ಮುಂದಗೋಡ

ಸಿಬ್ಬಂದಿಗೆ ಹಣ ಕೊಡದಿರಿ: ತಹಶೀಲ್ದಾರ ಶಂಕರ ಗೌಡಿ

ಸಿಬ್ಬಂದಿಗೆ ಹಣ ಕೊಡದಿರಿ: ತಹಶೀಲ್ದಾರ ಶಂಕರ ಗೌಡಿ

ಸಿಬ್ಬಂದಿಗೆ ಹಣ ಕೊಡದಿರಿ: ತಹಶೀಲ್ದಾರ ಶಂಕರ ಗೌಡಿ 

ಮುಂಡಗೋಡ 30: ಮುಂಡಗೋಡ ತಾಲೂಕಿನ ಫಾರ್ಮ್‌ 57ರಲ್ಲಿ ಅತಿಕ್ರಮಣ ಜಮೀನನ್ನು ಸಕ್ರಮ ಮಾಡಲು ಮತ್ತು ಭೂಕಂದಾಯ ಕಾಯ್ದೆ 94ಸಿ ಪ್ರಕಾರ ಮನೆ ಜಾಗ ಸಕ್ರಮ ಮಾಡಲು ಅರ್ಜಿ ಸಲ್ಲಿಸಿದ್ದರೆ  ಹಾಗೂ  ಕಂದಾಯ ಇಲಾಖೆಯ, ತಹಶೀಲ್ದಾರ್ ಕಚೇರಿಯ ಯಾವುದೇ ಸಿಬ್ಬಂದಿಗೆ ಯಾವುದೇ ರೀತಿಯ ಹಣ ಕೊಡಬಾರದು ಎಂದು ತಾಲೂಕಿನ ದಂಢಾದಿಕಾರಿ ತಹಶೀಲ್ದಾರ ಶಂಕರ ಗೌಡಿ. ತಿಳಿಸಿದ್ದಾರೆ.    

ಕಂದಾಯ ಇಲಾಖೆಯ ಯಾವುದೇ ಕೆಲಸಗಳಿಗೆ ಅರ್ಜಿ ಸಲ್ಲಿಸಿದ್ದರೂ, ಯಾರಿಗೂ ಹಣ ಕೊಡುವ ಅಗತ್ಯವಿರುವುದಿಲ್ಲ. ಈ ಅರ್ಜಿಗಳಿಗೆ ಯಾವುದೇ ಶುಲ್ಕ ಇರುವದಿಲ್ಲ. ಎಂದು  ತಹಶೀಲ್ದಾರ್ ಅವರ ಲಿಖಿತ ಆದೇಶದಲ್ಲಿ ತಿಳಿಸಿದ ಮತ್ತು ಸರ್ಕಾರದಿಂದ ನಿಗದಿಪಡಿಸಿದ ಶುಲ್ಕಗಳು ಮಾತ್ರ ಅನ್ವಯಿಸುತ್ತವೆ. ಹಾಗೂ ಹಣಕ್ಕೆ ಬೇಡಿಕೆ ಇಡುವ ಸಿಬ್ಬಂದಿಗಳಿಗೆ ಗಮನಕ್ಕೆ ತರಬಹುದು ಎಂದು ತಾಲೂಕಿನ ದಂಡಾಧಿಕಾರಿ ತಹಶೀಲ್ದಾರ ಶಂಕರ ಗೌಡಿ. ತಿಳಿಸಿದ್ದಾರೆ. 


ಸುದ್ದಿ ಓದಿ