ಸಾವಿತ್ರಿ ಬಾಯಿ ಫುಲೆ ರವರ 194ನೇ ಜನ್ಮ ದಿನಾಚರಣೆಯ ಪಾಕ್ಷಿಕ ಕಾರ್ಯಕ್ರಮ
ಸಾವಿತ್ರಿ ಬಾಯಿ ಫುಲೆ ರವರ 194ನೇ ಜನ್ಮ ದಿನಾಚರಣೆಯ ಪಾಕ್ಷಿಕ ಕಾರ್ಯಕ್ರಮ
ಬಳ್ಳಾರಿ 05 : ಅಖಿಲ ಭಾರತ ಶಿಕ್ಷಣ ಉಳಿಸುವ ಸಮಿತಿಯ ಜಿಲ್ಲಾ ಸಂಚಾಲಕರಾದ ಆರ್. ಸೋಮಶೇಖರ ಗೌಡ ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಾ " ಶಿಕ್ಷಣ ಪಡೆದ ಹೆಣ್ಣು ಮಕ್ಕಳಿಗೆ ವೈದವ್ಯ ಪ್ರಾಪ್ತಿಯಾಗುತ್ತದೆ ಎಂಬಂತಹ ವಿಚಾರ ಜೀವಂತವಾಗಿದ್ದ ಕಾಲವದು. ಅಂತಹ ಸಮಾಜದಲ್ಲಿ ಜ್ಯೋತಿ ಬಾ ಫುಲೆ ಅವರು ತಾವು ಇಂಗ್ಲಿಷ್ ಶಿಕ್ಷಣ ಪಡೆದು, ಅದರಿಂದ ಪ್ರಭಾವಿತರಾಗಿ ಪತ್ನಿ ಸಾವಿತ್ರಿ ಬಾಯಿ ಫುಲೆ ಯವರಿಗೂ ಕೂಡ ಶಿಕ್ಷಣವನ್ನು ಕಲಿಸಿದರು. ಇವರ ಮೂಲಕ ಇಡೀ ಸಮಾಜದ ಹೆಣ್ಣು ಮಕ್ಕಳಿಗೆ ಶಿಕ್ಷಣ ಸಿಗಬೇಕೆಂಬ ಕನಸು ಜ್ಯೋತಿಬಾ ಅವರದಾಗಿತ್ತು. ಸಾವಿತ್ರಿ ಬಾಯಿ ಯವರು ಕೂಡ ಜೀವನಪಯಂರ್ತ ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಹೋರಾಡಿದರು. ಜೊತೆಗೆ ಅಸ್ಪೃಶ್ಯತೆ ತಾಂಡವಾಡುತ್ತಿದ್ದ ಕಾಲವದು. ಮನುಷ್ಯರೆಲ್ಲರೂ ಹುಟ್ಟಿನಿಂದ ಸಮಾನರು ಎಂಬುದನ್ನು ಪ್ರತಿಪಾದಿಸಿದರು. ಸಾವಿತ್ರಿ ಬಾಯಿ ಫುಲೆಯವರ ಹೋರಾಟ ಇಂದಿನ ಮಹಿಳಾ ಸಮುದಾಯಕ್ಕೆ ಮಾದರಿಯಾಗಬೇಕು" ಎಂದು ಹೇಳಿದರು.
ನಂತರ ಂಋಖಖ ನ ಜಿಲ್ಲಾಧ್ಯಕ್ಷರಾದ ಕೆ.ಎಂ. ಈಶ್ವರಿ ಮಾತನಾಡುತ್ತಾ "ಸಾವಿತ್ರಿಬಾಯಿ ಫುಲೆ ಅವರ ಜೀವನ ಹೋರಾಟ, ವಿಚಾರಗಳನ್ನು ಮಹಿಳಾ ಸಮುದಾಯಕ್ಕೆ ತಿಳಿಸುವ ನಿಟ್ಟಿನಲ್ಲಿ ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆಯು ಎಲ್ಲಾ ಸ್ತರದ ಮಹಿಳೆಯರ ನಡುವೆ 3 ರಿಂದ 18ರ ವರೆಗೆ ವಿವಿಧ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಸಾವಿತ್ರಿಬಾಯಿ ಫುಲೆ ಅವರ ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಇಂದಿನ ಸಮಸ್ಯೆಗಳ ವಿರುದ್ಧ ನಾವೆಲ್ಲರೂ ಧ್ವನಿ ಎತ್ತಬೇಕು" ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಿನ್ಸಿಪಾಲರು, ಉಪನ್ಯಾಸಕರು ಹಾಗೂ ಕಾಲೇಜಿನ ವಿದ್ಯಾರ್ಥಿಗಳು ಜೊತೆಗೆ ಂಋಖಖ ನ ಪದಾಧಿಕಾರಿಯಾದ ವಿದ್ಯಾವತಿ ಉಪಸ್ಥಿತರಿದ್ದರು.