ತಾಳಿಕೋಟಿ

ವಿದ್ಯಾಪೋಷಕ ಸಂಸ್ಥೆ ಕಾರ್ಯ ಶ್ಲಾಘನೀಯ: ಪತ್ತಾರ

ವಿದ್ಯಾಪೋಷಕ ಸಂಸ್ಥೆ ಕಾರ್ಯ ಶ್ಲಾಘನೀಯ: ಪತ್ತಾರ
ತಾಳಿಕೋಟೆ ಪಟ್ಟಣದ ಎಸ್.ಕೆ ಕಾಲೇಜು ಆವರಣದಲ್ಲಿ ವಿದ್ಯಾಪೋಷಕ ಧಾರವಾಡದ ಅವರ ವಿನಮ್ರ ಆಥರ್ಿಕ ನೆರವು ಕಾರ್ಯಕ್ರಮದಲ್ಲಿ 19

ತಾಳಿಕೋಟೆ 01: ಆರ್ಥಿಕ ಕವಾಗಿ ಹಿಂದುಳಿದ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳ ಮನೆಗಳಿಗೆ ತೆರಳಿ ನಿಜವಾದ ಗುಡಿಸಲಿನ ಪ್ರತಿಭೆಗಳನ್ನು ಹುಡುಕಿ ಧನಸಹಾಯದೊಂದಿಗೆ ತರಬೇತಿ ನೀಡುತ್ತಿರುವ ವಿದ್ಯಾಪೋಷಕ ಸಂಸ್ಥೆಯ ಕಾರ್ಯ ಶ್ಲಾಘನೀಯವಾಗಿದೆ ಎಂದು ಪಟ್ಟಣದ ಪ್ರತಿಭಾ ಲೋಕ ಕರಿಯರ್ ಅಕಾಡಮಿ ನಿರ್ದೇಶಕ ಶ್ರೀಕಾಂತ ಪತ್ತಾರ ಹೇಳಿದರು.

ಪಟ್ಟಣದ ಎಸ್.ಕೆ ಕಾಲೇಜು ಆವರಣದಲ್ಲಿ ವಿದ್ಯಾಪೋಷಕ ಧಾರವಾಡದ ಅವರ ವಿನಮ್ರ ಆರ್ಥಿಕ ನೆರವು ಕಾರ್ಯಕ್ರಮದಲ್ಲಿ 195 ವಿದ್ಯಾರ್ಥಿ ಗಳಿಗೆ 16.93 ಲಕ್ಷ ರೂ.ಗಳ ಆಥರ್ಿಕ ನೆರವು ನೀಡುವ ಕಾರ್ಯಕ್ರಮದಲ್ಲಿ ಮಾತನಾಡಿದರು.

ವಿದ್ಯಾಪೋಷಕದ ಕಾರ್ಯಗಳಿಂದ ಪ್ರಭಾವಿತರಾಗಿ ಸ್ವಯಂಸೇವಕರಾಗಿ ಮಾಡುತ್ತಿರುವ ಕಾರ್ಯ ಸಂತಸ ತಂದಿದೆ. ಇನ್ನು ಇಂಥ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಪ್ರತಿಯೊಬ್ಬ ಬಡ ವಿದ್ಯಾರ್ಥಿಗೂ ವಿದ್ಯಾಪೋಷಕ ನೀಡುವ ಸಹಾಯ ತಲುಪಬೇಕು ಎಂದರು.

