ಯರಗಟ್ಟಿ

ಬೆನಕಟ್ಟಿ ಶಾಲೆಯಲ್ಲಿ ಎಫ್‌ಎಲ್‌ಎನ್ ಪ್ರಗತಿ ಪರೀಶೀಲನೆ

ಬೆನಕಟ್ಟಿ ಶಾಲೆಯಲ್ಲಿ ಎಫ್‌ಎಲ್‌ಎನ್ ಪ್ರಗತಿ ಪರೀಶೀಲನೆ

ಯರಗಟ್ಟಿ 22: ಸಮೀಪದ ಬೆನಕಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಎಫ್‌ಎಲ್‌ಎನ್ (ಮೂಲಭೂತ ಸಾಕ್ಷರತೆ ಮತ್ತು ಸಂಖ್ಯಾಜ್ಞಾನ) ಪ್ರಗತಿ ಪರೀಶೀಲನೆ ನಡೆಸಲಾಯಿತು.  ಕ್ಷೇತ್ರ ಶಿಕ್ಷಣಾಧಿಕಾರಿ ಎ.ಎ. ಖಾಜಿ ಅವರು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ, ಸೆ. 23, 2026ರಿಂದ ಆರಂಭವಾಗಲಿರುವ ಎಸ್‌ಎಲ್‌ಎ ಪರೀಕ್ಷೆಯನ್ನು ಪಾರದರ್ಶಕವಾಗಿ ಹಾಗೂ ಪ್ರಾಮಾಣಿಕವಾಗಿ ಬರೆಯುವಂತೆ ವಿದ್ಯಾರ್ಥಿಗಳಿಗೆ ತಿಳಿಸಿದರು. ಪರೀಕ್ಷೆಗೆ ಸಿದ್ಧರಾಗಿರುವುದಾಗಿ ವಿದ್ಯಾರ್ಥಿಗಳು ತಿಳಿಸಿದ್ದಕ್ಕೆ ಅವರು ಸಂತಸ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಮುಖ್ಯ ಶಿಕ್ಷಕ ವೈ.ಎಚ್‌. ಹೊಸಮನಿ ಹಾಗೂ ವರ್ಗ ಶಿಕ್ಷಕ ಎಂ.ಎಸ್‌. ಕುಂಬಾರ ಉಪಸ್ಥಿತರಿದ್ದರು. 


ಸುದ್ದಿ ಓದಿ