ಮುಂದಗೋಡ

ಉಚಿತ ನೋಟ್ ಬುಕ್, ಸ್ಕೂಲ್ ಬ್ಯಾಗ್ ವಿತರಣೆ

ಉಚಿತ ನೋಟ್ ಬುಕ್, ಸ್ಕೂಲ್ ಬ್ಯಾಗ್ ವಿತರಣೆ

ಲೋಕದರ್ಶನ ವರದಿ

ಮುಂಡಗೋಡ: ತೇರಾಹೀ ಸಹಾರಾ ಎಜುಕೇಶನ್ ಫೌಂಡೇಶನ್ ಟ್ರಸ್ಟ್(ರಿ.) ವಿದ್ಯಾರ್ಥಿಗಳಿಗೆ ಸೋಮವಾರ ಉಚಿತ ನೋಟ್ ಬುಕ್ ಹಾಗೂ ಸ್ಕೂಲ್ ಬ್ಯಾಗ್ ವಿತರಣೆ ಮಾಡಲಾಯಿತು. 

ಕಾರ್ಯಕ್ರಮದಲ್ಲಿ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ ಭಾಗವಹಿಸಿದ್ದರು. ಸಚಿವರು, ಪಿ.ಟಿ.ಸ್ಯಾಮ್ಸನ್ ಮತ್ತು ಕಾರವಾರದ ದೀಪಕ ಅಳವೇಕರ ಅವರನ್ನು ಸನ್ಮಾನಿಸಲಾಯಿತು. ಟ್ರಸ್ಟ್ನ ಅಧ್ಯಕ್ಷೆ ಸಲ್ಮಾ ಶೇರಖಾನೆ ಅಧ್ಯಕ್ಷತೆ ವಹಿಸಿದ್ದರು. ಜಿ.ಪಂ. ಮಾಜಿ ಸದಸ್ಯರಾದ ಎಲ್.ಟಿ.ಪಾಟೀಲ, ರವಿಗೌಡ ಪಾಟೀಲ, ಪ.ಪಂ.ಉಪಾಧ್ಯಕ್ಷ ಶ್ರೀಕಾಂತ ಸಾನು, ಗುಡ್ಡಪ್ಪ ಕಾತೂರ, ಉಮೇಶ ಬಿಜಾಪುರ, ವಿಠ್ಠಲ ಬಾಳಂಬೀಡ, ನಾಗಭೂಷಣ ಹಾವಣಗಿ, ಸುಭಾಸ ವಡ್ಡರ, ಕಿರಣ ಶೇರಖಾನೆ, ತುಕಾರಾಮ ಇಂಗಳೆ ಮುಂತಾದವರು ಉಪಸ್ಥಿತರಿದ್ದರು. 

ಸುದ್ದಿ ಓದಿ