ಚೆಸ್ ಆಟದ ಸ್ಪರ್ಧೆಯಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆ
ತಾಲೂಕಿನ ಹಿರಿಮೆ ಇಮ್ಮಡಿಗೊಳಿಸಿದ ಸುಳ್ಳಳ್ಳಿ ವಿದ್ಯಾರ್ಥಿಗಳು
ಶಶಿಧರ ಕುಲಕರ್ಣಿ
ಮುಂಡಗೋಡ ತುಂಬಾ ಕ್ಲಿಷ್ಟಕರವಾದ ಚತುರತೆಯ ಚೆಸ್ ಆಟವನ್ನು ಮನಸ್ಸಿಟ್ಟು ಕಲಿತುಕೊಂಡು ತಾಲೂಕಿನ ಸುಳ್ಳಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾಥರ್ಿಗಳು ಸತತ 4ನೇ ವರ್ಷ ಚೆಸ್ ಆಟದಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿ ಶಾಲೆಯ ಮತ್ತು ತಾಲೂಕಿನ ಹಿರಿಮೆ ಇಮ್ಮಡಿಗೊಳಿಸಿದ್ದಾರೆ.
ಪುಟ್ಟ ಗ್ರಾಮದ ಶಾಲೆಯಲ್ಲಿ 1ರಿಂದ7ನೇ ತರಗತಿವರೆಗೆ ಇರುವ ವಿದ್ಯಾರ್ಥಿಗಳ ಒಟ್ಟು ಸಂಖ್ಯೆ ಕೇವಲ 35 ಮಾತ್ರ. ವಿದ್ಯಾರ್ಥಿಗಳ ಚೆಸ್ ಕಲಿಕೆಗೆ ಬುನಾದಿಯಿಂದ ಹಿಡಿದು ಹಂತದ ನಿಯಮಗಳ ಬಗ್ಗೆ ಮಾರ್ಗದರ್ಶನ ನೀಡಿದವರು ಶಾಲೆಯ ಶಿಕ್ಷಕರು. ಶಾಲೆಯ ಊಟದ ವಿರಾಮದ ಸಮಯದಲ್ಲಿ ಹಾಗೂ ಸಂಜೆ ಶಾಲಾ ಅವಧಿಯ ನಂತರ ವಿದ್ಯಾರ್ಥಿಗಳಿಗೆ ಚೆಸ್ ಅಭ್ಯಾಸ ಮಾಡಿಸಲಾಗುತ್ತದೆ. ಸೆ.8ರಂದು ಪಾಳಾ ಶಾಲೆಯಲ್ಲಿ ನಡೆದ ತಾಲೂಕು ಮಟ್ಟದ ಚೆಸ್ ಆಟದ ಸ್ಪರ್ಧೆಯಲ್ಲಿ ಶಾಲೆಯ 7ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಇದೇ ಶಾಲೆಯಲ್ಲಿ ಕಲಿತ ಪ್ರೌಢಶಾಲಾ ವಿಭಾಗದ 7 ವಿದ್ಯಾರ್ಥಿಗಳು ಹಾಗೂ ಪಿಯುಸಿ ವಿಭಾಗದ ಒಬ್ಬ ವಿದ್ಯಾರ್ಥಿ ಸೇರಿ ಒಟ್ಟು 15 ವಿದ್ಯಾರ್ಥಿಗಳು ಈ ವರ್ಷ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದು ಈಗಾಗಲೇ ಎರಡು ವರ್ಷ ಚೆಸ್ ಆಟದಲ್ಲಿ ರಾಜ್ಯಮಟ್ಟದಲ್ಲಿ ವಿದ್ಯಾರ್ಥಿಗಳು ಸ್ಪರ್ಧೆಸಿದ್ದಾರೆ.
14ವರ್ಷದೊಳಗಿನವರ ಬಾಲಕರ ವಿಭಾಗ:ವಿನಾಯಕ ಪಾಟೀಲ ಪ್ರಥಮ, ವಿಕಾಸ ಕವಲಗಿ ದ್ವಿತೀಯ, ಮಹಮ್ಮದ್ ಸಲೀಂ ಸುಳ್ಳಳ್ಳಿ ಚತುರ್ಥ.
14ವರ್ಷದೊಳಗಿನವರ ಬಾಲಕಿಯರ ವಿಭಾಗ:ಭವ್ಯ ಅಮ್ಮಿನಬಾವಿ ಪ್ರಥಮ, ರಿಜಾಅಂಜುಮ್ ಹನಕನಳ್ಳಿ ದ್ವಿತೀಯ, ಸುನಿತಾ ಯಮಕರ ತೃತೀಯ, ಅರ್ಪಿತಾ ಹುಡೇಲಕೊಪ್ಪ ಚತುರ್ಥ.
ಅಂದಲಗಿ ಸರ್ಕಾರಿ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಸುಳ್ಳಳ್ಳಿ ಗ್ರಾಮದ ವಿದ್ಯಾಥರ್ಿಗಳು(ಬಾಲಕರ ವಿಭಾಗ):ಲೋಕೇಶ್ ಗೌಡ ದ್ವಿತೀಯ, ಇಸ್ಮಾಯಿಲ್ ಮಮ್ದುನವರ ತೃತೀಯ, ಲಕ್ಕು ಯಮಕರ ಚತುರ್ಥ.
ಬಾಲಕಿಯರ ವಿಭಾಗ:ಆಫ್ರೀನ್ ಮಮ್ದುನವರ ಪ್ರಥಮ, ನಿಖಿತಾ ಹೆಗ್ಗಾದಿ ದ್ವಿತೀಯ, ಸುವರ್ಣ ಮಿರಾಶಿ ತೃತೀಯ.
ಕರಗಿನಕೊಪ್ಪದ ಮೂರಾಜೆ ವಸತಿ ಶಾಲೆ:ಮಹೇಂದ್ರ ಗೌಡ ಪಂಚಮ ಸ್ಥಾನ.
ಮುಂಡಗೋಡ ಸರಕಾರಿ ಪದವಿ ಪೂರ್ವ ಕಾಲೇಜ್:ನಾಗರಾಜ ಮಾದರ ದ್ವಿತೀಯ ಸ್ಥಾನ ಪಡೆದಿದ್ದಾರೆ.
ಪ್ರತಿ ವರ್ಷ ಚೆಸ್ ಆಟದಲ್ಲಿ ಸಾಧನೆ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಎಸ್ಡಿಎಂಸಿ, ಶಾಲೆಯ ಮುಖ್ಯ ಶಿಕ್ಷಕರು, ಶಿಕ್ಷಕರು, ಗ್ರಾಮಸ್ಥರು, ಅಂದಲಗಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರು, ಶಿಕ್ಷಕರು ಅಭಿನಂದಿಸಿದ್ದಾರೆ ಹಾಗೂ ಜಿಲ್ಲಾಮಟ್ಟದಲ್ಲಿಯೂ ಉತ್ತಮ ಸಾಧನೆ ಗೈಯಲಿ ಎಂದು ಹಾರೈಸಿದ್ದಾರೆ