ಬಳ್ಳಾರಿ

ದೆಹಲಿಯಲ್ಲಿನ ರೈತರ ಹೋರಾಟ ಬೆಂಬಲಿಸಿ ಪ್ರತಿಭಟನೆ

ದೆಹಲಿಯಲ್ಲಿನ ರೈತರ ಹೋರಾಟ ಬೆಂಬಲಿಸಿ ಪ್ರತಿಭಟನೆ

ಲೋಕದರ್ಶನವರದಿ

ಬಳ್ಳಾರಿ02: 'ಹೋರಾಟನಿರತ ರೈತರೇ, ನಿಮ್ಮೊಂದಿಗೆ ನಾವಿದ್ದೇವೆ' ಎಂಬ ಘೋಷಣೆಯೊಂದಿಗೆ ಕೇಂದ್ರ ಸಕರ್ಾರದ ರೈತ ವಿರೋಧಿ ಕಾಯ್ದೆಗಳ ವಿರುದ್ಧ ದೆಹಲಿಯಲ್ಲಿ ಹೋರಾಟದಲ್ಲಿ ತೊಡಗಿರುವ ರೈತರಿಗೆ ಬೆಂಬಲ ಸೂಚಿಸಿ ಆಲ್ ಇಂಡಿಯಾ ಮಹಿಳಾ ಸಾಂಸ್ಕೃತಿಕ ಸಂಘಟನೆ (ಎ.ಐ.ಎಂ.ಎಸ್.ಎಸ್) ಇಂದು ಬಳ್ಳಾರಿ ನಗರದ ಜಿಲ್ಲಾಧಿಕಾರಿ ಕಚೇರಿಯ ಬಳಿ ಪ್ರತಿಭಟನೆ ಹಮ್ಮಿಕೊಂಡಿತ್ತು. ಪ್ರತಿಭಟನೆಯನ್ನು ಉದ್ದೇಶಿಸಿ ಎ.ಐ.ಎಂ.ಎಸ್.ಎಸ್ ರಾಜ್ಯ ಉಪಾಧ್ಯಕ್ಷರಾದ ಎಂ. ಎನ್. ಮಂಜುಳಾ ಮಾತನಾಡುತ್ತ ದೇಶದ ಹಲವು ರಾಜ್ಯಗಳ ಲಕ್ಷಾಂತರ ರೈತರು ರಾಜಧಾನಿ ದೆಹಲಿಯಲ್ಲಿ ಕೇಂದ್ರ ಸಕರ್ಾರದ ರೈತ ವಿರೋಧಿ ಕಾಯ್ದೆಗಳ ವಿರುದ್ಧ ಹೋರಾಟದಲ್ಲಿ ನಿರತರಾಗಿದ್ದಾರೆ. ಪ್ರಜಾತಾಂತ್ರಿಕ ವಿರೋಧಿಯಾಗಿ ಸುಗ್ರಿವಾಜ್ಞೆಗಳ ಮೂಲಕ ಜಾರಿಯಾಗಿರುವ ಎ.ಪಿ.ಎಂ.ಸಿ ತಿದ್ದುಪಡಿ ಕಾಯ್ದೆ, ಅಗತ್ಯ ವಸ್ತುಗಳ ತಿದ್ದುಪಡಿ ಕಾಯ್ದೆ ಮತ್ತು ಭೂ ಸುಧಾರಣಾ ತಿದ್ದುಪಡಿ ಕಾಯ್ದೆಗಳು ಒಂದೆಡೆ ಲಾಭದಾಹಿ ಕಾಪರ್ೊರೇಟ್ ಮನೆತನಗಳಿಗೆ ಮುಕ್ತ ಅವಕಾಶ ನೀಡುತ್ತವೆ, ಇನ್ನೊಂದೆಡೆ ರೈತರಿಗೆ ಮರಣಶಾಸನವಾಗಿವೆ. ಈ ಕಾಯ್ದೆಗಳು ಕೇವಲ ರೈತ ವಿರೋಧಿ ಅಷ್ಟೇ ಅಲ್ಲ, ಇಡಿ ಜನ ಸಮುದಾಯವನ್ನೆ ಸಂಕಷ್ಟಕ್ಕೆ ನೂಕುವ ಕರಾಳ ಕಾಯ್ದೆಗಳಾಗಿವೆ. ಎಂದು ಟೀಕಿಸಿದರು ಎ.ಐ.ಎಂ.ಎಸ್.ಎಸ್ ಜಿಲ್ಲಾ ಅಧ್ಯಕ್ಷರಾದ. ಶಾಂತಾರವರು ಮಾತನಾಡಿ ಕೊರೆಯುವ ಚಳಿಯಲ್ಲಿ ಸಾವಿರಾರು ಧೀರೊದಾತ್ತ ರೈತ ಮಹಿಳೆಯರು ದಿಟ್ಟತನದಲ್ಲಿ ಹೋರಾಟದಲ್ಲಿ ತೊಡಗಿರುವುದು ನಿಜಕ್ಕೂ ಸ್ಫೂತರ್ಿದಾಯಕವಾಗಿದೆ. ಈ ಐತಿಹಾಸಿಕ ಹೋರಾಟದಲ್ಲಿ ಎ.ಐ.ಎಂ.ಎಸ್.ಎಸ್ ಸಕ್ರಿಯವಾಗಿ ಜೊತೆಗಿರುತ್ತದೆ ಎಂದು ನುಡಿದರು.ಪ್ರತಿಭಟನೆಯನ್ನು ಉದ್ದೇಶಿಸಿ ಕುಲ್ಸುಮ್ ಅವರು ಮಾತನಾಡಿ ರೈತ ವಿರೋಧಿ ಸಕರ್ಾರದ ವಿರುದ್ಧ ಆಕ್ರೋಶವನ್ನು ವ್ಯಕ್ತಪಡಿಸಿದರು.

  ಎ.ಐ.ಎಂ.ಎಸ್.ಎಸ್ ಜಿಲ್ಲಾ ಸಮಿತಿಯ ಸದಸ್ಯರಾದ ವಿದ್ಯಾವತಿ ಪ್ರತಿಭಟನೆಯ ಅಧ್ಯಕ್ಷತೆಯನ್ನು ವಹಿಸಿದ್ದರು. ಈ ಸಂದರ್ಭದಲ್ಲಿ ಎ.ಐ.ಎಂ.ಎಸ್.ಎಸ್ ನ ಜಿಲ್ಲಾ ಉಪಾಧ್ಯಕ್ಷರಾದ ಅಹಲ್ಯಾ ಹಾಗೂ ಪದ್ಮಾ, ಜಿಲ್ಲಾ ಸಮಿತಿಯ ಸದಸ್ಯರಾದ ರೇಖಾ, ಗುಂಡಮ್ಮ, ಮಲ್ಲಮ್ಮ, ಶೋಭಾ ಹಾಗೂ ಮೊದಲಾದವರು ಭಾಗವಹಿಸಿದ್ದರು. 

 

ಸುದ್ದಿ ಓದಿ