ಬಳ್ಳಾರಿ

ನಿಮಗಾಗಿ ನಾವು ಸಂಸ್ಥೆಯ ಗುರು ನಮನ ಕಾರ್ಯಕ್ರಮ

ನಿಮಗಾಗಿ ನಾವು ಸಂಸ್ಥೆಯ ಗುರು ನಮನ ಕಾರ್ಯಕ್ರಮ

ಬಳ್ಳಾರಿ 10: ಇತ್ತೀಚಿನ ಆಧುನಿಕ ಯುಗದಲ್ಲಿ ವಿದ್ಯೆ ಕಲಿಸಿದ ಗುರುಗಳನ್ನು ಮರೆಯುತ್ತಿರುವುದು ಸರ್ವೇ ಸಾಮಾನ್ಯವಾಗಿದ್ದು, ಇಂತಹ ಯುಗದಲ್ಲೂ ಸಹ ಗುರುನಮನ ತುಂಬಾ ಅರ್ಥಪೂರ್ಣವಾದ ಕಾರ್ಯಕ್ರಮದೊಂದಿಗೆ ವಿದ್ಯೆ ಕಲಿಸಿದ ಗುರುಗಳ ಕೆಲಸವನ್ನು ಗುರುತಿಸಿ ಸನ್ಮಾನಿಸಿದ್ದು ಹೆಮ್ಮೆಯ ಸಂಗತಿಯೆಂದು ನಿವೃತ್ತ ದೈಹಿಕ ಶಿಕ್ಷಕ ಕೆ.ಎಂ.ಸಿದ್ದಲಿಂಗಯ್ಯ ರವರು ತಿಳಿಸಿದರು. ಅವರು ಭಾನುವಾರ ಸಂಜೆ ನಿಮಗಾಗಿ ನಾವು ಸಂಸ್ಥೆ ಜಿಲ್ಲಾಧಿಕಾರಿಗಳ ಆವರಣದಲ್ಲಿರುವ ಸರ್ಕಾರಿ ನೌಕರರ ಸಭಾ ಭವದಲ್ಲಿ ಏರ್ಪಡಿಸಿದ್ದ ಗುರುನಮನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಿದ್ದರು. ಎಲೆ ಮರೆಕಾಯಂತೆ ಕೆಲಸ ಮಾತಾಗಬೇಕು ಎಂಬ ಆಶಯದೊಂದಿಗೆ ನಿರಂತರವಾಗಿ ಸಮಾಜಮುಖಿ ಕೆಲಸಗಳನ್ನು ಮಾಡುತ್ತಿರುವ ನಿಮಗಾಗಿ ನಾವು ಸಂಸ್ಥೆಗೆ ಅಭಿನಂದನೆ ತಿಳಿಸಿ ಸನ್ಮಾನೀತರನ್ನು ಸುಖಸುಮ್ಮನೆ ಮಾತಾಡಿ ಕಳುಹಿಸದೇ ಅವರೊಂದಿಗೆ ಸಂವಾದ ಏರ್ಪಡಿಸಿದ್ದು ಒಳ್ಳೆಯ ಯೋಚನೆ ಎಂದು ಕರ್ನಾಟಕ  ರಾಜ್ಯ ಸರ್ಕಾರಿ  ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ  ಜಿ.ಕೆ.ರಾಮಕೃಷ್ಣ ತಿಳಿಸಿದರು. ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಸಮಾಜ ಸೇವಕಿ ಅನಿತಾ ಜೈನ್, ಸರ್ಕಾರಿ ಪ್ರಾಥಮಿಕ ಶಾಲೆಯ ಮುಖ್ಯ ಗುರುಗಳಾದ ಕೆ.ಈರಮ್ಮ, ಉಪನ್ಯಾಸಕ ಕೆ.ಗಂಗಾಧರ ರವರುಗಳು ಉಪಸ್ಥಿತರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅನುಗ್ರಹ ಶಾಲೆಯ ಶಿಕ್ಷಕರಾದ ಆನಂದ್ ಯೋಗಿ ವಹಿಸಿದ್ದರು. ಕಾರ್ಯಕ್ರಮದಲ್ಲಿ ಜಿಲ್ಲಾ ತರಬೇತಿ ಸಂಸ್ಥೆಯ ಪ್ರಾಂಶುಪಾಲ ಕೆ.ಶ್ರೀಹರಿ ಮತ್ತು ಚಿತ್ರದುರ್ಗ ಪ್ರಾಥಮಿಕ ಶಾಲೆಯ ನಿವೃತ್ತ ಶಿಕ್ಷಕ ಎಂ.ಬಿ.ಮಂಜುನಾಥ ರವರನ್ನು ಸನ್ಮಾನಿಸಲಾಯಿತು. ನಂತರ ಹಿರಿಯ ಮತ್ತು ಕಿರಿಯ ಕಲಾವಿದರಿಂದ ಹಾಡು, ನೃತ್ಯ, ಕಿರುನಾಟಕಗಳು ನೋಡುಗರ ಮನರಂಜಿಸಿದವು. ಈ ಸಂದರ್ಭದಲ್ಲಿ ಸಂಸ್ಥೆಯ ನೂತನ ಯೋಜನೆಗಳಾದ ಓದಿನ ಬುತ್ತಿ ಮತ್ತು ಅರಿವೇ ಗುರು ಯೋಜನೆಗಳಿಗೆ ಚಾಲನೆ ನೀಡಲಾಯಿತು.

 

ಸುದ್ದಿ ಓದಿ