ರೈತ ಬಾಂಧವರು ಮಳೆ ಮಣ್ಣಿನ ತೇವಾಂಶ ಅರಿತು ಬಿತ್ತನೆ ಮಾಡಿ: ಗುಡಗುಂಟಿ
ಲೋಕದರ್ಶನ ವರದಿ,
ಜಮಖಂಡಿ02: ರೈತ ಬಾಂಧವರು ಮಳೆ ಮತ್ತು ಮಣ್ಣಿನ ತೇವಾಂಶ ಅರಿತುಕೊಂಡು ಬಿತ್ತನೆ ಮಾಡಿ, ಉತ್ತಮ ಬೆಳೆ ಇಳುವರಿಯೊಂದಿಗೆ ಹೆಚ್ಚಿನ ಆದಾಯ ಪಡೆದುಕೊಳ್ಳಬೇಕೆಂದು ಶಾಸಕ ಜಗದೀಶ ಗುಡಗುಂಟಿ ಹೇಳಿದರು.
ನಗರದ ಸಹಾಯಕ ಕೃಷಿ ನಿರ್ದೇಶಕ ಕಛೇರಿ ಆವರಣದಲ್ಲಿ 2023-24ನೇ ಸಾಲಿನ ಮುಂಗಾರು ಹಂಗಾಮಿನ ಬಿತ್ತನೆ ಬೀಜ ವಿತರಣೆಗೆ ಸಾಂಕೇತಿಕ ಚಾಲನೆ ನೀಡಿ ಮಾತನಾಡಿದರು.
ರೈತರು ಕೇವಲ ಒಂದೇ ಬೆಳೆ ಬೆಳೆಯದೇ ಹಂಗಾಮುವಾರು ವಿವಿಧ ಬೆಳೆಗಳನ್ನು ಬೆಳೆಯಬೇಕು. ಮಣ್ಣು ಆರೋಗ್ಯ ಚೀಟಿಯ ಶಿಫಾರಸ್ಸಿನಂತೆ ಪೋಷಕಾಂಶಗಳ ಬಳಕೆ ಮಾಡಿ ಮಣ್ಣಿನ ಆರೋಗ್ಯ ಕಾಪಾಡಿಕೊಳ್ಳಬೇಕು. ನಂತರ ರೈತ ಸಂಪರ್ಕ ಕೇಂದ್ರದಲ್ಲಿ ಪ್ರಸ್ತುತ ಹಂಗಾಮಿನಲ್ಲಿ ಅವಶ್ಯಕವಿರುವ ಬೀಜದಾಸ್ತಾನು, ಬೀಜ ವಿತರಣೆ, ಕ್ಯೂಆರ್ ಕೋಡ್ ಯಂತ್ರದ ಮಾಹಿತಿ ಪಡೆದುಕೊಂಡರು.
ತಾಲೂಕಿನ ಸಹಾಯಕ ಕೃಷಿ ನಿದರ್ೇಶಕ ಸಿದ್ದಪ್ಪ ಪಟ್ಟಿಹಾಳ ಮಾತನಾಡಿ, ಪ್ರಸ್ತುತ ತಾಲೂಕಿನ ಜಮಖಂಡಿ ಮತ್ತು ಸಾವಳಗಿ ಹೊಬಳಿಯಲ್ಲಿ ಬಿತ್ತನೆ ಬೀಜಗಳ ಸಮರ್ಪಕ ದಾಸ್ತಾನು ಮಾಡಲಾಗಿದೆ. ಸೋಯಾ, ಅವರೆ, ಉದ್ದು, ಹೆಸರು ಬೀಜಗಳ ದಾಸ್ತಾನು ಮಾಡಲಾಗಿದೆ ಎಂದರು.
ಕೃಷಿ ಅಧಿಕಾರಿ ಎಂ.ಎಸ್ಬುಜರುಖ ಮಣ್ಣು ಮಾದರಿ ಸಂಗ್ರಹಣೆ, ವಿವಿಧ ಮಾದರಿಗಳ ವಿಶ್ಲೇಷಣೆ ಹಾಗೂ ಮಣ್ಣು ಆರೋಗ್ಯ ಚೀಟಿ ಕುರಿತು ಮಾಹಿತಿ ನೀಡಿದರು.
ಉಪಕೃಷಿ ನಿರ್ದೇಶಕ ಕೆ.ಎಸ್.ಅಗಸನಾಳ ಮಾತನಾಡಿದರು. ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿಗಳಾದ ಶಂಕರರಾವ ಪವಾರ, ಆರ್,ಎನ್, ತುಳಸಿಗೇರಿ, ಆತ್ಮಯೋಜನೆ ವವ್ಯವಸ್ಥಾಪಕ ಕೆ,ಎ,ಜಮಖಂಡಿ, ಪ್ರಗತಿಪರ ರೈತ ನಾಗಪ್ಪ ಸನದಿ ಅನೇಕರು ಇದ್ದರು.