ರೈತರ ಹೋರಾಟ ಅಖಿಲ ಭಾರತ ರೈತರ ಐಕ್ಯತಾ ದಿನ ಆಚರಣೆ
ಲೋಕದರ್ಶನವರದಿ
ಬಳ್ಳಾರಿ 03: ಕೇಂದ್ರ ಸರಕಾರದ ಅಗತ್ಯ ವಸ್ತುಗಳ ತಿದ್ದುಪಡಿ ಕಾಯ್ದೆ, ಕೃಷಿ ಉತ್ಪನ್ನಗಳ ವ್ಯಾಪಾರ ವಾಣಿಜ್ಯ ಕಾಯ್ದೆ (ಎ.ಪಿ.ಎಂ.ಸಿ ಅನೂಜರ್ಿತಗೊಳಿಸುವ ಕಾಯ್ದೆ) ಮತ್ತು ಕೃಷಿ ಉತ್ಪನ್ನಗಳ ಬೆಲೆ ಮತ್ತು ಕೃಷಿ ಸೇವೆಗಳ ರೈತರ ಒಪ್ಪಂದ ಕಾಯ್ದೆ (ಗುತ್ತಿಗೆ ಕೃಷಿ ಒಪ್ಪಂದ ಕಾಯ್ದೆ) ಎಂಬ ಮೂರು ಕೃಷಿ ಸಂಬಂಧಿ ಕಾಯ್ದೆಗಳನ್ನು ಜಾರಿಗೆ ತಂದಿರುವುದನ್ನು ವಿರೋಧಿಸಿ ಈ ರೈತ ವಿರೋಧಿ ಕಾಯ್ದೆಗಳನ್ನು ಹಿಂತೆದುಕೊಳ್ಳುವಂತೆ ಒತ್ತಾಯಿಸಿ ರಾಷ್ಟ್ರ ರಾಜಧಾನಿ ದೆಹಲಿಯಲಲಿ ನಡೆಯುತ್ತಿರುವ ರೈತರ ಹೋರಾಟ ಬೆಂಬಲಿಸಿ ರೈತ ಕೃಷಿ ಕಾಮರ್ಿಕ ಸಂಘಟನೆ (ಆರ್ಕೆಎಸ್) ಸಂಘಟನೆಯಿಂದ ಗುರುವಾರ ಅಖಿಲ ಭಾರತ ರೈತರ ಐಕ್ಯತಾ ದಿನದ ಅಂಗವಾಗಿ ರಾಯಲ್ ವೃತ್ತದಲ್ಲಿ ಪ್ರತಿಭಟನೆ ಪ್ರತಿಭಟನೆ ನಡೆಸಿ ಕೇಂದ್ರ ಸಕರ್ಾರದ ಪ್ರತಿಕೃತಿಯನ್ನು ದಹಿಸಿ ಆಕ್ರೋಶ ವ್ಯಕ್ತಪಡಿಸಲಾಯಿತು.
