ಕಾಲೇಜು ಬ್ಯಾಡ್ಮಿಂಟನ್ ಪಂದ್ಯಗಳಿಗೆ ಚಾಲನೆ
ಲೋಕದರ್ಶನ ವರದಿ
ವಿಜಯನಗರ 15: ಸ್ಪರ್ಧೆಗಳನ್ನು ಉತ್ತಮ ಕ್ರೀಡಾ ತರಬೇತಿಗಳು ಎಂದು ಭಾವಿಸುವುದರಿಂದ ಸ್ಪರ್ಧೆಗಳ ನಿಜವಾದ ಖುಷಿ ಅನುಭವಿಸಲು ಸಾಧ್ಯ. ಸ್ಪರ್ಧೆ ಎಂದರೆ ಸೋಲು ಗೆಲವು ಸಹಜ. ಗೆಲವು ಸೋಲು ಒಂದು ಸುಂದರ ಅನುಭವವೆಂದು ಭಾವಿಸಬೇಕು ಎಂದು ಬಳ್ಳಾರಿಯ ವಿಜಯನಗರ ಕೃಷ್ಣದೇವರಾಯ ವೀಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಹಾಗೂ ಕನ್ನಡ ಪ್ರಾಧ್ಯಾಪಕ ಡಾ. ಬಸವರಾಜ ಪೂಜಾರ ಹೇಳಿದರು. ನಗರದ ಗವಿಸಿದ್ಧೇಶ್ವರ ಪದವಿ ಮಹಾವಿದ್ಯಾಲಯದ ಒಳ ಕ್ರೀಡಾಂಗಣದಲ್ಲಿ ಜರುಗಿದ ಬಳ್ಳಾರಿಯ ವಿಜಯನಗರ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಹಾಗೂ ಗವಿಸಿದ್ಧೇಶ್ವರ ಪದವಿ ಮಹಾವಿದ್ಯಾಲಯ ಸಹಯೋಗದಲ್ಲಿ ಅಂತರ್ ಕಾಲೇಜು ಬ್ಯಾಡ್ಮಿಂಟನ್ ಪಂದ್ಯಗಳು ಹಾಗೂ ವಿಶ್ವವಿದ್ಯಾಲಯ ತಂಡದ (ಪುರುಷ ಮತ್ತು ಮಹಿಳೆ)ಆಯ್ಕೆ ಪ್ರಕ್ರೀಯೇಯ ಪಂದ್ಯಾವಳಿಯ ಕಾರ್ಯಕ್ರಮವನ್ನು ಉಧ್ಘಾಟಿಸಿ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಬಳ್ಳಾರಿಯ ವಿಜಯನಗರ ಕೃಷ್ಣದೇವರಾಯ ವೀಶ್ವವಿದ್ಯಾಲಯದ ದೈಹಿಕ ನಿರ್ದೇಶಕ ರ ಸಂಘದ ಅಧ್ಯಕ್ಷರಾದ ಡಾ. ಸೊಮಪ್ಪ ಬಡಗೇರ ಅವರು ಪಂದ್ಯಾವಳಿಯ ಧ್ವಜಾರೋಹಣವನ್ನು ನೆರವೇರಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಗವಿಸಿದ್ಧೇಶ್ವರ ಪದವಿ ಮಹಾವಿದ್ಯಾಲಯ ಪ್ರಾಚಾರ್ಯ ಡಾ. ಚನ್ನಬಸವ ಅವರು ಮಾತನಾಡಿ ಆಟಗಳಲ್ಲಿ ಸ್ಪರ್ಧೆಗಳು ಸಹಜ. ಇದು ಉತ್ತಮ ಅವಕಾಶವೆಂದು ತಿಳಿದು ತಮ್ಮ ಕ್ರೀಡಾ ಕೌಶಲ್ಯವನ್ನು ಉತ್ತಮವಾಗಿ ಪ್ರದರ್ಶಸಬೇಕು ಹಾಗೂ ಉತ್ತಮ ಪಟುಗಳಾಗಿ ಹೊರಹೊಮ್ಮಬೇಕು. ಸೋಲು ಗೆಲವು ಒಂದು ಉತ್ತಮ ಅನುಭವವೆಂದು ಭಾವಿಸಬೇಕು ರಾಜ್ಯ ಮತ್ತು ರಾಷ್ಟ್ರಮಟ್ಟದ ಉತ್ತಮ ಕ್ರೀಡಾಪಟುಗಳಾಗಿ ಬೆಳೆಯಬೇಕು ಎಂದು ಹೇಳಿದರು.
