹಾಗೂ 2 ಸಂಸದ ಕ್ಷೇತ್ರಗಳಲ್ಲಿ ನಿರ್ಧರಿಸುವ ಮತಗಳು ನಮ್ಮ ಸಮಾಜ ಆಗಿರುತ್ತದೆ. ಆದರೂ ನಮ್ಮ ಸಮಾಜಕ್ಕೆ ಇಂದಿಗೂ ಸಾಮಾಜಿಕ ನ್ಯಾಯ ಸಿಗದಂತಾಗಿದೆ. ಆದಕಾರಣ ಮಾಧ್ಯಮ ವರದಿಗಾರರು ನಮ್ಮ ಸಮಾಜದ ಕೂಗು ಸರ್ಕಾರಕ್ಕೆ ಮುಟ್ಟಿಸುವ ಕಾರ್ಯದಲ್ಲಿ ಸಹಕಾರ ನೀಡಬೇಕೆಂದು ಮನವಿ ಮಾಡಿದರು.

ಟೋಕ್ರೆ ಕೋಲಿ, ಧೋರ್ ಕೋಲಿ, ಕೋಯಾಗಳ ಪಟ್ಟಿಯಿಂದ ಉಳಿದಿರುವ ಗಂಗಾಮಾತೆಯ ಸಮಾನಾರ್ಥಕ ಪದಗಳು ಒಂದೇ ಆಗಿರುವುದರಿಂದ ಈಗ ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆಂದು ಒತ್ತಾಯಿಸುತ್ತಿದ್ದೇವೆ. ಈಗಾಗಲೇ ಭಾರತ ಸರ್ಕಾರವು ಈ ಜನಾಂಗದ ಸಮುದಾಯವನ್ನು 14 ರಾಜ್ಯಗಳಲ್ಲಿ ಪರಿಶಿಷ್ಟ ಜಾತಿ ಮತ್ತು 5 ರಾಜ್ಯಗಳಲ್ಲಿ ಪರಿಶಿಷ್ಟ ಪಂಗಡಕ್ಕೆ ಸೇರಿಸಿದ್ದು, ಅದೇರೀತಿ ಕನರ್ಾಟಕದಲ್ಲೂ ನಮ್ಮ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆಂದು ಒತ್ತಾಯಿಸಿದರು.

ನಮ್ಮ ಸಮಾಜದ ಜನರಿಗೆ ನ್ಯಾಯ ದೊರಕಿಸಬೇಕೆಂದು, ಕೇಂದ್ರ ಸಕರ್ಾರದ ಗೃಹ ಸಚಿವ ಅಮಿತ್ ಶಾ ಅವರಿಗೆ ನಮ್ಮ ಸಮಾಜದ ಪರವಾಗಿ ನಮ್ಮ ಬೇಡಿಕೆ ಪರಿಗಣಿಸಿ ಭಾರತದ ಜನಗಣತಿ ಆಯುಕ್ತರ ಕಛೇರಿಯಿಂದ ಅತಿ ಶೀಘ್ರದಲ್ಲೇ ಕ್ರಮ ಕೈಗೊಂಡು ನಮ್ಮ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು ಎಂದು ಮನವಿ ಮಾಡಿದರು.

ನಮ್ಮ ಸಮಾಜವು ಶಿಕ್ಷಣ ಕ್ಷೇತ್ರದಲ್ಲಿ ಅತಿ ಹಿಂದುಳಿದಿದ್ದು, ಯಾವುದೇ ಜಿಲ್ಲೆಯಲ್ಲಿ ಸಕ್ರಮವಾಗಿ ವಿದ್ಯಾರ್ಥಿ ಭವನಗಳಿಲ್ಲದೇ, ನಮ್ಮ ಸಮಾಜದ ವಿದ್ಯಾರ್ಥಿಗಳು ಪರದಾಡುವಂತಾಗಿದೆ, ನಾವು ಸಾಕಷ್ಟು ಬಾರಿ ಕರ್ನಾಟಕ ರಾಜ್ಯ ಗಂಗಾಮತಸ್ಥರ ಸಂಘದ ವತಿಯಿಂದ ರಾಜ್ಯ ಸರ್ಕಾರಕ್ಕೆ ಅನುದಾನ ಮಂಜೂರಾತಿಗೆ ಮನವಿ ಮಾಡಿದರೂ ಕೂಡಾ ಯಾವುದೇ ರೀತಿಯ ಉಪಯೋಗವಿಲ್ಲದಂತಾಗಿದೆ. ಮುಂಬರುವ ಚುನಾವಣೆಗಳಲ್ಲಿ ನಮ್ಮ ಸಮಾಜವನ್ನು ಚುನಾವಣೆಯ ಅಸ್ತ್ರವನ್ನಾಗಿ ಬಳಸಿಕೊಳ್ಳಲು ಗಂಗಾಮತಸ್ಥರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ವಿಷಯವನ್ನು ಹಿನ್ನೆಡೆಗೆ ಸರಿಸಲಾಗುತ್ತಿದೆ ಎಂಬ ಅಪವಾದಗಳು ಕೇಳಿ ಬರುತ್ತಿದ್ದು, ನಮ್ಮ ಸಮಾಜದ 30 ವರ್ಷಗಳ ಹೋರಾಟಕ್ಕೆ ನ್ಯಾಯ ಸಿಗಬೇಕಾಗಿದೆ ಎಂದರು. ಗಂಗಾಮತಸ್ಥ ಮತ್ತು ಇತರೆ ಪರ್ಯಾಯ ಜಾತಿಗಳ ಸಮುದಾಯವನ್ನು, ಸಕರ್ಾರಿ ಸೌಲಭ್ಯಗಳಿಂದ ವಂಚಿಸಿ, ಕೇವಲ ಓಟ್ ಬ್ಯಾಂಕ್ ಆಗಿ ಮಾತ್ರ ಬಳಸಿಕೊಳ್ಳಲಾಗುತ್ತದೆ ಎಂಬುದು ಮತ್ತೊಂದು ಗಂಭೀರ ಆರೋಪ ಎಂದರು.

ನಿವೃತ್ತ ಆರ್.ಟಿ.ಓ ಹಾಗೂ ಬಳ್ಳಾರಿ ಜಿಲ್ಲಾ ಗೌರವಾಧ್ಯಕ್ಷ ಪಂಪಾಪತಿ, ಸಿರುಗುಪ್ಪ ಅಧ್ಯಕ್ಷ ದೇವೇಂದ್ರ, ವಿಜಯನಗರ ಗೌರವಾಧ್ಯಕ್ಷ ಯಮುನಪ್ಪ, ಕೊಪ್ಪಳ ಜಿಲ್ಲಾಧ್ಯಕ್ಷ ಸೋಮಪ್ಪ, ಯುವ ಮುಖಂಡ ರಾಘವೇಂದ್ರ ಸೇರಿದಂತೆ ತಾಲೂಕು ಅಧ್ಯಕ್ಷರುಗಳು ಉಪಸ್ಥಿತರಿದ್ದರು 

ಸುದ್ದಿ ಓದಿ