ವಿಜಯಪುರ

ವಿದ್ಯಾರ್ಥಿಗಳ ಬೀಳ್ಕೋಡುವ ಸಮಾರಂಭ ; ಮುಖ್ಯಅತಿಥಿಗಳಾಗಿ ಆರ್‌ಎಸ್ ಪಟ್ಟಣಶೆಟ್ಟಿ

ವಿದ್ಯಾರ್ಥಿಗಳ ಬೀಳ್ಕೋಡುವ ಸಮಾರಂಭ ; ಮುಖ್ಯಅತಿಥಿಗಳಾಗಿ ಆರ್‌ಎಸ್ ಪಟ್ಟಣಶೆಟ್ಟಿ

ವಿಜಯಪುರ 28 : ಮಾತೋಶ್ರೀ ಶಂಕ್ರೆಮ್ಮಾ ತಾಯಿ ಪ್ರಾಥಮಿಕ ಶಾಲೆ ಕತಕನಹಳ್ಳಿ ತಾ:ಜಿ ವಿಜಯಪುರ ಈ ಶಾಲೆಯಲ್ಲಿ 7 ನೇ ವರ್ಗದ ವಿದ್ಯಾರ್ಥಿಗಳ ಬೀಳ್ಕೋಡುವ ಸಮಾರಂಭ ವಿಜೃಂಭಣೆಯಿಂದ ಜರುಗಿತು. ಈ ಕಾರ್ಯಕ್ರಮದಲ್ಲಿ ಕತಕನಹಳ್ಳಿಯ ಮುಖ್ಯಗ್ರಾಮಸ್ಥರಾದ ಶ್ರೀಯುತ ಅಪ್ಪಾಸಾಹೇಬ ಕೊಟ್ಯಾಳ ಇವರು ಅದ್ಯಕ್ಷತೆಯನ್ನು ವಹಿಸಿದ್ದರು. ವಿಶೇಷವಾಗಿ ಮುಖ್ಯಅತಿಥಿಗಳಾಗಿ ಬಿಎಲ್‌ಡಿಇ ಸಂಸ್ಥೆಯ ಶಿಕ್ಷಕರು, ಉತ್ತಮ ವಾಗ್ಮೀಗಳು, ಸಾಹಿತಿಗಳಾದ ಆರ್‌ಎಸ್ ಪಟ್ಟಣಶೆಟ್ಟಿ ಇವರು ಆಗಮಿಸಿ ಮಕ್ಕಳನ್ನುದ್ದೇಶಿಸಿ ಇಂದಿನ ಮಕ್ಕಳು ಉತ್ತಮ ನಾಗರಿಕರಾಗಿ ಬೆಳೆಯಬೇಕಾದರೆ ನಾವು ನಮ್ಮ ಜೀವನದಲ್ಲಿ ಮಹಾನ್ ಆದರ್ಶ ವ್ಯಕ್ತಿಗಳ ವಿಚಾರಗಳನ್ನು ಅಳವಡಿಸಿಕೊಳ್ಳಬೇಕು.

ಸಿದ್ದೇಶ್ವರ ಅಪ್ಪಾಜಿಯವರ ಜೀವನ ಶೈಲಿಯ ಕುರಿತು ಮಕ್ಕಳಿಗೆ ಹೇಳುವುದರ ಜೊತೆಗೆ ಬ್ರಿಟಿಷರ ಕಾಲದಲ್ಲಿ ನಮ್ಮ ಭಾರತದ ಮಹಾನ್ ವ್ಯಕ್ತಿಗಳಾದ ಭಗತಸಿಂಗ, ರಾಜಗುರು, ಸುಖದೇವ ಇವರು ಬ್ರಿಟಿಷರ ಜೊತೆ ಹೋರಾಡಿ ತಮ್ಮ ಜೀವನದ ಅಂತಿಮಕ್ಷಣದಲ್ಲಿ ಬ್ರಿಟಿಷ ಜೈಲಾಧಿಕಾರಿಗಳು ಗಲ್ಲಿಗೇರಿಸುವಾಗ ಅವರು ತಮ್ಮ ಪ್ರಾಣ ಬಿಡುವ ಸಂದರ್ಭದಲ್ಲಿ ತಮ್ಮ ದೇಶಪ್ರೇಮ ಬಿಡಲಿಲ್ಲ.

