ತಾಳಿಕೋಟಿ

ನೈತಿಕ ಮೌಲ್ಯಗಳನ್ನು ಅಳವಡಿಸಿಕೊಳ್ಳಿ: ರಾಮಲಿಂಗಯ್ಯ ಶ್ರೀಗಳು

ನೈತಿಕ ಮೌಲ್ಯಗಳನ್ನು ಅಳವಡಿಸಿಕೊಳ್ಳಿ: ರಾಮಲಿಂಗಯ್ಯ ಶ್ರೀಗಳು

ತಾಳಿಕೋಟಿ : ದುಶ್ಚಟಗಳನ್ನು ವರ್ಜಿಸಿ ಕೆಡುಕುಗಳಿಂದ ದೂರವಿದ್ದು ಉತ್ತಮ ಸಂಸ್ಕಾರಗಳನ್ನು ಮೈಗೂಡಿಸಿಕೊಂಡು ಸದಾಚಾರಿಗಳಾಗಿ ಬದುಕು ನಡೆಸಲು ಪ್ರಯತ್ನಿಸಿ, ನೈತಿಕ ಮೌಲ್ಯಗಳೇ ನಿಮ್ಮ ಜೀವನದ ಬುನಾದಿಗಳಾಗಲು ಎಂದು ಚಬನೂರ ಹಿರೇಮಠ ಪೀಠಾಧಿಪತಿ ಜ್ಯೋತಿಷ್ಯರತ್ನ ಪರಮ ಪೂಜ್ಯ ಶ್ರೀ ರಾಮಲಿಂಗಯ್ಯ ಮಹಾಸ್ವಾಮಿಗಳು ಹೇಳಿದರು.

ಜಂಗಮ ಜಾಗೃತಿ ಅಭಿಯಾಣದ ಅಂಗವಾಗಿ ತಾಲೂಕಿನ ಬೊಮ್ಮನಹಳ್ಳಿ, ಗುತ್ಯಾಳ, ತುಂಬಗಿ, ಪತ್ತೇಪೂರ, ಬಿಂಜಲಭಾವಿ, ವಣಿಕ್ಯಾಳ ಹಾಗೂ ಜಲಪೂರ ಗ್ರಾಮಗಳಲ್ಲಿ ಹಮ್ಮಿಕೊಂಡ ನಾಲ್ಕನೇಯ ಹಂತದ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ಜಂಗಮ ಸಮಾಜ ಬಾಂಧವರನ್ನು ಸಂಘಟಿಸಲಿಕ್ಕಾಗಿಯೇ ತಾಲೂಕಾ ಜಂಗಮ ಕ್ಷೇಮಾಭಿವೃದ್ಧಿ ಸಂಘವನ್ನು ಅಸ್ತಿತ್ವಕ್ಕೆ ತರಲಾಗಿದೆ. ಸಂಘಟಿತ ಬದುಕಿನಿಂದಾಗಿಯೇ ಸಮಾಜದ ಅಭಿವೃದ್ಧಿ ಸಾಧ್ಯ ಎಂಬುದನ್ನು ನಾವು ತಿಳಿದುಕೊಳ್ಳಬೇಕಾಗಿದೆ.

ಜಂಗಮರು ಗುರುವಿನ ಸ್ಥಾನವನ್ನು ಪಡೆದವರು ಅವರ ಜೀವನ ಸಮಾಜದಲ್ಲಿರುವ ಇತರರಿಗೆ ಮಾದರಿಯಾಗಬೇಕು. ಸಮಾಜದಲ್ಲಿರುವ ಬಡವ-ದುರ್ಬಲರನ್ನು ಎತ್ತಿ ಹಿಡಿಯುವ ಕೆಲಸ ಮಾಡಬೇಕು. ಯಾರೇ ಸಂಕಷ್ಟದಲ್ಲಿದ್ದರೂ ಮಾನವೀಯತೆಯ ಆಧಾರದಲ್ಲಿ ಅವರಿಗೆ ನಿಮ್ಮಿಂದಾದಷ್ಟು ಸಹಾಯ ಮಾಡಿ ನೊಂದವರ ಕಣ್ಣೋರೆಸುವುದು ಧರ್ಮಶ್ರೇಷ್ಠ ಕಾರ್ಯವಾಗಿದೆ. ಯಾವುದೇ ರಾಜಕೀಯ ಉದ್ದೇಶವಿಲ್ಲದೆ ನಾನು ಕೇವಲ ನಮ್ಮ ಸಮಾಜದ ಜನರ ಕಲ್ಯಾಣಕ್ಕಾಗಿ ಕೆಲಸ ಮಾಡುವ ಉದ್ದೇಶದಿಂದ ಈ ಅಭಿಯಾನವನ್ನು ನಡೆಸುತ್ತಿದ್ದೇನೆ. ಅಪಪ್ರಚಾರ ಮಾಡುವವರ ಮಾತಿಗೆ ಕಿವಿಗೊಡಬೇಡಿ ಎಂದು ಹೇಳಿದರು.

ಶ್ರೀಗಳ ಮಾರ್ಗದರ್ಶನದಲ್ಲಿಯೇ ಗ್ರಾಮ ಘಟಕಗಳ ಅಧ್ಯಕ್ಷರನ್ನು ಆಯ್ಕೆ ಮಾಡಿ ಅವರಿಗೆ ಶ್ರೀಗಳಿಂದ ಆಶೀರ್ವಚನ ನೀಡಲಾಯಿತು.

ಈ ಸಮಯದಲ್ಲಿ ತಾಲೂಕ ಜಂಗಮ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು, ಸಮಾಜದ ಗುರು ಹಿರಿಯರು ಹಾಗೂ ಅಪಾರ ಸಂಖ್ಯೆಯಲ್ಲಿ ಯುವಕರು ಇದ್ದರು.

ಸುದ್ದಿ ಓದಿ