ಪ್ರಾಚಾರ್ಯ ಪ್ರೋ.ಆರ್.ವಿ.ಜಾಲವಾದಿ ಮಾತನಾಡ, ಆರ್ಥಿಕ ಸಂಕಷ್ಟದಲ್ಲಿರುವ ಅರ್ಹ ಪ್ರತಿಭಾನ್ವಿತ  ವಿದ್ಯಾರ್ಥಿ ಗಳಿಗೆ ಧಾರವಾಡದ ವಿದ್ಯಾಪೋಷಕ ಸಂಸ್ಥೆಯು ಆಥರ್ಿಕ ನೆರವನ್ನು ನೀಡಿದೆ. ಬಡ ಪ್ರತಿಭೆಗಳನ್ನು ಪ್ರೋತ್ಸಾಹಿಸುತ್ತಿರುವ ಸಂಸ್ಥೆಗೆ ತಾನೂ ಕೂಡಾ ಸದಸ್ಯನೆಂದು ಹೆಮ್ಮೆ ಎನಿಸುತ್ತದೆ ಎಂದು ವಿದ್ಯಾಪೋಷಕ ಸಂಸ್ಥೆ ಮಾಡುತ್ತಿರುವ ಕೆಲಸದ ಬಗ್ಗೆ ಸಂತೋಷ ವ್ಯಕ್ತಪಡಿಸಿದರು.

 ಎಸ್,ಕೆ.ಮಹಾವಿಧ್ಯಾಲಯದ ಚೇರಮನ್ ವಿ.ಸಿ.ಹಿರೇಮಠ, ವಿದ್ಯಾಪೋಷಕ ಸಂಸ್ಥೆಯ ಮಲ್ಲಿಕಾರ್ಜು ನ ಕತ್ತಿ,  ವಿದ್ಯಾಪೋಷಕದ ವಿದ್ಯಾರ್ಥಿ ಗಳಾದ ಸಾಗರ ಕುಲಕರ್ಣಿ  ಹಾಗೂ ಸೌಜನ್ಯ ಕುಲಕರ್ಣಿ  ಮಾತನಾಡಿದರು. ವಿದ್ಯಾರ್ಥಿ  ಶಂಕರ ಭಜಂತ್ರಿ ಪ್ರತಿಜ್ಞಾ ವಿಧಿ ಬೋಧಿಸಿದರು. ಡಾ.ದೀಪಾ ಮಾಳಗಿ, ವಿದ್ಯಾಪೋಷಕದ ಸ್ವಯಂ ಸೇವಕರಾದ ಪಿ.ಎಲ್.ಹೀರೆಮಠ, ಸಿ.ಲಿಂಗಪ್ಪ, ಸಂಗಮೇಶ ಪಾಟೀಲ, ವಿದ್ಯಾಪೋಷಕದ ಸಿಬ್ಬಂದಿಗಳಾದ ಪ್ರೀಯಾ ಕುಲಕರ್ಣಿ , ನಮೀತಾ ಹೆಗಡೆ ಸೇರಿದಂತೆ ವಿದ್ಯಾಪೋಷಕ ದಾನಿಗಳು, ವಿದ್ಯಾಪೋಷಕ ಸಮುದಾಯದ ಸದಸ್ಯರು ಉಪಸ್ಥಿತರಿದ್ದರು. ಪ್ರೋ.ಕೆ.ಬಿ.ದೇಸಾಯಿ ಕಾರ್ಯಕ್ರಮವನ್ನು ನಿರೂಪಣೆ ಮಾಡಿದರು. 2ಂ22-23ನೇ ಸಾಲಿನಲ್ಲಿ ವಿಜಯಪುರ ಮತ್ತು ಬಾಗಲಕೋಟ ಜಿಲ್ಲೆಯ 220 ವಿದ್ಯಾರ್ಥಿಗಳಿಗೆ 2ಂ ಲಕ್ಷಗಳಸ್ಟು ಧನಸಹಾಯವನ್ನು ನೀಡಲಾಯಿತು.  ಈ ಕಾರ್ಯಕ್ರಮದಲ್ಲಿ ವಿಜಯಪುರ ಜಿಲ್ಲೆಯ 100 ವಿದ್ಯಾರ್ಥಿಗಳು, ಪಾಲಕರು ಹಾಜರಿದ್ದರು.



ಸುದ್ದಿ ಓದಿ