ಆ ಸುದ್ದಿಗಳು ನಿಜವಾಗಿದ್ದರೆ ಚೆನ್ನಾಗಿರುತ್ತಿತ್ತು.. ಅದೇ ನನ್ನ ಕನಸು; ರಷ್ಮಿಕಾ ಮಂದಣ್ಣ
ಬೆಂಗಳೂರು, ಫೆ 20 :ಅತಿ ಕಡಿಮೆ ಸಮಯದಲ್ಲಿ ತೆಲುಗು ಚಿತ್ರರಂಗದಲ್ಲಿ ತಾರಾ ನಾಯಕಿಯ ಪಟ್ಟ ಅಲಂಕರಿಸಿರುವ ರಷ್ಮಿಕಾ ಮಂದಣ್ಣ ‘ಕಿರಿಕ್ ಪಾರ್ಟಿ’ ಕನ್ನಡ ಚಿತ್ರದ ಮೂಲಕ ನಾಯಕಿಯಾಗಿ ಸಿನಿಮಾರಂಗಕ್ಕೆ ಪರಿಚಯಗೊಂಡ ಈ ಬೆಡಗಿ ಅತ್ಯಂತ ಕಡಿಮೆ ಸಮಯದಲ್ಲಿ ತೆಲುಗು ಚಿತ್ರರಂಗದಲ್ಲಿ ಅವಕಾಶ ಪಡೆದುಕೊಂಡಿದ್ದಾರೆ. ಆಕೆ ತೆಲುಗಿನಲ್ಲಿ ನಟಿಸಿದ ಮೊದಲ ಚಿತ್ರ ಯಶಸ್ಸಿನ ನಂತರ ವಿಜಯ ದೇವರಕೊಂಡ ಜತೆಗಿನ ‘ಗೀತಾ ಗೋವಿಂದಂ’ ಭಾರಿ ಸಕ್ಸಸ್ ಕಂಡಿತು. ನಂತರ ಕೊಡಗಿನ ಈ ಸುಂದರಿ ಹಿಂದೆ ತಿರುಗಿ ನೋಡಲೇ ಇಲ್ಲ... ಸರಣಿ ಯಶಸ್ಸಿನೊಂದಿಗೆ ತೆಲುಗಿನ ಸ್ಟಾರ್ ನಾಯಕರೊಂದಿಗೆ ನಟಿಸುವ ಅವಕಾಶ ಗಿಟ್ಟಿಸಿಕೊಂಡರು. ತೆಲುಗು ಹಾಗೂ ಕನ್ನಡ ಚಿತ್ರಗಳಲ್ಲಿ ಭಾರಿ ಜನಪ್ರಿಯಗೊಂಡ ಈ ಬೆಡಗಿ ಈಗ ಬಾಲಿವುಡ್ ಗೂ ಪ್ರವೇಶಿಸಿದ್ದಾರೆ.
ಈ ನಡುವೆ ಕರುನಾಡ ಸುಂದರಿಗೆ ಸಂಬಂಧಿಸಿದ ಸುದ್ದಿ ಬಾಲಿವುಡ್‌ನಲ್ಲಿ ಹರಿದಾಡುತ್ತಿದೆ. ರಷ್ಮಿಕಾ ಮಂದಣ್ಣ ಬಾಲಿವುಡ್ ಚಿತ್ರದಲ್ಲಿ ನಟಿಸಲು 2 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ ಎಂಬುದು ಆ ಸುದ್ದಿ . ಈ ಸಂಬಂಧ ಸಂದರ್ಶನವೊಂದರಲ್ಲಿ ಪ್ರತಿಕ್ರಿಯಿಸಿರುವ ರಷ್ಮಿಕಾ, "ನಾನು ಭಾರಿ ಸಂಭಾವನೆ ಪಡೆದುಕೊಂಡಿದ್ದೇನೆ ಎಂಬ ಸುದ್ದಿಗಳು ಹರಿದಾಡುತ್ತಿವೆ. ಆ ಸುದ್ದಿಗಳು ನಿಜವಾಗಿದ್ದರೆ ಚೆನ್ನಾಗಿರುತ್ತಿತ್ತು "ಸುದ್ದಿ ಹರಡಿರುವಷ್ಟು ಸಂಭಾವನೆ ಪಡೆಯುವುದು ನನ್ನ ಕನಸು" ಎಂದು ಹೇಳುವ ಮೂಲಕ ಅವುಗಳು ಕೇವಲ ವದಂತಿ ಎಂದು ತಳ್ಳಿಹಾಕಿದ್ದಾರೆ. ರಶ್ಮಿಕಾ ಪ್ರಸ್ತುತ ಟಾಲಿವುಡ್‌ನಲ್ಲಿ ಅಲ್ಲು ಅರ್ಜುನ್ ಅವರೊಂದಿಗೆ 'ಪುಷ್ಪಾ', ಶರ್ವಾನಂದ್ ರೊಂದಿಗೆ ' ಆಡವಾಳ್ಳು ಮೀಕು ಜೋಹಾರ್ಲು ಸೇರಿ ಎರಡು ಹಿಂದಿ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ.