ಗದಗ

ಗದಗ ಜಿಲ್ಲೆ ಮುಂಗಾರು: ಶೇ 46ರಷ್ಟು ಮಳೆ ಕೊರತೆ

ಗದಗ ಜಿಲ್ಲೆ ಮುಂಗಾರು: ಶೇ 46ರಷ್ಟು ಮಳೆ ಕೊರತೆ

ಗದಗ 19: ಗದಗ ಜಿಲ್ಲೆಯಲ್ಲಿ 2011 ರಿಂದ ನಿರಂತರವಾಗಿ ಸರಾಸರಿ (641.6 ಮಿ.ಮೀ) ವಾಡಿಕೆ ಮಳೆಗಿಂತ   ಕಡಿಮೆ ಮಳೆಯಾಗುತ್ತಿದೆ. 2011 ರಲ್ಲಿ 475.3 ಮಿ.ಮೀ, 2012 ರಲ್ಲಿ 398.5 ಮಿ.ಮೀ , 2013 ರಲ್ಲಿ 518.2 ಮಿ.ಮೀ,2014 ರಲ್ಲಿ  ಮೇ, ಅಗಸ್ಟ್ ದಲ್ಲಿ ಆದ ಅಕಾಲಿಕ ಹೆಚ್ಚಿನ ಮಳೆಯಿಂದ 703.6  ಮಿ.ಮೀ ಮಳೆ ಆಗಿತ್ತು. 2015 ರಲ್ಲಿ 396.7 ಮಿ.ಮೀ, 2016 ರಲ್ಲಿ  370.2 ಮಿ.ಮೀ, 2017ರಲ್ಲಿ 549.1 ಮಿ.ಮಿ. ಮಳೆಯಾಗಿದ್ದು 2018ರ ಸೆಪ್ತೆಂಬರ ಅಂತ್ಯದವರೆಗೆ 382 ವಆಡಿಕೆ ಪೈಕಿ ಕೇವಲ 206 ಮಿ.ಮೀ. ಮಳೆಯಾಗಿ ಮುಂಗಾರು ಹಂಗಾಮಿಗೆ ಶೇ.46 ರಷ್ಟು ಕೊರತೆ ಆಗಿದೆ ಎಂದು ಗದಗ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ  ನುಡಿದರು. 

ಗದಗ ಜಿಲ್ಲೆಯ 2018ರ ಮುಂಗಾರು ಬರ, ಬೇಳೆಹಾನಿ  ಅಧ್ಯಯನಕ್ಕೆ ಆಗಮಿಸಿದ  ಕೇಂದ್ರ ಕುಕ್ಕುಟ ಅಭಿವೃದ್ಧಿ ಮತ್ತು ತರಬೇತಿ ಸಂಸ್ಥೆಯ ನಿದರ್ೇಶಕ ಡಾ. ಮಹೇಶ ನೇತೃತ್ವದ ಸಿಡಬ್ಲುಸಿಯ ನಿದರ್ೇಶಕ ಡಾ. ಓ.ಆರ್.ಟಿ.ರೆಡ್ಡಿ, ಕೇಂದ್ರ ಗ್ರಾಮೀಣಾಭಿವೃದ್ಧಿ ಇಲಾಖೆಯ ಆಧೀನ ಕಾರ್ಯದಶರ್ಿ ಶ್ರೀಮತಿ ನೀತಾ ತೆಹಲ್ಲ್ಯಾನಿ ತಂಡಕ್ಕೆ ಗಜೇಂದ್ರಗಡದ ಪರಿವೀಕ್ಷಣಾ ಮಂದಿರದಲ್ಲಿ ಗದಗ ಜಿಲ್ಲೆಯಲ್ಲಿ  ಮುಂಗಾರು ಮಳೆ ಕೊರತೆಯಿಂದ ಬೆಳೆ ಹಾನಿ ಹಾಗೂ ಉಂಟಾಗಿರುವ ಬರಪರಿಸ್ಥಿತಿ  ಕುರಿತು ಜಿಲ್ಲಾಧಿಕಾರಿ ವಿಸ್ತೃತ ಮಾಹಿತಿ ನೀಡಿದರು. 

     ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಕೃಷಿ ಬೆಳೆಗಳ 2.40  ಲಕ್ಷ ಹೆಕ್ಟೇರ್ ಬಿತ್ತನೆ ಗುರಿ  ಪೈಕಿ 2.11 ಲಕ್ಷ ಹೆಕ್ಟೇರ್  ಬಿತ್ತನೆ ಸಾಧ್ಯವಾಗಿತ್ತು.  ಈ ಪೈಕಿ 1.73 ಲಕ್ಷ ಹೆಕ್ಟೇರ್ ಬೆಳೆ, ತೋಟಗಾರಿಕೆಯಲ್ಲಿ 39 ಸಾವಿರ ಹೆಕ್ಟೇರ ಬೆಳೆ ಸೂಕ್ತ ಪ್ರಮಾಣದ ಮಳೆ ಬಾರದ ಕಾರಣ ಹಾನಿಗೊಳಗಾಗಿವೆ. 

ಕೃಷಿ: 95,592 ಹೆ. ಹೆಸರು, 33,119 ಹೆ. ಗೋವಿನಜೋಳ, 32,421 ಹೆ. ಶೇಂಗಾ, 14,415 ಹೆ.ಹತ್ತಿ, 4,506 ಹೆ. ಸೂರ್ಯಕಾಂತಿ, 1,973 ಹೆ. ಜೋಳ, 1,743 ಹೆ. ತೊಗರಿ ಹಾಗೂ 1,826 ಹೆ. ಇತರೆ ಬೆಳೆ ಮಳೆ ಕೊರತೆಯಿಂದ ಹಾನಿಗೊಳಗಾಗಿವೆ.  ಎನ್,ಡಿ.ಆರ್.ಎಫ್. ನಿಯಮಗಳನ್ವಯ ಕೃಷಿ ಬೆಳೆಗಳ 1.73 ಲಕ್ಷ ಹೆ. ಬೆಳೆ ಹಾನಿ ಕುರಿತಂತೆ ಗದಗ ಜಿಲ್ಲೆಯಿಂದ 118.60 ಕೋಟಿ ಇನಪುಟ ಸಬ್ಸಿಡಿ ಕ್ಲೇಮು ಮಾಡಿ ಪ್ರಸ್ತಾವನೆ ಈಗಾಗಲೇ ಸಲ್ಲಿಸಲಾಗಿದೆ.

ತೋಟಗಾರಿಕೆ: ಗದಗ ಜಿಲ್ಲೆಯಲ್ಲಿ 25,186 ಹೆ. ಉಳ್ಳಗಡ್ಡಿ, 13,817 ಹೆ. ಮೆಣಸಿನಕಾಯಿ ಸೇರಿದಂತೆ ಒಟ್ಟು 39,003 ಹೆ. ಬೆಳೆ ಹಾನಿಯಾಗಿದ್ದು ನಿಯಮಾವಳಿಯನ್ವಯ 28.53 ಕೋಟಿ ರೂ. ಗಳ ಇನಪುಟ ಸಬ್ಸಿಡಿ ಕ್ಲೇಮು ಪ್ರಸ್ತಾವಣೆ ಈಗಾಗಲೇ ಸಲ್ಲಿಸಲಾಗಿದೆ.   

ಕುಡಿಯುವ ನೀರು: ಜಿಲ್ಲೆಯಲ್ಲಿ ಗದಗ ತಾಲೂಕಿನ 17, ಮುಂಡರಗಿಯ 29, ನರಗುಂದದ 14 , ರೋಣದ 46 ಹಾಗೂ ಶಿರಹಟ್ಟಿಯ 43 ಸೇರಿದಂತೆ ಒಟ್ಟು 149   ಕುಡಿಯುವ ನೀರಿನ ಸಮಸ್ಯಾತ್ಮಕ ಗ್ರಾಮಗಳನ್ನು ಗುರುತಿಸಲಾಗಿದ್ದು ಸಮಸ್ಯೆ ಪರಿಹಾರಕ್ಕೆ ಅಗತ್ಯದ ಕ್ರಮ ಕೈಕೊಳ್ಳಲಾಗುತ್ತಿರ್ಧಧೂ 2 ಕೋಟಿ ರೂ.ಗಳ ಅನುದಾನಕ್ಕೆ ಬೇಡಿಕೆ ಸಲ್ಲಿಸಲಾಗಿದೆ.  

ಪಶು ಪಾಲನೆ; ಜಿಲ್ಲೆಯಲ್ಲಿ ಆಕಳು,ಎತ್ತು, ಎಮ್ಮೆಗಳ ಸಂಖ್ಯೆ 2.03 ಲಕ್ಷ  ಇದ್ದು 3.6 ಲಕ್ಷ ಆಡು, ಕುರಿಗಳುಸೇರಿದಂತೆ ಒಟ್ಟು 5.92 ಲಕ್ಷ ಜಾನುವಾರುಗಳಿವೆ.  35,630 ಮೆಟ್ರಿಕ್ ಟನ್ ಮೇವು ಲಭ್ಯವಿದೆ. 11 ಗೋಶಾಲೆ ತೆರೆಯಲು 3.63 ಕೋಟಿ, 22 ಮೇವು ಬ್ಯಾಂಕು ಸ್ಥಾಪನೆಗೆ 4.40 ಕೋಟಿ, ಔಷಧಿ, ಪೌಷ್ಠಿಕ ಮೇವು ಮತ್ತು ಮೇವಿನ ಕಿಟ್ಗಳ ಪೂರೈಕೆಗಾಗಿ ತಲಾ 1.25 ಕೋಟಿ ರೂ.ಗಳ ಬೇಡಿಕೆ ಸಲ್ಲಿಸಲಾಗಿದೆ.

ಮಹಾತ್ಮಾ ಗಾಂಧಿ ರಾಷ್ರೀಯ ಉದ್ಯೋಗ ಖಾತರಿ ಯೋಜನೆ:   ಜಿಲ್ಲೆಯಲ್ಲಿ 1,33,366   ಕುಟುಂಬಗಳ ಪೈಕಿ 1,29,044  ಉದ್ಯೋಗ ಕಾಡರ್ುಗಳನ್ನು ನೀಡಲಾಗಿದೆ.  2018-19ವರ್ಷದಲ್ಲಿ  ಒಟ್ಟು 25.88   ಲಕ್ಷ  ಮಾನವ ದಿನಗಳನ್ನು ನಿಮರ್ಿಸುವ ಗುರಿ ಪೈಕಿ  13.63ಲಕ್ಷ ಮಾನವ ದಿನಗಳನ್ನು ಸೃಷ್ಟಿಸಲಾಗಿದೆ. 62.68 ಕೋಟಿ ರೂ.ವೆಚ್ಚ ಮಾಡಲಾಗಿದೆ.   

     ಒಟ್ಟಾರೆ  ಗದಗ ಜಿಲ್ಲೆಯ ಬರ ಹಾಗೂ ಸಾರ್ವಜನಿಕ ಕುಂದುಕೊರತೆ ನಿರ್ವಹಣೆ ಹಾಗೂ ಮೇಲ್ವಿಚಾರಣೆಗೆ ಹೋಬಳಿ, ತಾಲೂಕಾ ಮಟ್ಟದಲ್ಲಿ ನಿಯಮಿತವಾಗಿ ಜನಸ್ಪಂದನಾ ಸಭೆಗಳನ್ನು ಜರುಗಿಸಲಾಗುತ್ತಿದೆ.  ಬರ ಪರಿಸ್ಥಿತಿ ಮತ್ತು ಅಗತ್ಯದ ನಿರ್ವಹಣಾ ಕಾರ್ಯಗಳನು ಕೈಕೊಳ್ಳುವ ಕುರಿತು ನಿರಂತರ ನಿಗಾವಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ತಿಳಿಸಿದರು. 

     ಸಂಸದರಾದ ಶಿವಕುಮಾರ ಉದಾಸಿ, ರೋಣ ಶಾಸಾಕ ಕಳಕಪ್ಪ ಬಂಡಿ, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಂಜುನಾಥ ಚವ್ಹಾಣ, ಅಪರ ಜಿಲ್ಲಾಧಿಕಾರಿ  ಶಿವಾನಂದ ಕರಾಳೆ ಉಪವಿಭಾಗಾಧಿಕಾರಿ ಪಿ.ಎಸ. ಮಂಜುನಾಥ,  ಜಿಲ್ಲಾಧಿಕಾರಿಗಳ ನಗರಾಭಿವೃದ್ಧಿ ಕೋಶದ ಯೋಜನಾ ನಿದರ್ೇಶಕ ರುದ್ರೇಶ,  ಜಿ.ಪಂ. ಯೋಜನಾ ನಿದರ್ೇಶಕ  ಬಿ.ಆರ್.ಪಾಟೀಲ, ಜಂಟಿ ಕೃಷಿ ನಿದರ್ೇಶಕ ಬಾಲರೆಡ್ಡಿ,  ತೋಟಗಾರಿಕೆ  ಉಪನಿದರ್ೆಶಕ ಪ್ರದೀಪ, ರೋಣ ತಹಶೀಲ್ದಾರ ಅಜಿತ ಎಂ. ತಾ.ಪಂ.ಕಾರ್ಯನಿವರ್ಾಹಕ ಅಧಿಕಾರಿ ಕಂದಾಯ, ಕೃಷಿ  , ತೋಟಗಾರಿಕೆ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿದ್ದರು. 


ಸುದ್ದಿ ಓದಿ