ತಾಳಿಕೋಟಿ

ಡಾ.ಪ್ರಭುಗೌಡರ ಸೇವೆ ಶ್ಲಾಘನೀಯ: ಪಡೇಕನೂರ ಶ್ರೀ

ಡಾ.ಪ್ರಭುಗೌಡರ ಸೇವೆ ಶ್ಲಾಘನೀಯ: ಪಡೇಕನೂರ ಶ್ರೀ

ತಾಳಿಕೋಟಿ: ಸಾವಿರಾರು ಅಂಧರ ಬಾಳಿಗೆ ಬೆಳಕಾಗಿರುವ ಖ್ಯಾತ ನೇತ್ರ ತಜ್ಞ ಹಾಗೂ ಹೃದಯ ಶ್ರೀಮಂತಿಕೆಯಿಂದ ಬಡವರ ನಿಸ್ವಾರ್ಥ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಡಾ. ಪ್ರಭುಗೌಡ ಲಿಂಗದಳ್ಳಿ (ಚಬನೂರ) ಅವರ ಸೇವೆ ಶ್ಲಾಘನೀಯ ಹಾಗು ಅನನ್ಯವಾಗಿದೆ ಎಂದು ಪಡೇಕನೂರ ಸಂಸ್ಥಾನ ವಿರಕ್ತ ಮಠದ ಪರಮ ಪೂಜ್ಯ ಮಲ್ಲಿಕಾರ್ಜುನ  ಮಹಾಸ್ವಾಮಿಗಳು ಹೇಳಿದರು.

ಇತ್ತೀಚೆಗೆ ತಾಲೂಕಿನ ಬಳಗಾನೂರ ಗ್ರಾಮದಲ್ಲಿ ಹಜರತ್ ನಬಿಶ್ಯಾವಲಿ ದರ್ಗಾ  ಉರುಸು ಹಾಗೂ 3ನೇಯ ಮಾನವ ಏಕತಾ ಶಾಂತಿ ಸಮ್ಮೇಳನದಲ್ಲಿ ಉತ್ಸವ ಸಮೀತಿಯ ವತಿಯಿಂದ ಹಮ್ಮಿಕೊಂಡ ಸನ್ಮಾನ ಸಮಾರಂಭದಲ್ಲಿ ಶ್ರೀಗಳು ಅವರನ್ನು ಸನ್ಮಾನಿಸಿ ಮಾತನಾಡಿದರು.

ಸಮಾಜಸೇವಕ ಶಾಂತಗೌಡ ಪಾಟೀಲ (ನಡಹಳ್ಳಿ) ಅವರು ಮಾತನಾಡಿ ಡಾ. ಪ್ರಭುಗೌಡರಂಥಹ ನಿಸ್ವಾರ್ಥ ಸಮಾಜಸೇವಕರು ರಾಜಕೀಯಕ್ಕೆ ಬರಬೇಕಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಪರಮಪೂಜ್ಯ ದಾವಲಮಲಿಕ್ ಅಜ್ಜನವರು, ಡಾ. ಸೈಯದ್ ಫೈರೋಜ ಹುಸೇನಿ, ಮೌಲಾನಾ ಜಾವೀದ ಮುಲ್ಲಾ, ಗಣ್ಯರಾದ ಕಾಸೀಮಪಟೇಲ ಪಾಟೀಲ, ಬಿ.ಎಸ್. ಇಸಾಂಪೂರ, ನಿಂಗನಗೌಡ ಪಾಟೀಲ, ಮಲ್ಲಣ್ಣ ದೊರ್ನಳ್ಳಿ, ಮಕ್ತುಮಸಾಬ ವಾಲಿಕಾರ, ಅಧ್ಯಕ್ಷ ಅಲ್ಲಾಭಕ್ಷ ಬಿದರಿ, ಶಿಕ್ಷಕ ರಮಜಾನ ವಾಲಿಕಾರ ಗ್ರಾಪಂ. ಸದಸ್ಯ ಚಂದ್ರಶೇಖರ ಅಲದಿ ಇದ್ದರು 

ಸುದ್ದಿ ಓದಿ