ಪ್ರತ್ಯೇಕ ವಿಶ್ವವಿದ್ಯಾಲಯ ಸ್ಥಾಪನೆ ಮಾಡಿ
ತಾಳಿಕೋಟೆ17:ವಿಜಯಪುರ ಜಿಲ್ಲೆಗೆ ಪ್ರತ್ಯೇಕ ನೂತನ ವಿಶ್ವವಿದ್ಯಾಲಯ ಸ್ಥಾಪನೆ ಮಾಡಲು ಸರಕಾರದ ಮೇಲೆ ಒತ್ತಡ ಹಾಕಬೇಕು ಹಾಗೂ ಸದ್ಯ ವಿಜಯಪುರ ಜಿಲ್ಲೆಯನ್ನು ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯಕ್ಕೆ ಸೇರ್ಪಡೆಯನ್ನು ಕೈಬಿಟ್ಟು ಬಾಗಲಕೋಟೆ ನೂತನ ವಿಶ್ವವಿದ್ಯಾಲಯಕ್ಕೆ ಸೇರ್ಪಡೆ ಮಾಡಬೇಕು ಎಂದು ಒತ್ತಾಯಿಸಿ ಪಟ್ಟಣದ ವೀರಶೈವ ವಿದ್ಯಾವರ್ಧಕ ಸಂಘದ ಖಾಸ್ಗತೇಶ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಮಹಾವಿದ್ಯಾಲಯದ ಪ್ರಾಂಶುಪಾಲರು, ಸಿಬ್ಬಂದಿಗಳು ಮುದ್ದೇಬಿಹಾಳ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಅವರಿಗೆ ಮನವಿಯನ್ನು ಸಲ್ಲಿಸಲಾಯಿತು.
ಇಲ್ಲಿಯವೆರೆಗೆ ವಿಜಯಪುರ, ಬಾಗಲಕೋಟ ಹಾಗೂ ಬೆಳಗಾವಿ ಜಿಲ್ಲೆಗಳ ಮಹಾವಿದ್ಯಾಲಯಗಳು ರಾಣಿ ಚೆನ್ನಮ್ಮ ವಿಶ್ವ ವಿದ್ಯಾಲಯದಲ್ಲಿ ಬೆಳಗಾವಿಯಲ್ಲಿ ಸಂಯೋಜನೆಗೊಂಡು ಸುಮಾರು 12 ವರ್ಷಗಳಾದವು. ಆದರೆ ಸದ್ಯ ಸರ್ಕಾರ ಬಾಗಲಕೋಟ ಜಿಲ್ಲೆಯಲ್ಲಿ ವಿನೂತನ ವಿಶ್ವ ವಿದ್ಯಾಲಯವನ್ನು ಸ್ಥಾಪಿಸಲು ಆದೇಶಿಸಿದೆ. ಇದರಿಂದ ವಿಜಯಪುರ ಜಿಲ್ಲೆಯ ಮಹಾವಿದ್ಯಾಯಗಳು ಬೆಳಗಾವಿಯ ರಾಣಿ ಚೆನ್ನಮ್ಮ ವಿಶ್ವ ವಿದ್ಯಾಲಯದಲ್ಲಿ ಮುಂದುವರೆಯತ್ತವೆ.
ಕಾರಣ ವಿಜಯಪುರ ಜಿಲ್ಲೆಯ ಮಹಾವಿದ್ಯಾಲಯಗಳ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ವರ್ಗದವರು ಸುಮಾರು 260 ಕೀ.ಮಿ ಪ್ರಯಾಣಿಸಬೇಕಾಗುತ್ತದೆ. ಇದರಿಂದ ಪ್ರಾಧ್ಯಾಪಕರು ಹಾಗೂ ವಿಧ್ಯಾರ್ಥಿಗಳಿಗೆ ತಿರ್ವ ತೊಂದರೆಯಾಗುತ್ತಿದೆ. ಆದ್ದರಿಂದ ವಿಜಯಪುರ ಜಿಲ್ಲೆಗೆ ಪ್ರತ್ಯೇಕ ವಿಶ್ವ ವಿದ್ಯಾಲಯವನ್ನು ಸ್ಥಾಪಿಸಬೇಕೆಂದು ಇಲ್ಲವೆ ಬಾಗಲಕೋಟಿ ವಿಶ್ವ ವಿದ್ಯಾಲಯಕ್ಕೆ ವಿಜಯಪುರ ಜಿಲ್ಲೆಯ ಮಹಾವಿದ್ಯಾಲಯಗಳನ್ನು ಸೇರ್ಪಡೆ ಮಾಡಬೆಕೇಂದು ಮನವಿ ಮಾಡಿದರು.
ಮನವಿ ಸ್ವಿಕರಿಸಿದ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಅವರು ಸಮಸ್ಯೆ ಬಗ್ಗೆ ಸರಕಾರದ ಗಮನಕ್ಕೆ ತರುವದಾಗಿ ತಿಳಿಸಿದರು.
ಪ್ರಾಚಾರ್ಯ ಪ್ರೋ.ಆರ್.ವಿ.ಜಾಲವಾದಿ, ಪ್ರಾಧ್ಯಾಪಕರಾದ ಡಾ.ಡಿ.ಬಿ.ಮುಗಡ್ಲಿಮಠ, ಡಾ.ಎ.ಎ.ಅಬ್ಬಾರ, ಪ್ರೋ,ಆಯ್.ವಿ.ರೂಡಗಿ, ಯು.ಎ.ಖಾಜಿ, ಮಹಾಂತೇಶ ಹುಣಶ್ಯಾಳ, ಗುರುರಾಜ ಕುಲಕರ್ಣಿ, ಕೆ.ಬಿ.ದೇಸಾಯಿ ಸೇರಿದಂತೆ ಇತರರು ಇದ್ದರು.