ಸಿನೆಮೋತ್ಸವ; ಆರು ಸಾವಿರ ಪಾಸುಗಳ ವಿತರಣೆ
ಬೆಂಗಳೂರು04: 13ನೇ ಬೆಂಗಳೂರು ಅಂತರರಾಷ್ಟ್ರೀಯ ಚಕನಚಿತ್ರೋತ್ಸವ ವೀಕ್ಷಣೆಗೆ ಆರು ಸಾವಿರ ಪಾಸುಗಳನ್ನು ವಿತರಣೆ ಮಾಡಲಾಗಿದೆ ಎಂದು ಚಿತ್ರೋತ್ಸವದ ಸಹ ಸಂಯೋಜಕ ಶೇಷಾದ್ರಿ ತಿಳಿಸಿದರು.ಅವರಿಂದು ಚಿತ್ರೋತ್ಸವ ನಡೆಯುತ್ತಿರುವ ಒರಾಯನ್ ಮಾಲ್ ನಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿ, ಮಾರ್ಚ್ 03ರ ತನಕ ಆನ್ ಲೈನ್ ವೀಕ್ಷಣೆಗೆ 780 ಮಂದಿ ನೋಂದಾಯಿಸಿಕೊಂಡಿದ್ದಾರೆ. ಈಗ ಆ ಸಂಖ್ಯೆ 1000 ಸಾವಿರ ದಾಟಿರಬಹುದು. ಆನ್ ಲೈನ್ ನಲ್ಲಿ ಪ್ರತಿದಿನ ಐದು ಸಿನೆಮಾಗಳನ್ನು ತೋರಿಸಲಾಗುತ್ತದೆ. ಗುರುವಾರ ರಾತ್ರಿಯಿಂದಲೇ ಸಿನೆಮಾ ವೀಕ್ಷಣೆ ಆರಂಭವಾಗಿದೆ. ಅಲ್ಲಿ ಒಂದು ಸಿನೆಮಾವನ್ನು 500 ಮಂದಿ ವೀಕ್ಷಿಸಬಹುದು. ನಂತರ ಅದು ಹೌಸ್ ಪುಲ್ ಎಂದು ತೋರಿಸುತ್ತದೆ.ಆಗ ಬೇರೆ ಸಿನೆಮಾ ವೀಕ್ಚಿಸಬಹುದು. ವೀಕ್ಷಣೆಗೂ ಮುಂಚೆ ನೋಂದಣಿ ಕಡ್ಡಾಯ. ಆನ್ ಲೈನ್ ನಲ್ಲಿ ತೋರಿಸುವ ಸಿನೆಮಾಗಳನ್ನು ಪೈರೆಸಿ ಮಾಡಲು ಆಗುವುದಿಲ್ಲ. ಅಂಥ ತಂತ್ರಜ್ಞಾನ ಬಳಸಲಾಗಿದೆ. ಆಕಸ್ಮಾತ್ ಯಾರಾದರೂ ಹೀಗೆ ಮಾಡಲು ಪ್ರಯತ್ನಿಸಿದರೆ ತಿಳಿಯುತ್ತದೆ ಎಂದರು.ಚಿತ್ರೋತ್ಸವದ ಕಲಾತ್ಮಕ ನಿರ್ದೇಶಕ ನರಹರಿ ರಾವ್ ಮಾತನಾಡಿ ಸಿನೆಮೋತ್ಸವ ಮಾಡಲು ಹೆಚ್ಚಿನ ಕಾಲಾವಧಿ ದೊರೆತರೆ ಅಂತರಾಷ್ಟ್ರೀಯ ಸಿನೆಮಾಗಳನ್ನು ಕಡಿಮೆ ಬೆಲೆಗೆ ಖರೀದಿಸಬಹುದು. ಇದಕ್ಕಾಗಿಯೇ ಮುಖ್ಯಮಂತ್ರಿ ಅವರಿಗೆ ಮನವಿ ಮಾಡಲಾಗಿದೆ ಎಂದರು.ಚಲನಚಿತ್ತ ಅಕಾಡೆಮಿ ಅಧ್ಯಕ್ಷ ಸುನೀಲ್ ಪುರಾಣಿಕ್ ಮಾತನಾಡಿ, ನಗರದ ಜಿಕೆವಿಕೆಯ ಡಾ.ರಾಜೇಂದ್ರ ಪ್ರಸಾದ್ ಸಭಾಂಗಣದಲ್ಲಿ ನಡೆದ ಚಿತ್ರೋತ್ಸವ ಉದ್ಘಾಟನೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮುಖ್ಯಮಂತ್ರಿ ಬಸವರಾಜ ಎಸ್ ಬೊಮ್ಮಾಯಿ ಅವರು ಪ್ರತಿವರ್ಷ ಮಾರ್ಚ್ ೦3ರಂದು ಬೆಂಗಳೂರು ಅಂತರಾಷ್ಟ್ರೀಯ ಸಿನೆಮೋತ್ಸವ ಆರಂಭಕ್ಕೆ ದಿನ ನಿಗದಿಗೊಳಿಸಿರುವುದು, ಪುಟ್ಟಣ್ಣ ಕಣಗಾಲ್ ಹುಟ್ಟೂರು ಕಣಗಾಲ್ನಲ್ಲಿರುವ ನಿವಾಸವನ್ನು ಸ್ಮಾರಕ ಮಾಡಲು ಒಪ್ಪಿರುವುದು, ಅಕಾಡೆಮಿಯ ಕಿರು ಚಿತ್ರಮಂದಿರವನ್ನು ಸುಸಜ್ಜಿತಗೊಳಿಸಲು ಕ್ತಮ ತೆಗೆದುಕೊಳ್ಳುವುದಾಗಿ ಹೇಳಿರುವುದು ಸಂತಸದ ವಿಚಾರ ಎಂದರು.