ಬೈಲಹೊಂಗಲ

ಗ್ರಾಮಗಳ ಸಂಪೂರ್ಣ ಅಭಿವೃದ್ಧಿಗೆ ಮೊದಲ ಆದ್ಯತೆ: ಶಾಸಕ ಕೌಜಲಗಿ

ಗ್ರಾಮಗಳ ಸಂಪೂರ್ಣ ಅಭಿವೃದ್ಧಿಗೆ ಮೊದಲ ಆದ್ಯತೆ: ಶಾಸಕ ಕೌಜಲಗಿ
ದೊಡವಾಡ ಗ್ರಾಮದ ಸರಕಾರಿ ಪ್ರಾಥಮಿಕ ಕೇಂದ್ರದ ನೂತನ ಕಟ್ಟಡ ನಿರ್ಮಾಣಕ್ಕೆ ಶಾಸಕ ಮಹಾಂತೇಶ ಕೌಜಲಗಿ ಭೂಮಿಪೂಜೆ ಶನಿವಾರ ನೆರ

ಬೈಲಹೊಂಗಲ :  ಮತಕ್ಷೇತ್ರದ ಎಲ್ಲ ಗ್ರಾಮಗಳಲ್ಲಿ ಉತ್ತಮ ದರ್ಜೆಯ ಸರಕಾರಿ ಆಸ್ಪತ್ರೆ ನಿರ್ಮಾಣ ಮಾಡಿ ಎಲ್ಲರಿಗೂ ಸುಲಭವಾಗಿ ಆರೋಗ್ಯ ಸೌಲಭ್ಯಗಳನ್ನು ದೊರಕಿಸುವುದು, ಶುದ್ಧ ಕುಡಿಯುವ ನೀರು ಪೂರೈಕೆ , ಉತ್ತಮ ರಸ್ತೆಗಳ ನಿರ್ಮಾಣ, ಆಧುನಿಕ ಸೌಲಭ್ಯ ಹೊಂದಿದ ಶಾಲಾ ಕಾಲೇಜುಗಳನ್ನು ಸ್ಥಾಪಿಸಿ ಮಕ್ಕಳಿಗೆ ಅತ್ಯುತ್ತಮ ಶೈಕ್ಷಣಿಕ ವಾತಾವರಣ ಕಲ್ಪಿಸಿ ಗ್ರಾಮಗಳ ಸಂಪೂರ್ಣ ಅಭಿವೃದ್ಧಿಗೆ ಮೊದಲ ಆದ್ಯತೆ ನೀಡಲಾಗುವುದು ಎಂದು ಶಾಸಕ ಮಹಾಂತೇಶ ಕೌಜಲಗಿ ಹೇಳಿದರು. 

     ದೊಡವಾಡ ಗ್ರಾಮದಲ್ಲಿ  ಶಾಸಕರ ಅನುದಾನದಲ್ಲಿ ಆರಂಭಿಸಲಾಗುತ್ತಿರುವ ವಿವಿಧ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸದ ಬಳಿಕ ಸ್ಥಳೀಯ ಗ್ರಾಮದೇವತೆ ದೇವಸ್ಥಾನದಲ್ಲಿ ಶನಿವಾರ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು. 

   ಗ್ರಾಮದ ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಹೊಸ ಕಟ್ಟಡ ನಿರ್ಮಾಣಕ್ಕೆ 2 ಕೋಟಿ. ರೂ. 50 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ ಪಶು ಚಿಕಿತ್ಸಾಲಯದ ನೂತನ ಕಟ್ಟಡ ಉದ್ಘಾಟನೆ, ಸ್ಥಳೀಯ ಹನುಮಂತ ದೇವರ ದೇವಸ್ಥಾನ ಹೊಸ ಕಟ್ಟಡಕ್ಕೆ 10 ಲಕ್ಷ ರೂ. ಕೊಪ್ಪದ ಅಗಸಿಯ ವಿಠ್ಠಲ ಮಂದಿರ ನಿರ್ಮಾಣಕ್ಕೆ 5 ಲಕ್ಷ ರೂ. ಗ್ರಾಮದ ರೈತರ ಬಹಳ ದಿನಗಳ ಬೇಡಿಕೆಯಾಗಿದ್ದ ಹುಣಸಿಮರದ ಹೊಲದ ರಸ್ತೆ ನಿರ್ಮಾಣಕ್ಕೆ 40 ಲಕ್ಷ ರೂ. ಮಂಜೂರಾಗಿದ್ದು ಗ್ರಾಮದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳಿಗೆ ಭೂಮಿ ಪೂಜೆ ನೆರವೇರಿಸಿ ಕಾಮಗಾರಿಗೆ ಚಾಲನೆ ನೀಡುತ್ತಿರುವುದು ಸಂತಸ ಮೂಡಿಸಿದೆ ಎಂದು ಹೇಳಿದರು.

     ಸ್ಥಳೀಯ ಹಿರೇಮಠದ ಜಡಿಸಿದ್ದೇಶ್ವರ ಶಿವಾಚಾರ್ಯ ಸ್ವಾಮಿಜಿ ಸಾನಿಧ್ಯ ವಹಿಸಿದ್ದರು. 

    ಮುಖಂಡ ಅಶೋಕ ಪರಂಡಿ ಪ್ರಸ್ತಾವಿಕವಾಗಿ ಮಾತನಾಡಿದರು. ಇದೇ ವೇಳೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮಲ್ಲಪ್ಪ ಯರಿಕಿತ್ತೂರ, ದಾನಿಗಳಾದ ಮಹಾದೇವಪ್ಪ ಶೆಟ್ಟರ ದಂಪತಿ, ಬೈಲಹೊಂಗಲ ಕಿತ್ತೂರು ರಾಣಿ ಚನ್ನಮ್ಮ ಬ್ಯಾಂಕ್ ಸಿಇಓ ಈರಪ್ಪ ನಾನನ್ನವರ ಹಾಗೂ ಶಾಸಕ ಮಹಾಂತೇಶ ಕೌಜಲಗಿಯವರನ್ನು ಗ್ರಾಮಸ್ಥರ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. 

   ಕಾಂಗ್ರೇಸ್ ಮುಖಂಡರಾದ ಬಾಳೇಶ ಅಲಸಂಧಿ, ಬಸವರಾಜ ಅಂದಾನಶೆಟ್ಟಿ, ಶ್ರೀಶೈಲ ವಾಳಿ,ಈರಪ್ಪ ಹತ್ತಿಕಟಗಿ, ಪುಂಡಲೀಕ ಹೆಬ್ಬಳ್ಳಿ, ಸಂಕಪ್ಪ ಕೊರಕೊಪ್ಪ, ವಿಠ್ಠಲ ಕಾಳಿ, ಶಂಕ್ರಪ್ಪ ಕಲ್ಲೂರ, ಮುದಕಪ್ಪ ತುಪ್ಪದ, ದ್ಯಾನೇಶ್ವರ ಕಾಳಿ, ಮಂಜುನಾಥ ವಾಳಿ, ಈಶ್ವರ ತುಪ್ಪದ, ಹನಮಂತ ಕಡಸಗಟ್ಟಿ, ಶಿವಶಂಕರ ಅರಳಿಮರದ ಸೇರಿದಂತೆ ಕಾಂಗ್ರೇಸ್ ಪಕ್ಷದ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು. ಲಕ್ಷ್ಮಣ ಹಜೇರಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

  


ಸುದ್ದಿ ಓದಿ