ಮುಂದಗೋಡ

ಅರ್ಹ ಫಲಾನುಭವಿಗಳು ಹೆಸರು ನೋಂದಾಯಿಸಿ: ಕೃಷ್ಣ

ಅರ್ಹ ಫಲಾನುಭವಿಗಳು ಹೆಸರು ನೋಂದಾಯಿಸಿ: ಕೃಷ್ಣ

ಮುಂಡಗೋಡ:ತಾಲೂಕಿನ ಅಂದಲಗಿ ಪ್ಲಾಟ್ನ ಗದಿಗೆಜ್ಜ ದೇವಸ್ಥಾನದಲ್ಲಿ ಕೆನರಾ ಬ್ಯಾಂಕ್ ದೇಶಪಾಂಡೆ ಆರ್.ಸೆಟಿ(ರಿ.) ಸಹಯೋಗದಲ್ಲಿ ಕೈತೋಟ ತರಬೇತಿ ಜರುಗಿತು.

ಸಹಾಯಕ ತೋಟಗಾರಿಕೆ ನಿನಿರ್ದೇಶಕ (ಜಿ.ಪಂ.) ಸಂಪನ್ಮೂಲ ವ್ಯಕ್ತಿ ಕೃಷ್ಣ ಕುಳ್ಳೂರ ಕೈತೋಟದ ಬಗ್ಗೆ ತಿಳಿಸುತ್ತಾ ತಾಜಾ ತರಕಾರಿ ಮತ್ತು ಹಣ್ಣುಗಳನ್ನು ಪಡೆಯಲು ತಮ್ಮ ಮನೆಯ ಆವರಣ/ಹಿತ್ತಲಿನಲ್ಲಿ ಬೆಳೆಯುವ ತೋಟಕ್ಕೆ ಕೈತೋಟವೆಂದು ಕರೆಯಲಾಗುತ್ತದೆ. ಕೈತೋಟದ ಮಹತ್ವವನ್ನು ಮನಗಂಡು ಪ್ರತಿ ವರ್ಷ ಆಗಸ್ಟ್ ತಿಂಗಳ ಕೊನೆ ರವಿವಾರವನ್ನು ವಿಶ್ವ ಕೈತೋಟ ದಿನ ಎಂದು ಆಚರಣೆ ಮಾಡಲಾಗುತ್ತಿದೆ. ಇದು 2004ನೇ ಇಸವಿಯಿಂದ ಪ್ರಾರಂಭವಾಗಿದೆ. ಜನರಲ್ಲಿ ಸಾವಯವ ಕೈತೋಟ ಮಾಡುವುದನ್ನು ಉತ್ತೇಜಿಸುವುದು, ಆರೋಗ್ಯ ಮತ್ತು ಸ್ವಾವಲಂಬಿ ಜೀವನ ಬಗ್ಗೆ ಹಾಗೂ ಸ್ಥಳೀಯ ಆಹಾರ ಪದ್ಧತಿಯ ಬಗ್ಗೆ ಜಾಗೃತಿ ಮೂಡಿಸುವುದೇ ಇದರ ಮುಖ್ಯ ಉದ್ದೇಶವಾಗಿದೆ ಎಂದರು.

2022-23ನೇ ಸಾಲಿನ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಪ್ರತಿ ಗ್ರಾಮ ಪಂಚಾಯತ ವ್ಯಾಪ್ತಿಗೆ ಕನಿಷ್ಠ 101 ವ್ಯಕ್ತಿಗಳ ಅರ್ಹ ಫಲಾನುಭವಿಗಳ ವಸತಿ/ಮನೆಯ ಆವರಣ/ಹಿತ್ತಲ ಸ್ಥಳದಲ್ಲಿ ಪೌಷ್ಟಿಕ ಕೈತೋಟ ಸ್ಥಾಪಿಸಲು ಒಟ್ಟು ಮುಂಡಗೋಡ ತಾಲೂಕಿಗೆ 1616 ಸಂಖ್ಯೆ ಕೃಷಿ ಪೌಷ್ಟಿಕ ಕೈತೋಟ ನಿರ್ಮಾಣ  ಮಾಡುವ ಗುರಿಯನ್ನು ಪುಸ್ತುತ ವರ್ಷದಲ್ಲಿ ಸಾಧಿಸಲಾಗುವುದು. ಅರ್ಹ ಫಲಾನುಭವಿಗಳು ಗ್ರಾಮ ಪಂಚಾಯತದಲ್ಲಿ ತಮ್ಮ ಹೆಸರು ನೋಂದಾಯಿಸಬೇಕು ಎಂದರು.

ಈ ವೇಳೆ ಸಿಬಿಆರ್ಸೆಟಿ ಆಡಳಿತ ಸಹಾಯಕ ವಿನಾಯಕ ಸುಣಗಾರ, ಅಂದಲಗಿ-ಕಲಕೇರಿ ಗ್ರಾಮಗಳ ಧನಶ್ರೀ, ಭಾಗ್ಯಲಕ್ಷ್ಮೀ, ಅಂಬಿಕಾ, ಮಂಗಳಗೌರಿ, ಶ್ರೀ ಮಾರಿಕಾಂಬಾ, ರುಕ್ಷಿಣಿ, ಜ್ಞಾನೇಶ್ವರಿ, ಸ್ವ-ಸಹಾಯ ಸಂಘದ ಸದಸ್ಯರು ಭಾಗವಹಿಸಿದ್ದರು. ಕೆನರಾ ಬ್ಯಾಂಕ್ ದೇಶಪಾಂಡೆ ಆರ್.ಸೆಟಿ(ರಿ.) ಕ್ಷೇತ್ರಾಧಿಕಾರಿ ವಿಜಯಾ ನಾಯ್ಕ ವಂದಿಸಿದರು 

ಸುದ್ದಿ ಓದಿ