ಬಳ್ಳಾರಿ

ಉಚಿತ ಸಾಮೂಹಿಕ ವಿವಾಹ

ಉಚಿತ ಸಾಮೂಹಿಕ ವಿವಾಹ

ಲೋಕದರ್ಶನ ವರದಿ

ಬಳ್ಳಾರಿ 26: ಬಳ್ಳಾರಿ ನಗರದ ಬಾಲಾಜಿ ರಾವ್ ರಸ್ತೆ, ವಡ್ಡರ ಬಂಡ ಹತ್ತಿರ ಇರುವ ಲಕ್ಷ್ಮಿದೇವಿ ಎಸ್.ಲಿಂಗಣ್ಣ ಬಲಿಜ ಭವನದಲ್ಲಿ ಪ್ರಪ್ರಥಮ ಬಾರಿಗೆ ಬಳ್ಳಾರಿ ಬಲಿಜ ಸಮಾಜದ ವತಿಯಿಂದ ಉಚಿತ ಸಾಮೂಹಿಕ ವಿವಾಹಗಳನ್ನು ದಿ. 07-08-2022ರಂದು ಹಮ್ಮಿಕೊಳ್ಳುತ್ತಿದ್ದು ಇದಕ್ಕೆ ಪೂರ್ವಭಾವಿ ಸಭೆ ಮಾಡಲಾಗಿರುತ್ತದೆ. ಈ ಒಂದು ಉಚಿತ ಸಾಮೂಹಿಕ ಕಾರ್ಯಕ್ರಮಕ್ಕೆ ಬಲಿಜ ಸಮಾಜದ ಹಿರಿಯ ಮುಖಂಡ ಮಾಜಿ ಎಂ.ಎಲ್.ಸಿ ನಿರಂಜನ್ನಾಯ್ಡು, ಎಸ್.ಮುರಳಿಕ್ರಿಷ್ಣ, ಸಪ್ತಗಿರಿ ಸತ್ಯಣ್ಣ, ಮಾಜಿ. ಎ.ಪಿ.ಎಂ.ಸಿ ಸರಗು ನಾಗರಾಜ,  ರಮೇಶ್ ಬುಜ್ಜಿ, ಪಾಟೇಲ್ ನಗರ ರಾಜೇಶ್, ಎರ್ರಿಸ್ವಾಮಿ, ಅಶೋಕ್ ಇವರ   ಸಮ್ಮುಖದಲ್ಲಿ ಪ್ರಚಾರ ಸಮಿತಿ ಮುಖ್ಯಸ್ಥರನ್ನಾಗಿ ದೇವಿನಗರ ಶ್ರೀನಿವಾಸುಲು ಜಿ. ಇವರನ್ನು ನೇಮಕ ಮಾಡಲಾಗಿರುತ್ತದೆ. ಹಾಗೂ ದೇವಿನಗರ ಶ್ರೀನಿವಾಸಲು.ಜಿ ಇವರು ಮಾತನಾಡುತ್ತಾ ಆಸ್ತಕ ಬಲಿಜ ಸಮಾದವರು ಆಸಕ್ತ ಬಲಿಜ ಸಮಾಜದವರ ವಧು ವರರ ನೋಂದಣಿ ಪ್ರಾರಂಭವಾಗಿದೆ, ವಧುವಿಗೆ 18ವರ್ಷ ತುಂಬಿರಬೇಕು, ವರನಿಗೆ 21ವರ್ಷ ತುಂಬಿರಬೇಕು ಎಂದು ಹೇಳಿದರು,  ಈ ಒಂದು ಅವಕಾಶವನ್ನು ಬಲಿಜ ಬಂದುಗಳು ಉಪಯೋಗಿಸಿಕೊಳ್ಳಬೇಕಾಗಿ ತಿಳಿಸಿರುತ್ತಾರೆ. ಈ ಒಂದು ಕಾರ್ಯಕ್ರಮಕ್ಕೆ  ಎಲ್ಲಾ ಬಲಿಜ ಬಂದುಗಳು ಆಗಮಿಸಿರುತ್ತಾರೆಂದು ಪತ್ರಿಕೆ ಪ್ರಕಟಣೆ ತಿಳಿಸಿರುತ್ತಾರೆ 

ಸುದ್ದಿ ಓದಿ