ಅವರು“ಮೇರೆರಂಗದೆ ಬಸಂತಿ ಚೋಲಾ” ಈ ಹಾಡಿನ ಮೂಲಕ ದೇಶಪ್ರೇಮ ವ್ಯಕ್ತ ಪಡಿಸಿದರೆಂದು ತಮ್ಮ ಭಾಷಣದ ಮೂಲಕ ಮಕ್ಕಳಿಗೆ ಹೇಳಿಕೊಟ್ಟರು. ಕಾರ್ಯಕ್ರಮದ ಇನ್ನೋರ್ವ ಅತಿಥಿಗಳಾದ ಶಿಕ್ಷಣ ಇಲಾಖೆಯ ಹಿಟ್ಟಿನಹಳ್ಳಿ ಕ್ಲಸ್ಟರ ವಲಯದ ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ಶ್ರೀಯುತ ಕೆ ಎಸ್‌ಚಿತ್ತರಗಿ ಶಿಕ್ಷಕರು ಮಕ್ಕಳನ್ನುದ್ದೇಶಿಸಿ ಇವತ್ತಿನ ಜೀವನದಲ್ಲಿ ಮಕ್ಕಳು ಸ್ಪರ್ದಾತ್ಮಕ ಪರೀಕ್ಷೆಗಳಾದ ಸೈನಿಕ, ಕಿತ್ತೂರ, ನವೋದಯ ಪ್ರವೇಶ ಪರೀಕ್ಷೆಗಳ ತರಬೇತಿ ಪಡೆದು ಅಂತಹ ಪರೀಕ್ಷೆಗಳಲ್ಲಿ ಹೆಚ್ಚು ಅಂಕಗಳನ್ನು ಪಡೆಯುವುದರ ಮೂಲಕ ಶುಲ್ಕರಹಿತ ಶಾಲೆಗೆ ಪ್ರವೇಶ ಪಡೆಯಲು ಪ್ರಯತ್ನ ಮಾಡಬೇಕು. ಏಕೆಂದರೆ ನಾವು ಪಾಲಕರ ಹಣಕಾಸಿನ ಹೊರೆ ಇಳಿಸಿದಂತಾಗುತ್ತದೆ ನಾವು ನಮ್ಮ ಉತ್ತಮ ಶಿಕ್ಷಣದ ಜೊತೆ ತಂದೆ ತಾಯಿಯವರಿಗೆ ಉತ್ತಮ ಸಹಾಯ ಮಾಡುವುದರ ಮೂಲಕ ಜೀವನದಲ್ಲಿ ಆದರ್ಶ ವಿದ್ಯಾರ್ಥಿ ಎನಿಸಿಕೊಳ್ಳಲು ಸಾದ್ಯವಿದೆ ಎಂದು ತಮ್ಮ ಅನಿಸಿಕೆಯಲ್ಲಿ ಹೇಳಿದರು.

ಈ ಕಾರ್ಯಕ್ರದಲ್ಲಿ ಮುಖ್ಯಗುರುಗಳಾದ ಅರವಿಂದ ಬಿ ಪವಾರಇವರು ಮಕ್ಕಳಿಗೆ ಒಳ್ಳೆಯ ಶಿಕ್ಷಣದಜೊತೆ ಮಕ್ಕಳಿಗೆ ಶಿಸ್ತಿನಿಂದ ಇದ್ದುಕೊಂಡು ಜೀವನದಲ್ಲಿ ನೈತಿಕ ಶಿಕ್ಷಣ ಪಡೆಯಬೇಕು ಎಂದು ತಮ್ಮ ಪ್ರಾಸ್ತಾವಿಕ ನುಡಿಯಲ್ಲಿಹೇಳಿದರು. ಏಳನೇ ವರ್ಗದ ಮಕ್ಕಳು ತಮ್ಮ ಶಾಲಾ ಜೀವನದ ಅನುಭವಗಳನ್ನು ಹಂಚಿಕೊಂಡು ಶಿಕ್ಷಕರಿಗೆ ಕೃತಜ್ಞತೆಯನ್ನು ಸಲ್ಲಿಸಿದರು. ಇದರ ಜೊತೆಯಲ್ಲಿ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಈಕಾರ್ಯಕ್ರಮದಲ್ಲಿ ಇಂದುಮತಿ ಪತ್ತಾರ ಶಿಕ್ಷಕಿಯರು ನಿರೂಪಣೆ ಮಾಡಿಕೊನೆಯಲ್ಲಿ ಕವಿತಾ ಬೆಳ್ಳುಂಡಗಿ ಶಿಕ್ಷಕಿಯರು ವಂದನಾರೆ​‍್ಣ ಹೇಳಿ ಕಾರ್ಯಕ್ರಮ ಮುಕ್ತಾಯಗೊಳಿಸಿದರು. 


ಸುದ್ದಿ ಓದಿ