ಮನರಂಜನೆ

ಅಪರಾಧದ ಹಿಂದಿನ ಸೂಕ್ಷ್ಮತೆಯನ್ನು ಹಾಸ್ಯ ಮೂಲಕ ಉಣಬಡಿಸಿ ಸಂದೇಶ ಸಾರಿದ "ಒಂದು ಗಂಟೆಯ ಕಥೆ"

ಅಪರಾಧದ ಹಿಂದಿನ ಸೂಕ್ಷ್ಮತೆಯನ್ನು ಹಾಸ್ಯ ಮೂಲಕ ಉಣಬಡಿಸಿ ಸಂದೇಶ ಸಾರಿದ "ಒಂದು ಗಂಟೆಯ ಕಥೆ"

ಬೆಂಗಳೂರು,ಮಾ.21:ಸತ್ಯಘಟನೆಯನ್ನಾಧರಿಸಿದ ಚಿತ್ರಗಳು ಬರುವುದು ಸಹಜ.ಆದರೆ ಒಂದು ಅಪರಾಧದ ಸತ್ಯಘಟನೆಯನ್ನೂ ಕ್ರೈಂ ಎಂಬುದನ್ನೂ ತಿಳಿಸದೇ ಅದರೊಳಗಿನ ಸೂಕ್ಷ್ಮತೆ ನವೀರತೆ ಹಾಗೂ ವಾಸ್ತವವನ್ನು ಹಾಸ್ಯದ ಮೂಲಕ ಪರಿಚಯಿಸುವ ಹೊಸ ಪ್ರಯತ್ನವೇ "ಒಂದು ಗಂಟೆಯ ಕಥೆ" ಚಿತ್ತದ ಹೆಸರನ್ನು ಕೇಳಿದಾಕ್ಷಣ ಅರೇ ಇದೇನಿದು ಬರೀ ಒಂದು ಗಂಟೆಯ ಕಥೆಯೇ ಎಂದನಿಸುವುದು ಸಹಜವೆನಿಸಿದರೂ ಆ ಒಂದು ಗಂಟೆ ಯಾವುದು ಎಂಬ ಕುತೂಹಲ ಚಿತ್ರ ನೋಡುವ ಮುನ್ನ ಇದ್ದೇ ಇರುತ್ತದೆ.ಚಿತ್ರದ ಟ್ರೇಲರ್ ನೋಡಿದ ಬಹುತೇಕರು ಇದು ಬರೀ ಡಬಲ್ ಮೀನಿಂಗ್ ಚಿತ್ರಾನ ಅಂತ್ಹೇಳಿದರೂ ಸಹ ಸಂಭಾಷಣೆಯಲ್ಲಿರುವ ಹಿಂದಿನಾರ್ಥವನ್ನು ಅರಿಯಲು"ಒಂದು ಗಂಟೆಯ ಕಥೆ"ಯನ್ನು ನೋಡಲೇಬೇಕು.

ಹೆಣ್ಣೊಳಗಿನ ಸೂಕ್ಷ್ಮಮನಸ್ಥಿತಿಯನ್ನು   ಆಕೆಯ ಮೇಲಿನ ದೌರ್ಜನ್ಯ ಹೆಣ್ಣನ್ನು ಬರೀ ಕಾಮದ ವಸ್ತುವನ್ನಾಗಿ ನೋಡುವ ಮನಸ್ಥಿತಿಗಳಿಗೆ "ಸರೋಜಾ" ಪಾತ್ರ ತಕ್ಕಸಂದೇಶ ಸಾರಿದೆ. ನಾಯಕ ಅಜಯ್ ರಾಜ್ ಸಹಜತೆಯಲ್ಲಿ ತಮ್ಮದೇನೋ ಕಳೆದುಕೊಂಡವರಂತೆಯೇ ಜೀವತುಂಬಿದ್ದಾರೆ.ಒಂದು ಹೆಣ್ಣಿನ ಮನಸ್ಥಿತಿ,ಮನೆಯ ಪರಿಸ್ಥಿತಿ,ಸಮಾಜ ಅದು ಸುದ್ದಿಕೇಂದ್ರಕ್ಕೆ ಬರುವುದು ಹೇಗೆ?ಅದರ ತಿರುವು ಹೇಗೆ?ಎಂಬಿತ್ಯಾದಿಗಳನ್ನು ಹಾಸ್ಯದ ಮೂಲಕ ಚಿತ್ರಕಥೆ ನಿರ್ದೇಶನ ಹೊತ್ತಿರುವ ರಾಘವ್ ದ್ವಾರ್ಕಿ ತೋರಿಸಿದ್ದಾರೆ.ರಾಬರ್ಟ್‌ನಂತಹ ದೊಡ್ಡದೊಡ್ಡ ಚಿತ್ರಗಳ ನಡುವೆ ಸೂಕ್ಷ್ಮಸಂವೇದನೆಯನ್ನು ತೋರಿಸುವ ಒಂದುಗಂಟೆಯ ಕಥೆ ಕಳೆದ ಶುಕ್ರವಾರ ತೆರೆಕಂಡಿದೆ.ದೊಡ್ಡಮಟ್ಟದ ತಾರಾಬಳಗವನ್ನೇನೂ ಹೊಂದದ ಚಿತ್ರ ರಂಗಭೂಮಿಯ ಬಹುತೇಕರ ನಟನೆಗೆ ಸಾಥ್ ನೀಡಿದೆ.ಪ್ರಿಯತಮೆ ತನ್ನನ್ನು ಬರೀ ಕಾಮಕ್ಕಾಗಿಯೇ ಬಳಸಿಕೊಂಡ ಪ್ರಿಯತಮನ ಮರ್ಮಾಂಗವನ್ನೇ ಕತ್ತರಿಸಿದಳು ಎಂಬ ಒಂದು ಎಳೆಯ ಹಿನ್ನೋಟವಿದು.


ಸುದ್ದಿ ಓದಿ