ಶ್ರೀ ಗವಿಸಿದ್ಧೇಶ್ವರ ಪದವಿ ಮಹಾವಿದ್ಯಾಲಯ ದೈಹಿಕ ನಿರ್ದೇಶಕ ಹಾಗೂ ಪಂದಾವಳಿಯ ಸಂಘಟನಾ ಕಾರ್ಯದರ್ಶಿ ವಿನೋದ ಮುದಿಬಸನಗೌಡರ್ ಪ್ರತಿಜ್ಞಾವಿಧಿ ಬೋಧಿಸಿದರು.
ಉಪಪ್ರಾಚಾರ್ಯ ಡಾ. ಕರಿಬಸವೇಶ್ವರ, ರೆಫ್ರೀಗಳಾದ ಗೌತಮ, ದಿವಾಕರ, ಹರ್ಷ, ವಿವಿಧ ಮಹಾವಿದ್ಯಾಲಯಗಳ ದೈಹಿಕ ನಿರ್ದೇಶಕ ಶಿವಕುಮಾರ, ಮಂಜುನಾಥ ಆರೆಂಟನೂರ, ಪರಶುರಾಮ ಗುಗ್ರಿ, ಸಂಕನಗೌಡ, ಸಂಪತಕುಮಾರ ಮತ್ತು ಪಂದ್ಯಾವಳಿ ಸಂಯೋಜಕ ಮತ್ತು ಗವಿಸಿದ್ಧೇಶ್ವರ ಪದವಿ ಮಹಾವಿದ್ಯಾಲಯ ದೈಹಿಕ ನಿರ್ದೇಶಕ ಈಶಪ್ಪ ದೊಡ್ಡಮನಿ ಉಪಸ್ಥಿತರಿದ್ದರು.
ಕು. ಶಿವಕುಮಾರ ಪ್ರಾರ್ಥಿಸಿದರು, ಡಾ. ದಯಾನಂದ ಸಾಳುಂಕೆ ಸ್ವಾಗತಿಸಿದರು, ಪ್ರೊ. ಶರಣಬಸಪ್ಪ ಬಿಳಿಯಲೆ ನಿರೂಪಿಸಿದರು. ಪ್ರಾಧ್ಯಾಪಕರಾದ ಪ್ರಕಾಶ ಬಳ್ಳಾರಿ, ಡಾ. ನಾಗರಾಜ ದಂಡೋತಿ, ಮಹೇಶ ಬಿರಾದಾರ, ಡಾ. ಶಶಿಕಾಂತ ಉಮ್ಮಾಪುರೆ, ಡಾ. ಸುಂದರ ಮೇಟಿ, ಮಂಜುನಾಥ ಗಾಳಿ, ಸಿಬ್ಬಂಧಿಗಳಾದ ಮಂಜುನಾಥ ಹಳ್ಳಿಕೇರಿ, ಬರವರಾಜ ಗುಡ್ಲಾನೂರ್, ನಾಗರಾಜ ಹೊಸಳ್ಳಿ, ವಿವಿಧ ಮಹಾವಿದ್ಯಾಲಯದ ಕ್ರೀಡಾಪಟುಗಳು ಭಾಗವಹಿಸಿದ್ದರು. 19 ತಂಡ (ಪುರುಷ-12, ಮಹಿಳೆ-07) ಭಾಗವಹಿಸಿದ್ದವು