ಎಸ್.ಯು.ಸಿ.ಐ (ಸಿ) ರಾಜ್ಯ ಸಮಿತಿ ಸದಸ್ಯರಾದ ಕಾ.ಸೋಮಶೇಖರ್.ಕೆ ಮತನಾಡಿ, ದೇಶದ ಕಾಪರ್ೊರೇಟ್ ಮನೆತನಗಳ ಮಹದಾಶೆಯಂತೆ ಕೇಂದ್ರದ ಬಿಜೆಪಿ ಸರಕಾರವು ರೈತರಿಗೆ ಈ ಮರಣ ಶಾಸನ ಬರೆದಿದೆ. ಲಾಕಡೌನ್ ಸಮಯ ದುರುಪಯೊಗ ಪಡಿಸಿಕೊಂಡಿರುವ ಸರಕಾರವು ರೈತರಿಗೆ, ದೇಶದ ದುಡಿಯುವ ಜನತೆಗೆ ಮಹಾ ದ್ರೋಹವನ್ನು ಎಸಗಿದೆ. ಇಲ್ಲಿಯವರೆಗೂ ಸಹಿಸಿಕೊಂಡಿದ್ದ ರೈತರ ಸಹನೆಯ ಕಟ್ಟೆ ಇಂದು ಒಡೆದು ಜ್ವಾಲಾಮುಖಿಯಂತೆ ಎಲ್ಲಡೆಯೂ ಸ್ಪೋಟಿಸುತ್ತಿದೆ. ``ಒಂದು ದೇಶ, ಒಂದು ಮಾರುಕಟ್ಟೆ ಎಂದು ಹೇಳುತ್ತಾ ಇದೆಲ್ಲವು ರೈತರ ಹಿತಕ್ಕಾಗಿಯೇ ಎಂದು ಬೊಬ್ಬೆ ಇಡುತ್ತಿರುವ ಸರಕಾರದ ದುರುದ್ದೇಶವು, ನಯವಂಚಕತನವು ಬಯಲಾಗುತ್ತಿದೆ ಎಂದರು.
ಆರ್.ಕೆ.ಎಸ್ ಜೀಲಾಧ್ಯಕ್ಷರಾದ ಕಾ.ಹನುಮಂತಪ್ಪ ಅವರು ಮಾತನಾಡಿ, ರೈತರ ಹೋರಾಟವು ಕಡಿದಷ್ಟು ಕಟ್ಟಿಕೊಳ್ಳುತ್ತಾ, ಒಡೆದಷ್ಟು ಪುಟಿಯುತ್ತಾ ಅತಿಯಾದ ಚಳಿಯಲ್ಲೂ ಬಿಸಿಯಾಗುತ್ತಾ ಸರಕಾರದ ಎಲ್ಲಾ ಪ್ರಯತ್ನಗಳನ್ನು ಸೋಲಿಸಿ ಮುನ್ನಡೆಯುತ್ತಿದೆ. ಹೀಗೆ ಕೇಂದ್ರ ಸರಕಾರವು ಮಾನವಿಯತೆಯನ್ನೇ ಕಳೆದುಕೊಂಡು ದೇಶದ ಜನತೆಗೆ ಎದುರಾಗಿ ನಿಂತಿದೆ. ಕೊನೆಗೆ ಸೋತ ಸರಕಾರವು ರೈತರು ದೆಹಲಿಗೆ ಬರಬಹುದೆಂದು ತಲೆಬಾಗಿದೆ ಎಂದರು.
ಎಸ್.ಯು.ಸಿ.ಐ (ಸಿ) ಜಿಲ್ಲಾ ಸಮಿತಿ ಸದಸ್ಯರಾದ ಕಾ.ಡಾ||ಪ್ರಮೋದ್ ಮಾತನಾಡಿ ಹೋರಾಟ ನಿರತ ರೈತರೊಂದಿಗೆ ನಾವು ಬೆಸೆಯೊಣ, ಆಳ್ವಿಕರನ್ನು ನಡುಗಿಸುತ್ತಿರುವ ಈ ಐತಿಹಾಸಿಕ ರೈತರ ಹೋರಾಟವನ್ನು ಬಲಪಡಿಸೋಣವೆಂದು ಎಂದು ಮನವಿ ಮಾಡಿದರು.ಈ ಸಭೆಯ ಅಧ್ಯಕ್ಷತೆ ಆರ,ಕೆ.ಎಸ್ ಮುಖಂಡರಾದ ಗೋವಿಂದ್ ವಹಿಸಿದ್ದರು. ವಿದ್ಯಾಥರ್ಿ, ಯುವಜನ, ಮಹಿಳಾ ಸಂಘಟನೆಗಳ ಮುಖಂಡರು ಈ ಹೋರಾಟಕ್ಕೆ ಬೆಂಬಲಿಸಿ ಪಾಲ್ಗೊಂಡಿದ್ದರು.